14 July 2021
ನಮ್ಮ ಶಾಲೆಯ 35 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
19 February 2021
ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನ - ಧನ್ಯವಾದಗಳು
ಬೆಂಗಳೂರು
15-02-2021
ನಮ್ಮ
ಮಾತೃ ಶ್ರೀಯವರಾದ ದಿ.
ಕೋಳಾರಿ
ಕೋರಿಕ್ಕಾರು ಕೃಷ್ಣ ಭಟ್ಟರ
ಧರ್ಮಪತ್ನಿ,
ದಿ.
ಶ್ರೀಮತಿ
ಲಕ್ಷ್ಮಿ ಅಮ್ಮನವರು ನಮ್ಮ ನ್ನಗಲಿ
ಇಂದಿಗೆ ಐದು ತಿಂಗಳು.
ಅವರಿಗೆ
ದೊರೆತ ಅತ್ಯಲ್ಪ ಶಾಲಾ ಶಿಕ್ಷಣವನ್ನು
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು
ನೀಡಿತ್ತು ಎಂಬುದು ಹೆಮ್ಮೆಯ
ವಿಚಾರವಾಗಿದೆ.
ನಮ್ಮ
ಮಾತೃಶ್ರೀಯವರು ನಮಗೆ ನೀಡಿದ
ಆರಂಭಿಕ ಶಿಕ್ಷಣವೂ ಜೀವನ ಮೌಲ್ಯಗಳೂ
ಅಳತೆಗೆ ನಿಲುಕದಷ್ಟು.
ನಾವು
ಏಳು ಜನ ಮಕ್ಕಳನ್ನು ಬಡತನ ಹಾಗೂ
ಸೌಲಭ್ಯ ರಹಿತ ದಿನಗಳಾದ 1950-80ರ
ದಶಕಗಳಲ್ಲಿ ಸ್ಪೂರ್ತಿ ಮತ್ತು
ಉತ್ಸಾಹಗಳನ್ನು ತುಂಬಿ ಮುನ್ನಡೆಸಿದ
ಅವರ ದಿವ್ಯ ಚೇತನಕ್ಕೆ ನಮ್ಮ
ಅನಂತಾನಂತ ನಮನಗಳು.
1930-40ರ
ದಶಕಗಳಲ್ಲಿ ಹೆಣ್ಣು ಮಕ್ಕಳ
ಶಿಕ್ಷಣವು ಒಂದು ಕನಸಿನ ಮಾತು.
ನಮ್ಮ
ಮಾತಶ್ರೀ ಯವರೂ ಕೂಡಾ
ಶಿಕ್ಷಣ
ವಂಚಿತರಾದ ಆ ಕಾಲದ ಹೆಣ್ಣು
ಮಕ್ಕಳಲ್ಲಿ ಒಬ್ಬರು.
ಅವರ
ಶಾಲಾ ಶಿಕ್ಷಣವು 3ನೇ
ತರಗತಿಯಿಂದ ಆರಂಭವಾಗಿ 6ನೇ
ತರಗತಿಯಲ್ಲಿ ಕೊನೆಗೊಂಡಿತ್ತು.
ತಮ್ಮ
13ನೇ
ವಯಸ್ಸಿನಲ್ಲಿ ವಿವಾಹ ಜೀವನಕ್ಕೆ
ಕಾಲಿರಿಸಿದ ಅವರು ಮತ್ತೆಂದೂ ಯಾವ
ವಿಧವಾದ ವಿದ್ಯಾಭ್ಯಾಸವನ್ನೂ
ಮುಂದುವರಿಸಲಾಗಲಿಲ್ಲ.
ಹೀಗಿದ್ದೂ
ತಮ್ಮ ಮಕ್ಕಳಿಗೆ ಶಿಕ್ಷಣದ
ಮಹತ್ವವನ್ನು ಮನದಟ್ಟು ಮಾಡಿ
ಅವರನ್ನು ಉನ್ನತ ಶಿಕ್ಷಣದತ್ತ
ಮುನ್ನಡೆಸಿದರು.
ತಮ್ಮ
ಮಕ್ಕಳಲ್ಲದೆ ಕುಟುಂಬದ ಹಾಗೂ
ಕುಟುಂಬೇತರ ಮಕ್ಕಳ ವಿದ್ಯಾಭ್ಯಾಸಕ್ಕೂ
ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ
ಸಹಕರಿಸಿದ ಅವರ ದಿವ್ಯಾತ್ಮಕ್ಕೆ
ಒಂದು ಕಿರು ಕಾಣಿಕೆಯಾಗಿ,
ಅವರು
ಕಲಿತ ಶಾಲೆಯಲ್ಲಿ 10ನೇ
ತರಗತಿಯಲ್ಲಿ ಅತೀ ಹೆಚ್ಚು ಅಂಕ
ಗಳಿಸಿದ ವಿದ್ಯಾರ್ಥಿನಿ (ಯರಿ)ಗೆ
ಒಂದು
ನಗದು ಬಹುಮಾನವನ್ನು ಕೊಡಮಾಡಲು
ತೀರ್ಮಾನಿಸಿದ್ದೇವೆ.
ನಮ್ಮ ಅಪೇಕ್ಷೆಯನ್ನು ಅಂಗೀಕರಿಸಿ ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನವನ್ನು ಅನುಷ್ಠಾನಗೊಳಿಸಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಆಡಳಿತ ಮಂಡಳಿ, ಮೂಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ನಾವು ಆಭಾರಿಗಳು.
ಈ ಕಾರ್ಯದಲ್ಲಿ ನಮ್ಮ ಪರವಾಗಿ ಅಪೇಕ್ಷೆಯನ್ನು ಮಂಡಿಸಿ ಎಲ್ಲಾ ವಿಧವಾದ ಸಹಕಾರವನ್ನೂ ನೀಡಿದ ನಮ್ಮ ಸೋದರ ಸಂಬಂಧಿ ಮತ್ತು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಅಧ್ಯಾಪಕರೂ ಆಗಿರುವ ಶ್ರೀ ಗೋವಿಂದ ಶರ್ಮ, ಕೋರಿಕ್ಕಾರು ಅವರಿಗೆ ನಮ್ಮೆಲ್ಲರ ಅಕ್ಕರೆಯ ಧನ್ಯವಾದಗಳು.
ಇಂತಿ,
ದಿ.
ಕೋಳಾರಿ
ಕೋರಿಕ್ಕಾರು
ಕೃಷ್ಣ
ಭಟ್ ಮತ್ತು ಶ್ರೀಮತಿ ಲಕ್ಷ್ಮಿ
ಅಮ್ಮ ನವರ ಮಕ್ಕಳ ಪರವಾಗಿ,
ಶ್ರೀಮತಿ
ಡಾ.
ಕೆ.
ಸುಮಂಗಲಾ
ಭಟ್
ಸಂಸ್ಥಾಪಕ
ನಿರ್ದೇಶಕರು
ಡೆಕ್ಟ್ರಾಸ್
ಟೆಕ್ನಾಲಜೀಸ್
ಕೆಂಗೇರಿ,
ಬೆಂಗಳೂರು
-560060.
01 October 2020
ಮೇಘಶ್ರೀ ವಿ. ಎಸ್ - ಮರುಮೌಲ್ಯಮಾಪನದ ಬಳಿಕ ಎಲ್ಲ ವಿಷಯಗಳಲ್ಲಿ ಎ+
2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವು ಈಗಾಗಲೇ ಪ್ರಕಟವಾಗಿದ್ದು ನಮ್ಮ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಮೇಘಶ್ರೀ ವಿ. ಎಸ್ ಮರುಮೌಲ್ಯಮಾಪನದ ಬಳಿಕ ಎಲ್ಲ ವಿಷಯಗಳಲ್ಲಿ ಎ+ ಪಡೆದಿದ್ದಾಳೆ. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಒಂದು ವಿಷಯದಲ್ಲಿ ಹೊರತು ಪಡಿಸಿ ಉಳಿದ ಎಲ್ಲ ವಿಷಯಗಳಲ್ಲಿ ಎ+ ಗ್ರೇಡ್ ಪಡೆದಿದ್ದಳು. ಅರ್ಹವಾಗಿ ದೊರಕಬೇಕಾಗಿದ್ದ ವಿಷಯದಲ್ಲಿ ಎ+ ದೊರಕದೆ ಇದ್ದುದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮರುಮೌಲ್ಯಮಾಪನದ ಫಲಿತಾಂಶವು ಪ್ರಕಟವಾಗಿದ್ದು ಈ ಮೂಲಕ ನಮ್ಮ ಶಾಲೆಯ ಒಟ್ಟು 20 ಮಂದಿ ಎಲ್ಲ ವಿಷಯಗಳಲ್ಲಿ ಎ+ ಪಡೆದು ಶಾಲೆಯ ಅಭಿಮಾನವನ್ನು ಹೆಚ್ಚಿಸಿದ್ದಾರೆ.
