"ಉತ್ತಮ ವರದಿಗಾರನೊಬ್ಬನಿಗೆ ಭೂತ ಭವಿಷ್ಯ ವರ್ತಮಾನಗಳ ಕಲ್ಪನೆಯಿದ್ದು ವರದಿಗಾರಿಕೆಯಲ್ಲಿ ತನ್ನತನವನ್ನು ಬೆಳೆಸಿಕೊಂಡರೆ ಉಜ್ವಲಭವಿಷ್ಯ ಕಂಡುಕೊಳ್ಳಬಹುದು"ಎಂದು ವಿಜಯವಾಣಿ ಪತ್ರಿಕೆಯ ವರದಿಗಾರ ಪುರುಷೋತ್ತಮ ಭಟ್ ಪುದುಕೋಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಮಧ್ಯಾಹ್ನದ ಶಾಲಾ ಅವಧಿಯ ಸದುಪಯೋಗಕ್ಕಾಗಿ ಪ್ರಸಾರವಾಗುವ ‘ಮಹಾಜನವಾಣಿ’ ಎಂಬ ರೇಡಿಯೋ ಕಾರ್ಯಕ್ರಮದ ಸಮಾಪನ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ. ಯಚ್ ಹಾಗು ಹಿರಿಯ ಅಧ್ಯಾಪಿಕೆಯಾದ ಶ್ರೀಮತಿ ವಾಣಿ ಪಿ.ಯಸ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಹರ್ಷಿತ ಸ್ವಾಗತಿಸಿ ಕೃಪಾನಿಧಿ.ಕೆ ವಂದಿಸಿದರು. ವಿದ್ಯಾರ್ಥಿನಿಯರಾದ ಅದಿತಿ.ಕೆ ಮತ್ತು ಅನುಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಭಾಷಾ ಅಧ್ಯಾಪಕರಾದ ವಿಶ್ವನಾಥ ಭಟ್, ನಂದಕುಮಾರ, ಶ್ರೀಮತಿ ಅನ್ನಪೂರ್ಣ, ಶ್ರೀಮತಿ ಶೈಲಜಾ. ಎ, ಶ್ರೀಮತಿ ಗಾಯತ್ರಿ, ಶ್ರೀಮತಿ ಸುನಿತಾ ಮೊದಲಾದವರು ಮಕ್ಕಳನ್ನು ರೇಡಿಯೋ ಕಾರ್ಯಕ್ರಮಗಳಿಗೆ ತರಬೇತುಗೊಳಿಸಿ ಸಹಕರಿಸಿದರು.
25 February 2019
22 February 2019
ಸ್ಪಂದನ - 2019
“ಕಷ್ಟಗಳು ನಮ್ಮನ್ನು ಸದಾ ಕಾಡುತ್ತಿರುತ್ತವೆ. ಆದರೆ ನಾವು ಆ ಕಷ್ಟಗಳು ಎದುರಾದಾಗ ಧೃತಿಗೆಡಬಾರದು ಮತ್ತು ಇತರರ ಕಷ್ಟವನ್ನು ಅರಿತು ಅವರಿಗೆ ಸ್ಪಂದಿಸಿ ಸಹಾಯ ಮಾಡಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ’ಸ್ಪಂದನ’ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉದಾರ ದಾನಿಗಳ ಸಹಕಾರದಿಂದ ಅಶಕ್ತ ವಿದ್ಯಾರ್ಥಿಯ ಕುಟುಂಬಕ್ಕೆ ನೀಡಲು ಸಂಗ್ರಹಿಸಿದ ಮೊತ್ತವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಂಬಳೆ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯ ಕುಮಾರ್, ಮಂಜೇಶ್ವರ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ಶಿವಪ್ರಸಾದ್, ಕಾಸರಗೋಡು ಬುಲ್‌ಬುಲ್ ಹೆಡ್‌ಕ್ವಾರ್ಟರ್ಸ್ ನಾಯಕಿ ಶ್ರೀಮತಿ ಜ್ಯೋತಿಲಕ್ಷ್ಮಿ, ಮಂಜೇಶ್ವರ ಎಡಿಸಿ ಶ್ರೀಮತಿ ಶ್ರೀಕುಮಾರಿ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಶಾಲಾ ಸ್ಕೌಟ್ ಅಧ್ಯಾಪಕರಾದ ಶಿವರಂಜನ್.ಪಿ.ಆರ್, ಅವಿನಾಶ ಕಾರಂತ.ಎಂ, ಗೈಡ್ಸ್ ಶಿಕ್ಷಕಿ ಶ್ರೀಮತಿ ಅನ್ನಪೂರ್ಣ.ಎಸ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಾರ್ತಿಕ ಕೃಷ್ಣ.ಕೆ ಸ್ವಾಗತಿಸಿ, ಅದಿತಿ.ಕೆ ವಂದಿಸಿದರು. ಪ್ರಗತಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
13 February 2019
ಕಲಿಕೋತ್ಸವ
“ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹಲವಾರು ಹೊಸ ವಿಚಾರಗಳನ್ನು ಕಲಿತಿರುತ್ತಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಈ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಮಕ್ಕಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಯ ಸಾಧನೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮೂಡಿಬಂದಿದೆ.” ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ’ಕಲಿಕೋತ್ಸವ’ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಬಿ.ಆರ್.ಸಿ ಕೋರ್ಡಿನೇಟರ್ ಮಮತಾ.ಪಿ ಶುಭಹಾರೈಸಿದರು. ಅಧ್ಯಾಪಕರಾದ ಮಾಲತಿ.ಪಿ, ಜ್ಯೋತಿಲಕ್ಷ್ಮಿ.ಎಸ್, ಅವಿನಾಶ ಕಾರಂತ.ಎಂ, ಪೂರ್ಣಿಮ.ಟಿ, ರೋಹಿಣಿ.ಎಸ್, ಶೋಭಾ.ಕೆ.ಹಿರೇಮಠ, ನಂದಕುಮಾರ.ಕೆ, ಸಂತೋಷ್.ಪಿ.ಎಚ್. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಆರ್.ಸ್ವಾತಿ ಸ್ವಾಗತಿಸಿ, ಪ್ರಜಿತ್.ಪಿ.ರೈ ವಂದಿಸಿದರು. ವರದರಾಜ್. ಕೆ.ಆರ್ ಮತ್ತು ಆಕಾಶ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ, ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಗಣಿತ, ಸಮಾಜ, ವೃತ್ತಿ ಪರಿಚಯ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಮತ್ತು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ರಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
30 January 2019
ವರ್ಧಂತ್ಯುತ್ಸವ 2019
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಹಾಗೂ ಮಾತೃ ಸಂಘದ ಅಧ್ಯಕ್ಷೆಯರಾದ ಶ್ರೀಮತಿ ಪುಷ್ಪಲತಾ ಮತ್ತು ಶ್ರೀಮತಿ ಪಾವನಾ ಮಹೇಶ್ ಶುಭಹಾರೈಸಿದರು. ಈ ವರ್ಷ ಸೇವೆಯಿಂದ ನಿವೃತ್ತರಾಗಲಿರುವ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎಚ್.ಎನ್.ಮೀನಾಕ್ಷಿ ಇವರಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವ ಸಲ್ಲಿಸಲಾಯಿತು. ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಎ.ಕೃಷ್ಣಯ್ಯ ಬಹುಮಾನಗಳನ್ನು ವಿತರಿಸಿದರು.
ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್ ವರದಿ ವಾಚಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಿವಪ್ರಕಾಶ್.ಎಂ.ಕೆ ವಂದಿಸಿದರು. ಶಿಕ್ಷಕಿ ಶ್ರೀಮತಿ ಸರಿತಾ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
21 November 2018
19 November 2018
ವೃತ್ತಿ ಪರಿಚಯ ಮೇಳ_ಬಹುಮಾನ
ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಅಗಲ್ಪಾಡಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟ ಮತ್ತು ಚೆಮ್ನಾಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ, ವಿಜ್ಞಾನ ಮತ್ತು ಐ.ಟಿ ಮೇಳಗಳಲ್ಲಿ ಬಾಗವಹಿಸಿ ಬಹುಮಾನ ಪಡೆದಿದ್ದಾರೆ. ಇಲೆಕ್ಟ್ರಿಕಲ್ ವಯರಿಂಗ್ ವಿಭಾಗದಲ್ಲಿ ಒಂಬತ್ತನೇ ತರಗತಿಯ ಕೃಷ್ಣಪ್ರಸಾದ್ ಮತ್ತು ಬಲೆ ಹೆಣೆಯುವ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪ್ರಶಾಂತ್.ವಿ ಇವರು ‘ಎ’ ಗ್ರೇಡ್ ಪಡೆದು ಕಣ್ಣೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು...
05 November 2018
15 September 2018
ಹಿಂದಿ ದಿನಾಚರಣೆಯಲ್ಲಿ ಬಹುಮಾನ
ವರಲಕ್ಷ್ಮಿ. ಎನ್
ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ಹಿಂದಿ ದಿನಾಚರಣೆಯ ಅಂಗವಾಗಿ ಜರಗಿದ ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ವರಲಕ್ಷ್ಮಿ. ಎನ್. ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಶಂಕರಪ್ರಸಾದ ನಾಯ್ಕಾಪು ಮತ್ತು ಪದ್ಮಿನಿ ಇವರ ಪುತ್ರಿ.
ಸುದರ್ಶನ. ಕೆ
ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ಹಿಂದಿ ದಿನಾಚರಣೆಯ ಅಂಗವಾಗಿ ಜರಗಿದ ಹಿರಿಯ ಪ್ರಾಥಮಿಕ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸುದರ್ಶನ.ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈತ ಕುಂದಕಟ್ಟದ ಗಣೇಶ್ ಮತ್ತು ಸತ್ಯಶ್ರೀ ಇವರ ಪುತ್ರ.
10 September 2018
‘ಮಕ್ಕಳ ಧ್ವನಿ’ಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
ಉಡುಪಿ, ಕಾಸರಗೋಡು ಜಿಲ್ಲೆಯ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ ಸೆಪ್ಟೆಂಬರ್ 8 ಮತ್ತು 9 ರಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ 25ನೇ ವರ್ಷದ ‘ಮಕ್ಕಳ ಧ್ವನಿ’ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದ ಅಂಗವಾಗಿ ಜರಗಿದ ಕಥಾಗೋಷ್ಠಿಯಲ್ಲಿ ಶಾಲಾ ವಿದ್ಯಾರ್ಥಿಗಳಾದ ಅಚಲ.ಪಿ, ಚಿನ್ಮಯಿ ಭಾರದ್ವಾಜ್, ಅನುಪ್ರಿಯ, ಆಶ.ಕೆ ಮತ್ತು ಕವಿಗೋಷ್ಠಿಯಲ್ಲಿ ವೈಷ್ಣವಿ ಕೆ.ಎಸ್. ಹಾಗೂ ವರಲಕ್ಷ್ಮಿ ಎನ್. ಭಾಗವಹಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
18 August 2018
ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಸ್ವೀಕರಿಸಿದರು.
ಈ ಮೊತ್ತದಿಂದ ಖರೀದಿಸಲಾದ 50 ಕಿಲೋಗ್ರಾಂ ಅಕ್ಕಿ, 10 ಕಿಲೋಗ್ರಾಂ ಅವಲಕ್ಕಿ, 10 ಕಿಲೋಗ್ರಾಂ ಸಜ್ಜಿಗೆ,10 ಕಿಲೋಗ್ರಾಂ ಹಸರು ಬೇಳೆ, 15 ಕಿಲೋಗ್ರಾಂ ಸಕ್ಕರೆ, 10 ಕಿಲೋಗ್ರಾಂ ಕಡಲೆ, 10 ಕಿಲೋಗ್ರಾಂ ತೊಗರಿ ಬೇಳೆ, 4 ಕಿಲೋಗ್ರಾಂ ಚಾಹುಡಿ, 5 ಟೂಥ್ ಪೇಸ್ಟ್, ಇವುಗಳನ್ನು ಸ್ಕೌಟ್ ಗೈಡ್ ಜಿಲ್ಲಾ ಸಮಿತಿಯ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು. ನಮ್ಮ ಜೊತೆ ಕೈಜೋಡಿಸಿದವರಿಗೆ ಕೃತಜ್ಞತೆಗಳು...
02 August 2018
‘ಮಹಾಜನ ವಾಣಿ’ ಬಾನುಲಿ ಕೇಂದ್ರಕ್ಕೆ ಚಾಲನೆ
“ವಿದ್ಯಾರ್ಜನೆಯ ಹಂತದಲ್ಲಿಯೇ ಮಕ್ಕಳಿಗೆ ಭವಿಷ್ಯದ ಕಡೆಗೆ ಸ್ಪಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲವೂ ಬದ್ಧತೆಯೂ ಇರಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡರೆ ಜೀವನದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡಲು ಸಹಕಾರಿಯಾಗಬಹುದು. ಒಂದು ಕಾಲದಲ್ಲಿ ನಾಡಿನಾದ್ಯಂತ ಮಾಹಿತಿ ವಿನಿಮಯದ ಏಕೈಕ ಮಾಧ್ಯಮವಾಗಿದ್ದ ರೇಡಿಯೋ ಪ್ರಸ್ತುತ ಹೊಸರೂಪದಲ್ಲಿ ಪ್ರಸ್ತುತಿಗೊಳ್ಳುತ್ತಾ ನಗರ ಗ್ರಾಮೀಣ ಜನರಿಗೆ ಮನರಂಜನೆ ನೀಡುತ್ತಿದೆ. ಅಂತಹ ವ್ಯವಸ್ಥೆಯನ್ನು ತಮ್ಮ ಪರಿಧಿಯೊಳಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು” ಮಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕಿ ಡಾ|ಮಾಲತಿ ಆರ್. ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಮಹಾಜನ ವಾಣಿ’ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ ಪಿ.ಎಸ್ ಶುಭಹಾರೈಸಿದರು. ವಿದ್ಯಾರ್ಥಿನಿ ಶರಣ್ಯ.ಪಿ.ಜೆ ಪ್ರಾಸ್ತಾವಿಕ ಮಾತನ್ನಾಡಿದಳು. ವಿದ್ಯಾರ್ಥಿಗಳಾದ ಸಂಪತ್.ಕೆ ಸ್ವಾಗತಿಸಿ ವಿಲ್ಸನ್ ಶರುಣ್ ಕ್ರಾಸ್ತಾ ವಂದಿಸಿದರು. ವರಲಕ್ಷ್ಮಿ.ಎನ್ ಕಾರ್ಯಕ್ರಮ ನಿರೂಪಿಸಿದಳು.
27 July 2018
ಪ್ರಾಚೀನ ವಸ್ತು ಪ್ರದರ್ಶನ
ನಮ್ಮ ಶಾಲೆಗೆ ಹೊಸತಾಗಿ ಕಾಲಿರಿಸಿದ
ವಿದ್ಯಾರ್ಥಿಗಳು ಪ್ರಾಚೀನ ವಸ್ತುಗಳ ಕಡೆಗೆ
ಗಮನ ನೀಡಿ ಅದನ್ನು ಅಕ್ಕರೆಯಿಂದ
ಶಾಲೆಗೆ ಹೊತ್ತು ತಂದು ತರಗತಿಯಲ್ಲಿ
ಪ್ರದರ್ಶಿಸಿ ಸಂತಸ ಪಟ್ಟರು. ಆಧುನಿಕ
ಉಪಕರಣಗಳ ಉಪಯೋಗವೇ ಅಧಿಕವಾಗಿರುವ ಈ
ಕಾಲದಲ್ಲಿ ಹಳೆಯ ಕಾಲದ ನಾಣ್ಯ, ಅಳತೆ
ಪಾತ್ರೆಗಳು, ದೀಪ, ಮರದ ಪಾದುಕೆ, ಗಿಂಡಿ, ಸ್ಟ್ಯಾಂಪ್, ಮಡಕೆ
ಮುಂತಾದವುಗಳು ಮಕ್ಕಳಲ್ಲಿ ಕುತೂಹಲವನ್ನು ಹೆಚ್ಚಿಸಿದವು. ಶಿಕ್ಷಕಿ
ಜ್ಯೋತಿಲಕ್ಷ್ಮಿ.ಯಸ್ ಇವರ ನೇತೃತ್ವದಲ್ಲಿ
ನಡೆದ ವಸ್ತುಪ್ರದರ್ಶನ ಮಕ್ಕಳಲ್ಲಿ ಬಹಳ ಕಾಲ ನೆನಪಿನಲ್ಲಿ
ಉಳಿಯುವ ಕಾರ್ಯಕ್ರಮವಾಗಿತ್ತು.
