Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 November 2017

ಕಲೋತ್ಸವದಲ್ಲಿ ದಾಖಲೆ ನಿರ್ಮಿಸಿದ ಶಾಲಾ ವಿವರ


ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕುಂಬಳೆ ದ್ವಿತೀಯ, ಹೈಸ್ಕೂಲು ವಿಭಾಗದಲ್ಲಿ ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಆತಿಥೇಯ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ಮತ್ತು ನವಜೀವನ ಪ್ರೌಢಶಾಲೆ ಗಳು ಹಂಚಿಕೊಂಡವು. ಹೈಸ್ಕೂಲು ವಿಭಾಗದ ಸಂಸ್ಕೃತೋತ್ಸವದಲ್ಲಿ ಮಹಾಜನ ವಿದ್ಯಾಸಂಸ್ಥೆ ಪ್ರಥಮ, ಸತ್ಯನಾರಾಯಣ ಹೈಸ್ಕೂಲು ಪೆರ್ಲ ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ ನೀರ್ಚಾಲು ಮಹಾಜನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಹಿರಿಯ ಪ್ರಾಥಮಿಕ ಶಾಲೆ ಏತಡ್ಕ ದ್ವಿತೀಯ, ಕಿರಿಯ ಪ್ರಾಥಮಿಕ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಕಿರಿಯ ಪ್ರಾಥಮಿಕ ಶಾಲೆ ಕಾರಡ್ಕ ಪ್ರಥಮ, ವಿದ್ಯಾಗಿರಿ ಕಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದವು. ಹಿರಿಯ ಪ್ರಾಥಮಿಕ ವಿಭಾಗದ ಸಾಮಾನ್ಯ ವಿಭಾಗದಲ್ಲಿ ಸರಕಾರಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕಾರಡ್ಕ ಪ್ರಥಮ, ಸಂತ ಬಾರ್ತಲೋಮಿಯ ಶಾಲೆ ಬೇಳ ದ್ವಿತೀಯ ಸ್ಥಾನ ಪಡೆಯಿತು.  ಹೈಯರ್ ಸೆಕೆಂಡರಿ ಅರೆಬಿಕ್ ಉತ್ಸವದಲ್ಲಿ ಸರಕಾರಿ ಪೊಕೇಶನಲ್ ಹಯರ್ ಸೆಕೆಂಡರಿ ಶಾಲೆ ಮೊಗ್ರಾಲ್ ಪ್ರಥಮ, ಸರಕಾರಿ ಹೈಯರ್ ಸೆಕೆಂಡರಿ ಅಡೂರು ದ್ವಿತೀಯ ಸ್ಥಾನ ಪಡೆದವು.

No comments:

Post a Comment