ಮೇಘಶ್ರೀ ವಿ. ಎಸ್ ನಮ್ಮ ಶಾಲೆಯ ನಿವೃತ್ತ ಶಿಕ್ಷಕ ವಜ್ರಾಂಗಿ ಈಶ್ವರ ಭಟ್ಟರ ಮೊಮ್ಮಗಳು. ನಮ್ಮ ಶಾಲೆಯ ಪೂರ್ವ ವಿದ್ಯಾರ್ಥಿ ಸುಬ್ರಹ್ಮಣ್ಯೇಶ್ವರ ಶರ್ಮ.ವಿ ಮತ್ತು ಆಶಾ ಟಿ.ಎಸ್ ದಂಪತಿಯ ಪುತ್ರಿ.
ಅಭಿನಂದನೆಗಳು...
30 June 2020
ನಮ್ಮ ಶಾಲೆಯ 19 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
06 May 2019
ನಮ್ಮ ಶಾಲೆಯ 8 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
25 February 2019
‘ಮಹಾಜನ ವಾಣಿ’ ವಾರ್ಷಿಕ ಸಮಾರೋಪ
22 February 2019
ಸ್ಪಂದನ - 2019
13 February 2019
ಕಲಿಕೋತ್ಸವ
“ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹಲವಾರು ಹೊಸ ವಿಚಾರಗಳನ್ನು ಕಲಿತಿರುತ್ತಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಈ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಭವಿಷ್ಯದಲ್ಲಿ ಸಮಾಜದ ಹಲವು ರಂಗಗಳಲ್ಲಿ ಮಿಂಚಲಿರುವ ಈ ಮಕ್ಕಳಿಗೆ ಶಾಲೆಯಲ್ಲಿ ಜರಗುವ ಹಲವು ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಲೆ, ಕ್ರೀಡೆ, ವೃತ್ತಿಶಿಕ್ಷಣ ಇತ್ಯಾದಿ ರಂಗಗಳಲ್ಲಿ ಹೆಚ್ಚಿನ ತರಬೇತಿ ನೀಡುವ ಶಿಕ್ಷಣ ವ್ಯವಸ್ಥೆ ಕೇರಳದಲ್ಲಿ ಇರುವುದರಿಂದ ಮಕ್ಕಳು ಬಹುಮುಖಿಯಾದ ವಿಕಾಸವನ್ನು ಅವರ ಜೀವನದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಈ ವಿದ್ಯಾರ್ಥಿಗಳ ಕಲಿಕೆಯ ಸಾಧನೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಲಿಕೋತ್ಸವ ಮೂಡಿಬಂದಿದೆ.” ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಡಿ.ಶಂಕರ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ’ಕಲಿಕೋತ್ಸವ’ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ನಾರಾಯಣ, ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಬಿ.ಆರ್.ಸಿ ಕೋರ್ಡಿನೇಟರ್ ಮಮತಾ.ಪಿ ಶುಭಹಾರೈಸಿದರು. ಅಧ್ಯಾಪಕರಾದ ಮಾಲತಿ.ಪಿ, ಜ್ಯೋತಿಲಕ್ಷ್ಮಿ.ಎಸ್, ಅವಿನಾಶ ಕಾರಂತ.ಎಂ, ಪೂರ್ಣಿಮ.ಟಿ, ರೋಹಿಣಿ.ಎಸ್, ಶೋಭಾ.ಕೆ.ಹಿರೇಮಠ, ನಂದಕುಮಾರ.ಕೆ, ಸಂತೋಷ್.ಪಿ.ಎಚ್. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೆ.ಆರ್.ಸ್ವಾತಿ ಸ್ವಾಗತಿಸಿ, ಪ್ರಜಿತ್.ಪಿ.ರೈ ವಂದಿಸಿದರು. ವರದರಾಜ್. ಕೆ.ಆರ್ ಮತ್ತು ಆಕಾಶ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ, ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ, ಗಣಿತ, ಸಮಾಜ, ವೃತ್ತಿ ಪರಿಚಯ ಮತ್ತು ಕಲೆಗೆ ಸಂಬಂಧಿಸಿದ ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಮತ್ತು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ರಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
30 January 2019
ವರ್ಧಂತ್ಯುತ್ಸವ 2019
21 November 2018
19 November 2018
ವೃತ್ತಿ ಪರಿಚಯ ಮೇಳ_ಬಹುಮಾನ
ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಅಗಲ್ಪಾಡಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟ ಮತ್ತು ಚೆಮ್ನಾಡಿನಲ್ಲಿ ಜರಗಿದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ, ವಿಜ್ಞಾನ ಮತ್ತು ಐ.ಟಿ ಮೇಳಗಳಲ್ಲಿ ಬಾಗವಹಿಸಿ ಬಹುಮಾನ ಪಡೆದಿದ್ದಾರೆ. ಇಲೆಕ್ಟ್ರಿಕಲ್ ವಯರಿಂಗ್ ವಿಭಾಗದಲ್ಲಿ ಒಂಬತ್ತನೇ ತರಗತಿಯ ಕೃಷ್ಣಪ್ರಸಾದ್ ಮತ್ತು ಬಲೆ ಹೆಣೆಯುವ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ಪ್ರಶಾಂತ್.ವಿ ಇವರು ‘ಎ’ ಗ್ರೇಡ್ ಪಡೆದು ಕಣ್ಣೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಭಿನಂದನೆಗಳು...
