Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

20 September 2011

ಕವನ - ಪ್ರಕೃತಿಯ ಸೌಂದರ್ಯ

-- ಆಶಾಲತಾ. ಪಿ

ಹತ್ತನೇ ತರಗತಿ
ಚಿಲಿಪಿಲಿ ಚಿಲಿಪಿಲಿ ಹಕ್ಕಿಗಳಿಂಚರ
ಕೇಳಲು ಬಲು ಮಧುರ


ಘಮಘಮಿಸುವ ಪರಿಮಳದಲಿ

ಅರಳುವ ಪುಷ್ಪಗಳು

ಬಾನಿನಲಿ ಸ್ವಚ್ಛಂದ ಹಾರಾಡುವ

ಬೆಳ್ಳಕ್ಕಿಗಳ ಗುಂಪುಗಳು

ತಿಳಿಯಾದ ಜಲಧಾರೆ ಹರಿಯುತಿರೆ
ಕಲಕಲ ನಾದದಲಿ
ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವವು
ಮಕರಂದವ ಹೀರುತಲಿ


ಆಕಾಶವನು ಮುತ್ತಿಕೊಂಡ ಕಾರ್ಮೋಡಗಳು

ಮಳೆಯನು ಸುರಿಸಲು ಕಾಯುತಿವೆ

ತಂಗಾಳಿಯ ಬೀಸುವ ಪರಿಸರವು

ನಮಗೆ ನೆಮ್ಮದಿಯ ನೀಡುತಿವೆ

ಈ ನಮ್ಮ ಪ್ರಕೃತಿ ಎಷ್ಟೊಂದು ಸುಂದರ
ಇದನು ಸವಿದಿಹನು ಆ ಬೆಳ್ಳಿಯ ಚಂದಿರ

1 comment: