ನಮ್ಮ ಶಾಲೆಯಲ್ಲಿ 2017 ಒಕ್ಟೋಬರ್ 31 ರಿಂದ ನವೆಂಬರ್ 4 ರ ತನಕ ಜರಗಲಿರುವ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಖರ್ಚು ವೆಚ್ಚಗಳಿಗೆ ಪೂರಕವಾಗಿ ಧನಸಂಗ್ರಹಕ್ಕೆ ಇಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಗೃಹದಲ್ಲಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಗ್ರಾಮ ಪಂಚಾಯತ್ ವ್ಯವಸ್ಥೆಯ ಮೂಲಕ ನೀರ್ಚಾಲು ಶಾಲಾ ವಿದ್ಯಾರ್ಥಿನಿಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ.ಕೆ, ಕಲೋತ್ಸವ ಸಂಘಟಕ ಸಮಿತಿಯ ಅಧ್ಯಕ್ಷ ಎಸ್.ನಾರಾಯಣ, ಪ್ರಧಾನ ಸಂಚಾಲಕ ವೆಂಕಟರಾಜ ಸಿ.ಎಚ್, ಆರ್ಥಿಕ ಸಮಿತಿ ಸಂಚಾಲಕ ವಿಶ್ವನಾಥ ಭಟ್, ಚಪ್ಪರ ಸಮಿತಿ ಸಂಚಾಲಕ ಕೃಷ್ಣ ಪ್ರಸಾದ.ಟಿ ಮತ್ತು ಧ್ವನಿವರ್ಧಕ ಸಮಿತಿ ಸಂಚಾಲಕ ಅವಿನಾಶ ಕಾರಂತ ಉಪಸ್ಥಿತರಿದ್ದರು.
No comments:
Post a Comment