05 November 2018
15 September 2018
ಹಿಂದಿ ದಿನಾಚರಣೆಯಲ್ಲಿ ಬಹುಮಾನ
10 September 2018
‘ಮಕ್ಕಳ ಧ್ವನಿ’ಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
18 August 2018
ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್. ವೆಂಕಟರಾಜ ಸ್ವೀಕರಿಸಿದರು.
ಈ ಮೊತ್ತದಿಂದ ಖರೀದಿಸಲಾದ 50 ಕಿಲೋಗ್ರಾಂ ಅಕ್ಕಿ, 10 ಕಿಲೋಗ್ರಾಂ ಅವಲಕ್ಕಿ, 10 ಕಿಲೋಗ್ರಾಂ ಸಜ್ಜಿಗೆ,10 ಕಿಲೋಗ್ರಾಂ ಹಸರು ಬೇಳೆ, 15 ಕಿಲೋಗ್ರಾಂ ಸಕ್ಕರೆ, 10 ಕಿಲೋಗ್ರಾಂ ಕಡಲೆ, 10 ಕಿಲೋಗ್ರಾಂ ತೊಗರಿ ಬೇಳೆ, 4 ಕಿಲೋಗ್ರಾಂ ಚಾಹುಡಿ, 5 ಟೂಥ್ ಪೇಸ್ಟ್, ಇವುಗಳನ್ನು ಸ್ಕೌಟ್ ಗೈಡ್ ಜಿಲ್ಲಾ ಸಮಿತಿಯ ಮೂಲಕ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು. ನಮ್ಮ ಜೊತೆ ಕೈಜೋಡಿಸಿದವರಿಗೆ ಕೃತಜ್ಞತೆಗಳು...
02 August 2018
‘ಮಹಾಜನ ವಾಣಿ’ ಬಾನುಲಿ ಕೇಂದ್ರಕ್ಕೆ ಚಾಲನೆ
“ವಿದ್ಯಾರ್ಜನೆಯ ಹಂತದಲ್ಲಿಯೇ ಮಕ್ಕಳಿಗೆ ಭವಿಷ್ಯದ ಕಡೆಗೆ ಸ್ಪಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲವೂ ಬದ್ಧತೆಯೂ ಇರಬೇಕು. ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಂಡರೆ ಜೀವನದಲ್ಲಿ ಸಾಧನೆಯ ಹೆಜ್ಜೆಗಳನ್ನು ಇಡಲು ಸಹಕಾರಿಯಾಗಬಹುದು. ಒಂದು ಕಾಲದಲ್ಲಿ ನಾಡಿನಾದ್ಯಂತ ಮಾಹಿತಿ ವಿನಿಮಯದ ಏಕೈಕ ಮಾಧ್ಯಮವಾಗಿದ್ದ ರೇಡಿಯೋ ಪ್ರಸ್ತುತ ಹೊಸರೂಪದಲ್ಲಿ ಪ್ರಸ್ತುತಿಗೊಳ್ಳುತ್ತಾ ನಗರ ಗ್ರಾಮೀಣ ಜನರಿಗೆ ಮನರಂಜನೆ ನೀಡುತ್ತಿದೆ. ಅಂತಹ ವ್ಯವಸ್ಥೆಯನ್ನು ತಮ್ಮ ಪರಿಧಿಯೊಳಗೆ ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳು” ಮಂಗಳೂರು ಆಕಾಶವಾಣಿ ಕೇಂದ್ರದ ಉಪನಿರ್ದೇಶಕಿ ಡಾ|ಮಾಲತಿ ಆರ್. ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡ ‘ಮಹಾಜನ ವಾಣಿ’ ಬಾನುಲಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.





















