Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

28 March 2014

ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ


                ಇಪ್ಪತ್ತನಾಲ್ಕು ವರ್ಷಗಳ ಕಾಲ ಶಿಕ್ಷಕರಾಗಿ, ಎಂಟು ವರ್ಷಗಳ ದೀರ್ಘ ಅವಧಿಯ ಕಾಲ ಶಾಲಾ ಮುಖ್ಯೋಪಾಧ್ಯಾಯರಾಗಿ, ಶಾಲೆ ಮತ್ತು ವಿದ್ಯಾರ್ಥಿಗಳ ಉನ್ನತಿಗೆ ಕಾರಣರಾದ ಉಪ್ಪಂಗಳ ರವಿಕೃಷ್ಣ ಶಾಲೆಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದ ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಕೃಷಿಕರಾಗಿ ನೈಜ ಜೀವನವನ್ನು ಪೂರೈಸಲು ಭಗವಂತನು ಅವರನ್ನು ಹರಸಲಿಎಂದು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು 28.03.2014 ಶುಕ್ರವಾರ ನಮ್ಮ ಶಾಲೆಯಲ್ಲಿ ಜರಗಿದ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಶಾಲೆಯ ನಿಯೋಜಿತ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ, ಹಿರಿಯ ಶಿಕ್ಷಕರಾದ ಸಿ.ಎಚ್.ಸುಬ್ರಹ್ಮಣ್ಯ ಭಟ್, ಎ.ಭುವನೇಶ್ವರಿ, ಎಚ್.ಶಿವಕುಮಾರ, ಸಿ.ಎಚ್.ವೆಂಕಟರಾಜ, ವಾಣಿ.ಪಿ.ಎಸ್, ಇ.ವೇಣುಗೋಪಾಲಕೃಷ್ಣ, ಶಿವಪ್ರಕಾಶ್.ಎಂ.ಕೆ, ಬಿ.ಸುಬ್ರಮಣ್ಯ ಕೆದಿಲಾಯ ಮತ್ತು ಶ್ರೀದೇವಿ.ಕೆ ಇವರು ಶುಭ ಹಾರೈಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಶಾಲಾ ಹಿರಿಯ ಶಿಕ್ಷಕ ಕೆ.ನಾರಾಯಣ ಭಟ್ ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

05 March 2014

ಶಾಲೆಗೆ ಕಂಪ್ಯೂಟರ್ ಕೊಡುಗೆ

ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ವಿದಾಯ ಸಮಾರಂಭದಲ್ಲಿ ಶಾಲೆಗೆ ಸಮರ್ಪಿಸಿದ ಕಂಪ್ಯೂಟರನ್ನು ಶಾಲಾ ವ್ಯವಸ್ಥಾಕ ಜಯದೇವ ಖಂಡಿಗೆ ಸ್ವೀಕರಿಸಿದರು

03 March 2014

ಮಾರ್ಚ್ 7ರಂದು ಶತಮಾನೋತ್ಸವ ಸಮಿತಿ ಸಭೆ, ಬನ್ನಿ...

ನಮ್ಮ ಶಾಲೆಗಳ ಶತಮಾನೋತ್ಸವ ಕಾರ್ಯಕ್ರಮದ ಆಯವ್ಯಯ ಮಂಡನೆ ಮತ್ತು ಇತರ ವಿಷಯಗಳ ಅವಲೋಕನದ ದೃಷ್ಟಿಯಿಂದ ಶತಮಾನೋತ್ಸವದ ವಿವಿಧ ಸಮಿತಿಗಳ ಸಭೆಯನ್ನು 07.03.2014 ಶುಕ್ರವಾರ ಅಪರಾಹ್ನ 3 ಗಂಟೆಗೆ ಕರೆಯಲಾಗಿದೆ. ಎಲ್ಲ ಸದಸ್ಯರು ಸಭೆಯಲ್ಲಿ ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶತಮಾನೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ. ಬನ್ನಿ...