Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

26 June 2010

ಗಣಿತ ಕ್ಲಬ್ ಉದ್ಘಾಟನೆ

ನಮ್ಮ ಶಾಲೆಯ ಗಣಿತ ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಶುಕ್ರವಾರ ಜರಗಿತು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಹಿರಿಯ ಗಣಿತ ಅಧ್ಯಾಪಕ ಸಿ.ಎಚ್.ಸುಬ್ರಹ್ಮಣ್ಯ ಭಟ್, ವಿದ್ಯಾರ್ಥಿನಿ ಮಾನಸ ಪಿ.ಎಸ್ ಮತ್ತು ಕೃಷ್ಣಮೂರ್ತಿ ಇವರನ್ನು ಚಿತ್ರದಲ್ಲಿ ಕಾಣಬಹುದು. ವಿವಿಧ ಸಂಘಗಳ ಉದ್ಘಾಟನೆ ಮುಂದಿನ ದಿನಗಳಲ್ಲಿ ನಡೆಯಲಿದೆ.

24 June 2010

ರಾಷ್ಟ್ರಪಿತನಿಗೆ ನಮನಗಳು

ಹತ್ತನೇ ತರಗತಿಯ ಮಿಥುನ್ ಪಿ.ಎಸ್ ಬಿಡಿಸಿದ ಚಿತ್ರ, ನಿಮ್ಮ ಮುಂದೆ. ಅಂದ ಹಾಗೆ ನಿನ್ನೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀಯುತ ನಾಮದೇವ ಶೆಣೈ ಯವರು ನಮ್ಮ ಶಾಲೆಗೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ. ಧನ್ಯವಾದಗಳು ಅವರಿಗೆ...

01 June 2010

ಮರಳಿ ಬಂದೆವು ಶಾಲೆಗೆ...

ಇಂದು ಶಾಲಾರಂಭ. ಶಾಲೆಯ ಹಳೆವಿದ್ಯಾರ್ಥಿ ಪ್ರಸ್ತುತ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರಿಂದ ಶಾಲಾ ಪ್ರವೇಶೋತ್ಸವದ ಉದ್ಘಾಟನೆ, ಆ ಮೂಲಕ ಬೇಸಿಗೆ ರಜೆ ಕಳೆದು ಬಂದ ವಿದ್ಯಾರ್ಥಿಗಳು ಮರಳಿ ಶಾಲೆಗೆ... ಈ ಸಲದ ರಜೆಯಲ್ಲಿ ಅಧ್ಯಾಪಕರಿಗೆ ನೂರೆಂಟು ಕಾರ್ಯಗಳು. ಜನಗಣತಿ, ರಜಾಕಾಲದ ತರಬೇತಿ ಶಿಬಿರಗಳ ನಡುವಿನ ಬಿಡುವಿಲ್ಲದ ದಿನಗಳು... ಹೀಗೆ ಕಳೆದ ತಿಂಗಳು ಶಾಲೆಯ ಬ್ಲಾಗ್ ಅಪ್‍ಡೇಟ್ ಆಗಿರಲಿಲ್ಲ. ಇನ್ನು ಅದು ಮತ್ತೆ ಗರಿಗೆದರುತ್ತದೆಂಬುದು ನಮ್ಮ ಆಶಾಭಾವನೆ. ಶಾಲೆಯ ಹಳೆವಿದ್ಯಾರ್ಥಿ ಮತ್ತು ಮುಂಬೈಯಲ್ಲಿ ಇಂಡಿಯನ್ ಇನ್ಸ್‍‍ಟಿಟ್ಯೂಟ್ ಓಫ್ ಸಯನ್ಸಸ್ ಕೇಂದ್ರದಲ್ಲಿ ರೀಸರ್ಚ್ ಸ್ಕಾಲರ್ ಆಗಿರುವ ಮಹೇಶ ಕೂಳಕ್ಕೋಡ್ಳು ಅವರಿಂದ ವಿದ್ಯಾರ್ಥಿಗಳಿಗೆ ಹಿತವಚನ. ಮುಖ್ಯೋಪಾಧ್ಯಾಯರ ಮೇಲ್ನೋಟದಲ್ಲಿ ಶಾಲೆ ಆರಂಭವಾಗಿದೆ, ನಿಮ್ಮೆಲ್ಲರ ಸಹಕಾರವನ್ನು ಮುಂದೆಯೂ ನಿರೀಕ್ಷಿಸುತ್ತೇವೆ.