24 July 2018
ಶಾಲಾ ತರಕಾರಿ ತೋಟಕ್ಕೆ ಕೃಷಿಭವನದ ಅಧಿಕಾರಿಗಳಿಂದ ಭೇಟಿ
ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕ ಕೋರಿಕ್ಕಾರು ಗೋವಿಂದ ಶರ್ಮರ ನೇತೃತ್ವದಲ್ಲಿ ಇಕೋ ಕ್ಲಬ್ ನ ಸದಸ್ಯರು ನಿರ್ಮಿಸಿರುವ ಶಾಲಾ ತರಕಾರಿ ತೋಟಕ್ಕೆ ಬದಿಯಡ್ಕ ಕೃಷಿಭವನದ ಸಹಾಯಕ ಕೃಷಿ ಅಧಿಕಾರಿಗಳಾದ ಉಣ್ಣಿ ಕೃಷ್ಣನ್ ಮತ್ತು ರಾಧಾಕೃಷ್ಣನ್ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ತರಕಾರಿ ಗಿಡಗಳಿಗೆ ಬಾಧಿಸುವ ರೋಗಗಳ ಬಗ್ಗೆ ಮತ್ತು ಅದನ್ನು ನಿವಾರಿಸುವ ಕುರಿತಾಗಿ ಸೂಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಪಿ ಯಸ್, ಅವಿನಾಶ ಕಾರಂತ.ಯಂ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟರಾಜ ಸಿ.ಯಚ್ ಸ್ವಾಗತಿಸಿ ಶಿಕ್ಷಕರಾದ ಕೃಷ್ಣಪ್ರಸಾದ.ಟಿ ವಂದಿಸಿದರು.
21 July 2018
20 July 2018
ಚುನಾವಣೆ 2018
ಶಾಲಾ ವಿದ್ಯಾರ್ಥಿ ಮಂಡಳಿಗೆ ನಾಯಕರ ಆಯ್ಕೆ ಪ್ರಕ್ರಿಯೆಯು ಪ್ರಜಾಪ್ರಭುತ್ವದ ವಿಧಾನದಂತೆಯೇ ಇಂದು ಜರಗಿತು. ಮೂರು ವಿವಿಧ ಕೇಂದ್ರಗಳಲ್ಲಿ ಇರಿಸಲಾದ ಮತಪೆಟ್ಟಿಗೆಗಳಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು. ಮತದಾನದ ಕೊನೆಗೆ ಮತ ಎಣಿಕೆ ನಡೆದು ಶಾಲಾ ವಿದ್ಯಾರ್ಥಿ ನಾಯಕನಾಗಿ ಕೃಷ್ಣಪ್ರಸಾದ್, ಉಪ ನಾಯಕಿಯಾಗಿ ಅದಿತಿ.ಕೆ ಮತ್ತು ಗಾಯತ್ರಿ ಭಿತ್ತಿ ಪತ್ರಿಕೆಯ ಸಂಚಾಲಕನಾಗಿ ಲಿಖಿತ್ ಇವರನ್ನು ವಿಜಯಿಗಳೆಂದು ಘೋಷಿಸಲಾಯಿತು. ವಿಜೇತರಿಗೆ ಶುಭಾಶಯಗಳು...
18 July 2018
ಏಳನೇ ತರಗತಿ ವಿದ್ಯಾರ್ಥಿಗಳಿಂದ CPCRI ಗೆ ಭೇಟಿ
ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮತ್ತು ನವೀನ ತಂತ್ರಜ್ಞಾನಗಳನ್ನು ಬಳಸಿ ಕೃಷಿ ವ್ಯವಸ್ಥೆಗಳನ್ನು ಹೆಚ್ಚು ಆಪ್ಯಾಯಮಾನಗೊಳಿಸುವ ನಿಟ್ಟಿನಲ್ಲಿ ಪರಿಚಯಾತ್ಮಕ ಸಂದರ್ಶನ ಚಟುವಟಿಕೆಗಳು ಅಗತ್ಯ ಎನ್ನುವುದನ್ನು ಗಮನದಲ್ಲಿರಿಸಿ ಶಾಲೆಗಳಲ್ಲಿ ಕೃಷಿ ಸಂದರ್ಶನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಇಂದು ಸಿ.ಪಿ.ಸಿ.ಆರ್.ಐ ಕಾಸರಗೋಡನ್ನು ಸಂದರ್ಶಿಸಿದರು.
