“ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ
ವಿದ್ಯಾಸಂಸ್ಥೆಗಳು ಭದ್ರ ಬುನಾದಿಯನ್ನು ಹಾಕಿಕೊಡುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು
ರಂಗಗಳಲ್ಲಿ ಮಿಂಚಲಿರುವ ಈ ಪುಟಾಣಿ ಪ್ರತಿಭೆಗಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು
ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ
ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ
ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಕಳೆದ ಕೆಲವಾರು ತಿಂಗಳಿನಿಂದ ಇಲ್ಲಿ ಪ್ರತ್ಯೇಕವಾಗಿ
ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಮಧುರ ಕನ್ನಡ ಯೋಜನೆಯ ಮೂಲಕ ಕನ್ನಡದಲ್ಲಿ ಹೆಚ್ಚಿನ
ಪ್ರಾವೀಣ್ಯವನ್ನು ಪಡೆಯಲಿರುವ ತರಬೇತಿಯನ್ನೂ ನೀಡಲಾಗಿದೆ. ಅದೇ ರೀತಿಯಲ್ಲಿ ವಿಜ್ಞಾನೋತ್ಸವವನ್ನೂ
ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಇದು ಮಕ್ಕಳಿಗೆ ವಿಜ್ಞಾನದ ಮೇಲಿನ ಆಸಕ್ತಿಯನ್ನು
ಹೆಚ್ಚಿಸಲಿದೆ.”
ಎಂದು ನಮ್ಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಅಭಿಪ್ರಾಯಪಟ್ಟರು.
ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ವಿಜ್ಞಾನೋತ್ಸವ
ಮತ್ತು ಮಧುರ ಕನ್ನಡ ಘೋಷಣೆ’ಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹಿರಿಯ ಶಿಕ್ಷಕಿ
ಸರಸ್ವತಿ.ಸಿ.ಎಚ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಶಿಕ್ಷಕಿ ಮಾಲತಿ.ಪಿ ಸ್ವಾಗತಿಸಿದರು.
ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ವಂದಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ಕಾರ್ಯಕ್ರಮವನ್ನು
ನಿರೂಪಿಸಿದರು. ಈ ಸಂದರ್ಭದಲ್ಲಿ ಏಳನೇ ತರಗತಿಯ ಕಾರ್ತಿಕ್.ಕೆ.ಎಸ್ “ಲಿಟಲ್ ಸೈಂಟಿಸ್ಟ್” ಆಗಿ
ಆಯ್ಕೆಯಾದನು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ
ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.
No comments:
Post a Comment