Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 13 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 January 2019

ವರ್ಧಂತ್ಯುತ್ಸವ 2019“ವಿದ್ಯಾರ್ಥಿಗಳು ಎಳವೆಯಲ್ಲಿಯೇ ಮೊಬೈಲುಗಳ ದಾಸರಾಗಿ ತಮ್ಮ ಗುರಿಯಿಂದ ವಿಚಲಿತರಾಗುತ್ತಿರುವುದು ಹೊಸ ದುರಂತ. ಕಂಪ್ಯೂಟರು ಮತ್ತು ಮೊಬೈಲುಗಳು ಆಧುನಿಕ ಜಗತ್ತಿನ ಕೊಡುಗೆ. ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿದರೆ ಮಾತ್ರ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯ. ಈ ಗುರಿಯಿಂದ ವಿಚಲಿತರಾದರೆ ಭವಿಷ್ಯದ ಹಾದಿ ದುರ್ಗಮವಾಗುವುದು. ಆದ್ದರಿಂದ ಉತ್ತಮ ಪ್ರಜೆಗಳಾಗಿ ಬೆಳಗಬೇಕಾದ ವಿದ್ಯಾರ್ಥಿಗಳು ನವ ಸಂವಹನಾ ಮಾಧ್ಯಮಗಳು ಉಂಟುಮಾಡಬಹುದಾದ ಅಪಾಯಗಳ ಬಗ್ಗೆ ಜಾಗೃತರಾಗಿ ತಮ್ಮ ಅಧ್ಯಯನದ ಕಡೆಗೆ ಏಕಾಗ್ರಚಿತ್ತರಾಗಬೇಕು” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವರ್ಧಂತ್ಯುತ್ಸವದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಪುಷ್ಪಲತಾ ಮತ್ತು ಶ್ರೀಮತಿ ಪಾವನಾ ಮಹೇಶ್ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಬಹುಮಾನಗಳನ್ನು ವಿತರಿಸಿದರು.

ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ್.ಎಂ.ಕೆ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

1 comment:

  1. Casinos Near Casinos Near Casinos, Atlantic City (NJ)
    1 논산 출장샵 Mohegan Sun Blvd. Uncasville, CT 하랑 도메인 06382. Get Directions. (860) 사천 출장샵 862-8877. Call 안성 출장마사지 Now · More 충청북도 출장안마 Info. Hours, Accepts Credit Cards, Attire, Wi-Fi.

    ReplyDelete