ಯು.ಪಿ.ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ಇಂದು ನಮ್ಮ ಶಾಲೆಯಲ್ಲಿ ಹಿರೋಷಿಮಾ ಮತ್ತು ನಾಗಸಾಕಿ ದಿನಾಚಾರಣೆ ಜರಗಿತು. ಈ ಸಂದರ್ಭದಲ್ಲಿ ಅಣು ಬಾಂಬ್ ದಾಳಿ, ಪರಿಣಾಮಕ್ಕೆ ಸಂಬಂಧಿಸಿದ ವೀಡಿಯೋ ಪ್ರದರ್ಶನವೂ ನಡೆಯಿತು. ಯುದ್ಧ ವಿರೋಧಿ ಪೋಸ್ಟರ್ ರಚನೆಯು ಮಕ್ಕಳಿಗೆ ಯುದ್ಢದ ಭೀಕರತೆಯನ್ನು ಮನವರಿಕೆ ಮಾಡಿಕೊಟ್ಟಿತು. ಹೈಸ್ಕೂಲು ವಿಭಾಗದ ಸಮಾಜ ವಿಜ್ಞಾನ ಅಧ್ಯಾಪಕ ಶಿವಪ್ರಕಾಶ ಯಂ.ಕೆ ಹಿರೋಷಿಮಾ,ನಾಗಸಾಕಿ ದುರಂತದ ದುಷ್ಪರಿಣಾಮದ ಕುರಿತು ಭಾಷಣ ಮಾಡಿದರು. ಪ್ಲಾಸಿ ಮತ್ತು ಬಾಕ್ಸರ್ ಕದನದ ಬಗ್ಗೆ ಕಿರು ನಾಟಕವನ್ನು 7 ಎ ತರಗತಿಯ ಹುಡುಗರು ಪ್ರದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ಅಧ್ಯಕ್ಷತೆ ವಹಿಸಿದರು. ‘ಯುದ್ಧ ಯಾಕೆ ಬೇಡ?’ ಎಂಬ ವಿಷಯದ ಬಗ್ಗೆ 7 ಎ ತರಗತಿಯ ಕಾರ್ತಿಕ್.ಕೆ.ಎಸ್. ಭಾಷಣ ಮಾಡಿದನು. ದೀಕ್ಷಿತ್ ಸ್ವಾಗತಿಸಿ ಕೃಪಾನಿಧಿ ವಂದಿಸಿದರು. ಗಣೇಶ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment