Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

16 April 2014

SSLC ಫಲಿತಾಂಶ: ನಮಗೆ 90%

ಕೇರಳ ಸರಕಾರವು ಮಾರ್ಚ್ 2014ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ 90% ಫಲಿತಾಂಶ ಪಡೆದಿದೆ. ಒಟ್ಟು ಪರೀಕ್ಷೆ ಬರೆದ 171 ಮಂದಿ ವಿದ್ಯಾರ್ಥಿಗಳಲ್ಲಿ 154 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ವಿದ್ಯಾರ್ಥಿಗಳು ಆದರ್ಶ ಎಚ್.ಎ, ಅರವಿಂದ ಎಸ್.ವಿ, ಅಶ್ವಿನಿ.ಕೆ, ರಕ್ಷಿತ್.ಟಿ, ಶ್ರದ್ಧಾ.ಎಸ್, ಶ್ರೀಶ.ಕೆ ಮತ್ತು ವಿನಯಾ ಪೆರ್ವ ಎಲ್ಲಾ ಹತ್ತು ವಿಷಯಗಳಲ್ಲೂ ಎ+ ಗ್ರೇಡ್ ಪಡೆದಿದ್ದಾರೆ. ಎಲ್ಲರಿಗೂ ಶುಭಾಶಯಗಳು.

06 April 2014

ಹರ್ಷಿತಾ.ಬಿ - ರಾಷ್ಟ್ರಪತಿ ಗೈಡ್

ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಹರ್ಷಿತಾ.ಬಿ 2013-14ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೀಡುವ ‘ರಾಷ್ಟ್ರಪತಿ ಗೈಡ್’ ಪ್ರಶಸ್ತಿಯನ್ನು ಪಡೆದಿದ್ದಾಳೆ. ಈಕೆ ಬೇಳ ನಿವಾಸಿ ಚಂದ್ರ ಮತ್ತು ಸುಧಾ ಇವರ ಪುತ್ರಿ,  ಗೈಡ್ ಅಧ್ಯಾಪಿಕೆಯರಾದ ಅನ್ನಪೂರ್ಣ.ಎಸ್ ಮತ್ತು ವಾಣಿ.ಪಿ.ಎಸ್ ಇವರಿಂದ ತರಬೇತಿಯನ್ನು ಪಡೆದಿದ್ದಾಳೆ.