Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

24 July 2018

ಶಾಲಾ ತರಕಾರಿ ತೋಟಕ್ಕೆ ಕೃಷಿಭವನದ ಅಧಿಕಾರಿಗಳಿಂದ ಭೇಟಿನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ನಿರ್ಮಿಸಿರುವ  ಶಾಲಾ ತರಕಾರಿ ತೋಟಕ್ಕೆ ಬದಿಯಡ್ಕ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಉಣ್ಣಿ ಕೃಷ್ಣನ್ ಮತ್ತು ರಾಧಾಕೃಷ್ಣನ್ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳಿಗೆ ಬಾಧಿಸುವ ರೋಗಗಳ ಬಗ್ಗೆ ಮತ್ತು ಅದನ್ನು ನಿವಾರಿಸುವ ಕುರಿತಾಗಿ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಪಿ ಯಸ್,  ಅವಿನಾಶ ಕಾರಂತ.ಯಂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ.ಯಚ್ ಸ್ವಾಗತಿಸಿ ಶಿಕ್ಷಕರಾದ ಕೃಷ್ಣಪ್ರಸಾದ.ಟಿ ವಂದಿಸಿದರು.


No comments:

Post a Comment