ಸಿ.ಪಿ.ಸಿ.ಆರ್.ಐ ಯ ಹಿರಿಯ ತಾಂತ್ರಿಕ ಅಧಿಕಾರಿ ಮುರಳೀಕೃಷ್ಣ ಕಿಳಿಂಗಾರು ವಿದ್ಯಾರ್ಥಿಗಳಿಗೆ ಟಿಶ್ಯೂ ಕಲ್ಚರ್ ಕುರಿತು ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಮಣಿಕಂಠನ್ ಕಸಿಕಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಟಿಶ್ಯೂ ಕಲ್ಚರ್ ಮತ್ತು ಕಸಿಕಟ್ಟುವಿಕೆಯ ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಂಡರು. ಸಮರ್ಪಕ ಅರಿವಿನೊಂದಿಗೆ ಕೃಷಿ ವಿಭಾಗದ ಗಣನೀಯ ಸಾಧನೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಸಂದರ್ಭ ಭರವಸೆಯ ನುಡಿಗಳನ್ನಾಡಿದರು. ಶಾಲಾ ಶಿಕ್ಷಕರಾದ ಗೋವಿಂದ ಶರ್ಮ.ಕೆ, ಜ್ಯೋತಿಲಕ್ಷ್ಮಿ.ಯಸ್, ಅವಿನಾಶ ಕಾರಂತ.ಯಂ, ಶೋಭಾ.ಕೆ.ಹಿರೇಮಠ್ ಮೊದಲಾದವರು ನೇತೃತ್ವ ನೀಡಿದರು.
13 July 2018
ರಸ್ತೆ ಸುರಕ್ಷಾ ತರಬೇತಿ
ನಮ್ಮ ಶಾಲೆಯ ರಸ್ತೆ ಸುರಕ್ಷಾ ಕ್ಲಬ್ ನೇತೃತ್ವದಲ್ಲಿ ಇಂದು ರಸ್ತೆ ಜಾಗೃತಿಯ ಬಗ್ಗೆ ತಿಳುವಳಿಕಾ ತರಬೇತಿ ಜರಗಿತು. ಕಾಸರಗೋಡು ಆರ್.ಟಿ.ಒ ಕಛೇರಿಯ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್ ವಿಜಯನ್ ವೆಳ್ಳರಿಕುಂಡು ಇಂದು ಆಗಮಿಸಿ ಸ್ಲೈಡ್ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ದಾಟುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಅಧ್ಯಕ್ಷತೆ ವಹಿಸಿದರು.
11 July 2018
09 July 2018
06 July 2018
ಬತ್ತದ ಗದ್ದೆಗೆ ಭೇಟಿ
ಯುವ ಜನಾಂಗವು ಕೃಷಿಯ ಕಡೆಗೆ ಗಮನ ಹರಿಸಲು ಅನುಕೂಲವಾಗಲಿ ಎಂಬ ಸದಾಶಯದೊಂದಿಗೆ ಸಾಂಪ್ರದಾಯಿಕವಾಗಿ ಭತ್ತದ ಬೇಸಾಯವನ್ನು ಮಾಡುತ್ತಿರುವ ಬೇಳ ಸುಬ್ರಹ್ಮಣ್ಯ ಅಡಿಗರ ಭತ್ತದ ಗದ್ದೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಸಂದರ್ಶಿಸಿ ಭತ್ತದ ಬೆಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಶಾಲಾ ಅಧ್ಯಾಪಕರಾದ ಗೋವಿಂದ ಶರ್ಮ ಕೋರಿಕ್ಕಾರು, ನಂದಕುಮಾರ್, ಅವಿನಾಶ ಕಾರಂತ ಪಾಡಿ, ಶ್ರೀಮತಿ ಮಾಲತಿ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ರೋಹಿಣಿ ಮತ್ತು ಶಿಕ್ಷಕ ತರಬೇತಿ ಪಡೆಯುತ್ತಿರುವ ಕುಮಾರಿ ಹೇಮಲತಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
Subscribe to:
Posts (Atom)





















