“ಶ್ರೀಕೃಷ್ಣ ಜಗತ್ತಿಗೆ ನೀಡಿದ ಮಹಾನ್ ಸಂಪತ್ತು ಭಗವದ್ಗೀತೆ. ಮನಸ್ಸು ತಲ್ಲಣಗೊಂಡು ಸಂಕಷ್ಟದಲ್ಲಿದ್ದಾಗ ಭಗವದ್ಗೀತೆಯ ಸಾಲುಗಳು ನಮಗೆ ಸ್ಫೂರ್ತಿ ನೀಡುತ್ತವೆ. ಶ್ರೀಕೃಷ್ಣ ಮತ್ತು ಭಗವದ್ಗೀತೆಯಂತೆ ಜೀವನ ಸಂಕಷ್ಟಗಳನ್ನು ನಿವಾರಿಸುವ ವಿಚಾರಗಳನ್ನು ನಾವು ಯಾವತ್ತೂ ನೆನಪಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ವಿದ್ಯಾಲಯಗಳಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವದ ಆಚರಣೆ ಸ್ತುತ್ಯರ್ಹ ಕಾರ್ಯ" ಎಂದು ಪಾಣಾಜೆ ಸುಬೋಧ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಹೇಳಿದರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬೊಳುಂಬು ಸುಬ್ರಾಯ ಭಟ್ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಎಂ.ವಿ.ಭಟ್ ಮಧುರಂಗಾನ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿ ಮುಖಂಡ ಮಿಥುನ್ ಪಿ.ಎಸ್ ವರದಿ ವಾಚಿಸಿದರು. ಹಿರಿಯ ಅಧ್ಯಾಪಕರಾದ ಸುಬ್ರಹ್ಮಣ್ಯ ವಿ.ಭಟ್ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲೆಯ ಪೂರ್ವ ವಿದ್ಯಾರ್ಥಿ ಸರಳಿ ಈಶ್ವರ ಪ್ರಕಾಶ್ ಮತ್ತು ಬಳಗದವರಿಂದ ‘ಸಂಗೀತ ಸ್ವರ ಸಿಂಚನ’ ಕಾರ್ಯಕ್ರಮ ಜರಗಿತು.
ಶುಭಾಶಯ ನಿಮಗೆಲ್ಲ
ReplyDeleteಸರ್,
ReplyDeleteಮಕ್ಕಳು ತುಂಬಾ ಮುದ್ದಾಗಿ ಕಾಣತಿದ್ದಾರೆ!
ಜೈ ಶ್ರೀ ಕೃಷ್ಣ!