Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

15 May 2026

ನೀರ್ಚಾಲು ಶಾಲೆಗೆ 100% ಫಲಿತಾಂಶ

 

2025 - 26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ  184 ಮಂದಿ ಪರೀಕ್ಷೆ ಬರೆದಿದ್ದು ಎಲ್ಲರೂ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ 100% ಫಲಿತಾಂಶವನ್ನು ತಂದಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 12 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅನಘ ಲಕ್ಷ್ಮಿ, ಅನನ್ಯ ಜಿ. ಭಟ್ ಕೆ., ಅಂಜನ ಎಸ್.ಆರ್., ಅವನಿ ಶೆಟ್ಟಿ, ಭೂಮಿಕ, ಜೆನಿಶ ಕ್ರಾಸ್ತಾ, ಪೂರ್ವಿ ಜೋಶಿ, ಸಾಹಿತ್ಯ ವಿ. ರೈ, ಶ್ರದ್ಧ ಕೆ.ಪಿ., ತಿಶ, ತೃಷಾ ಜಿ.ಆರ್., ತೃಷಾ ದಾಸ್ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.