Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

14 February 2014

ಶಾಲೆಯಲ್ಲಿ ಯೋಗ ಶಿಬಿರ


 “ಯೋಗದ ಅಭ್ಯಾಸವು ಏಕಾಗ್ರತೆಯ ಸಿದ್ಧಿಗೆ ಉತ್ತಮ ಹಾದಿ. ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಯೋಗಾಭ್ಯಾಸವು ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯೋಗವನ್ನು ನಿಷ್ಟೆಯಿಂದ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಮಂಗಳೂರು ವಲಯ ಬೌದ್ಧಿಕ್ ಪ್ರಮುಖ್, ನಿವೃತ್ತ ಶಿಕ್ಷಕಿ ಸವಿತಾ ಅಭಿಪ್ರಾಯಪಟ್ಟರು. ಅವರು ಹಿಂದೂ ಸೇವಾ ಪ್ರತಿಷ್ಠಾನದ ರಾಷ್ಟ್ರ ಸೇವಿಕಾ ಸಮಿತಿಯು ಸ್ವಾಮಿ ವಿವೇಕಾನಂದರ 150ನೆಯ ಜನ್ಮವರ್ಷಾಚರಣೆಯ ಅಂಗವಾಗಿ ಕಳೆದ 08.02.2014 ಶನಿವಾರ ನಮ್ಮ ಶಾಲೆಯಲ್ಲಿ ಕಿಶೋರಿಯರಿಗಾಗಿ ಆಯೋಜಿಸಿದ ಯೋಗ ಮತ್ತು ನೈತಿಕ ತಿಳುವಳಿಕೆಯ ಶಿಬಿರದಲ್ಲಿ ಮಾತನಾಡುತ್ತಿದ್ದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಉದ್ಘಾಟಿಸಿದರು. ಹಿಂದೂ ಸೇವಾ ಪ್ರತಿಷ್ಠಾನದ ಸೇವಾವೃತ್ತಿಯಲ್ಲಿರುವ ಇಂದಿರಾ ಯೋಗ ತರಬೇತಿ ನೀಡಿದರು.

03 February 2014

ನಿನ್ನೆ ಶಾಲೆಯಲ್ಲಿ ‘ಕನ್ನಡ ಸ್ವರ’

  
“ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು, ಅಭಿಮಾನ ಬೆಳೆಸುವ ಅಗತ್ಯವು ಪ್ರಬಲವಾಗಿದೆ. ಆ ನಿಟ್ಟಿನಲ್ಲಿ ರೂಪಿಸಲಾದ ‘ಕನ್ನಡ ಸ್ವರ’ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಾಹಿತಿ ಕೃಷ್ಣವೇಣಿ ಕಿದೂರು ಅಭಿಪ್ರಾಯಪಟ್ಟರು. ಅವರು ನಿನ್ನೆ 02.02.2014 ಭಾನುವಾರ ನಮ್ಮ ಶಾಲೆಯಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಕಾಸರಗೋಡಿನ ರಂಗಚಿನ್ನಾರಿ ಸಂಸ್ಥೆಯು ಆಯೋಜಿಸಿದ ‘ಕನ್ನಡ ಸ್ವರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಚಿತ್ರಕಲಾ ಶಿಕ್ಷಕ ಬಾಲ ಮಧುರಕಾನನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಂಗಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ವಾಣಿ.ಪಿ.ಎಸ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ತರಬೇತುದಾರರಾದ ಕೆ.ವಿ.ರಮಣ್, ಡಾ|ಸಂಪದಾ ಭಟ್ ಮರಬಳ್ಳಿ ಮತ್ತು ಪ್ರಮೋದ್ ಸಪ್ರೆಯವರು ವಿದ್ಯಾರ್ಥಿಗಳಿಗೆ ‘ನಾಡಗೀತೆ’ಯ ಆಲಾಪನೆಗೆ ಸಂಬಂಧಿಸಿದ ತರಬೇತಿ ನೀಡಿದರು.