Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

28 May 2009

ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಮ್ಮ ಬ್ಲಾಗ್ ಕುರಿತ ಬರಹ

ರಜಾ ಕಾಲದ ಕೊನೆ ದಿನಗಳನ್ನು ಎಣಿಸಲು ಆರಂಭಿಸಿದ್ದೇವೆ. ಈ ಮಧ್ಯೆ ಮಂಗಳೂರು ಆವೃತ್ತಿಯ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಿಟಿ ಹೆರಾಲ್ಡ್ ಪುರವಣಿಯಲ್ಲಿ ನಮ್ಮ ಬ್ಲಾಗ್ ಕುರಿತಾದ ಪ್ರಶಂಸಾತ್ಮಕ ಬರಹ ಪ್ರಕಟವಾಗಿದೆ. ಶನಿವಾರದ ಪುರವಣಿಯಲ್ಲಿ ಸಿಬಂತಿ ಪದ್ಮನಾಭ ಬರೆದ ಈ ಬರಹ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೇನು, ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗಲಿದೆ. ಬೇಸಿಗೆಯ ಬೇಗೆಯಲ್ಲಿ ಮಲಗಿದ್ದ ಪ್ರತಿಭೆಗಳನ್ನು ಹೊತ್ತು ನಿಮ್ಮ ಮುಂದೆ ಸದ್ಯದಲ್ಲೇ ಪ್ರತ್ಯಕ್ಷವಾಗುತ್ತೇವೆ ಎಂಬ ವಿಶ್ವಾಸವಿದೆ.

08 May 2009

ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ - ೯೮%

ಕೇರಳ ರಾಜ್ಯ ವಿದ್ಯಾಭ್ಯಾಸ ಇಲಾಖೆ ಕಳೆದ ವರ್ಷ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಇಂದು ಬಂದಿದೆ. ನಮ್ಮ ಶಾಲಾ ವಿದ್ಯಾರ್ಥಿಗಳು ೯೮% ಫಲಿತಾಂಶ ತಂದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಮೊತ್ತಮೊದಲ ಬಾರಿಗೆ ೯ ಮಂದಿ ವಿದ್ಯಾರ್ಥಿಗಳು ಎಲ್ಲಾ ೧೦ ವಿಷಯಗಳಲ್ಲೂ ಎ-ಪ್ಲಸ್ ಗ್ರೇಡ್ ಪಡೆದು ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ. ಈ ಗೌರವದಲ್ಲಿ ಪಾಲುದಾರರಾದ ಅದಿತಿದೇವಿ.ಎಸ್, ಅನುಪಮಾ ಪಿ.ಎಸ್, ಧನ್ಯಶ್ರೀ.ಎಚ್, ನಮೃತಾ ಎಂ.ಎಸ್, ಪಾವನಾ. ಇ, ವೈಶಾಲಿ.ಕೆ.ಎನ್, ನರಸಿಂಹ ಕಿಶನ್. ಪಿ, ನವೀನಕೃಷ್ಣ.ಕೆ, ರಾಮರಂಜನ್.ಕೆ ಇವರಿಗೆ ನಮ್ಮ ಅನಂತ ಶುಭಾಶಯಗಳು. ಕಾರಣಾಂತರಗಳಿಂದ ಒಬ್ಬಳು ಪರಿಕ್ಷೆ ಬರೆದಿರಲಿಲ್ಲ, ಇಬ್ಬರು ಇಂಗ್ಲೀಷ್ ಪರಿಕ್ಷೆಯಲ್ಲಿ ಎಡವಿದ್ದಾರೆ. ಶಾಲಾ ಸರಾಸರಿಯು ರಾಜ್ಯ ಸರಾಸರಿಗಿಂತ ಹೆಚ್ಚಿದೆ ಎನ್ನುವುದು ಗಮನಿಸಬಹುದಾದ ಇನ್ನೊಂದು ಅಂಶ.

06 May 2009

ಖಂಡಿಗೆ ಶ್ರೀಕೃಷ್ಣ ಭಟ್, ಕೇರ - ಅಸ್ತಂಗತ

ನಮ್ಮ ಶಾಲಾ ಆಡಳಿತ ಮಂಡಳಿಯ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಖಂಡಿಗೆ ಮನೆತನದ ಗೌರವಾನ್ವಿತರಾದ ಖಂಡಿಗೆ ಶ್ರೀಕೃಷ್ಣ ಭಟ್, ಕೇರ ೦೪.೦೫.೨೦೦೯ ಸೋಮವಾರ ಸಂಜೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜೀವನದ ಕೊನೆಯ ಕ್ಷಣದ ತನಕವೂ ಅವರು ತಮ್ಮ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿದ್ದರು. ಅಡಿಕೆ ಪತ್ರಿಕೆಯ ಪ್ರಕಾಶಕರಾಗಿ, ಪ್ರತಿಷ್ಟಿತ ‘ಕ್ಯಾಂಪ್ಕೊ’ದ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಸಾಮಾಜಿಕ ಸೇವೆಗಳು ಅನೇಕ. ನಮ್ಮ ಬ್ಲಾಗ್ ಲೋಕಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಚೇತನಕ್ಕೆ ನಾವು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

05 May 2009

ಚಿತ್ರ ೧೩ - ಆಧಿಶ್ ಎನ್. ಕೆ

ರಜೆ ಒಂದು ತಿಂಗಳು ಕಳೆದಿದೆ. ಕಾಂಗರೂ ಒಂದು ಹೊರಟು ತಯಾರಾಗಿದೆ. ಅಂದ ಹಾಗೆ ನಮ್ಮ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಕುಮಾರಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ, ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತುಂಬಾ ವಿಶ್ರಾಂತಿಯ ನಡುವೆ ನಮ್ಮ ಬ್ಲಾಗ್ ಅಪ್‌ಡೇಟ್ ಆಗುತ್ತಿದೆ.