Flash

Flash: ಕುಂಬಳೆ ಉಪಜಿಲ್ಲಾ ಕಲೋತ್ಸವ ನಮ್ಮ ಶಾಲೆಯಲ್ಲಿ...

31 July 2009

ಬಯಲು ಪ್ರವಾಸ - ಮುಖಾರಿಕಂಡ ಮದಕ

ಪುತ್ತಿಗೆ ಪಂಚಾಯತು ವ್ಯಾಪ್ತಿಯ ಕಟ್ಟತ್ತಡ್ಕ ಬಳಿಯ ಮುಖಾರಿಕಂಡದಲ್ಲಿ ಒಂದು ಬೃಹತ್ ಜಲಾಶಯವಿದೆ. ಪಕ್ಕದಲ್ಲೇ ಆನಾಡಿಪಳ್ಳ. ಎರಡೂ ಕಡೆಗೆ ನಮ್ಮ ಸವಾರಿ ಕಳೆದ ವಾರದ ವಿಶೇಷ. ಸುತ್ತಾಡುವುದು ಎಂದರೆ ನಮಗೂ ವಿದ್ಯಾರ್ಥಿಗಳಿಗೂ ಖುಷಿ. ಸರಕಾರ ಸಿದ್ಧ ಪಡಿಸಿದ ಪಠ್ಯ ಪುಸ್ತಕ ಪ್ರಣಾಳಿಕೆಯೂ ಅದನ್ನೇ ಹೇಳುತ್ತದೆ. ನೋಡಿ ಕಲಿ, ಮಾಡಿ ನಲಿ...

ಚಿತ್ರ - ವಿಜೇಶ್. ಬಿ


ಮಳೆಗಾಲ ಈ ದಿನಗಳಲ್ಲಿ ಚಿತ್ರಗಳು ಮತ್ತೆ ನಮಗೆ ಮುದನೀಡುತ್ತಿವೆ. ಹುಡುಗರು ಗೀಚಿದ ಪುಟ್ಟ ಚಿತ್ರಗಳನ್ನೂ ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಪ್ರಯತ್ನ ಮಾಡುತ್ತೇವೆ.

28 July 2009

ಬಯಲು ಪ್ರವಾಸ - ಆನಾಡಿ ಪಳ್ಳ

ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಆನಾಡಿ ಪಳ್ಳ ಎಂಬ ಪ್ರದೇಶವಿದೆ. ಅಲ್ಲಿ ಒಂದು ಜಲಾಶಯ ವರ್ಷಪೂರ್ತಿ ತುಂಬಿರುತ್ತದೆ. ಮೊನ್ನೆ ಬಯಲು ಪ್ರವಾಸದ ಅಂಗವಾಗಿ ಶಾಲೆಯಿಂದ ಸುಮಾರು ೮ ಕಿಲೋ ಮೀಟರು ದೂರದ ಆ ಪ್ರದೇಶಕ್ಕೆ ಹೋಗಿ ಬಂದೆವು.

ಚಿತ್ರ - ಆಶಿತ್ ಕೃಷ್ಣ ಉಪಾಧ್ಯಾಯ

ನಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಆಶಿತ್ ಕೃಷ್ಣನೂ ಒಬ್ಬ. ಅವನು ಬಿಡಿಸುವ ಚಿತ್ರಗಳೇ ಕೆಲವೊಮ್ಮೆ ನಮ್ಮನ್ನು ಹೆಚ್ಚು ಸೆಳೆಯುತ್ತವೆ.

26 July 2009

ಮತ್ತೆ ಶೇಖರಕಾನ ಜಲಪಾತ


ಶೇಖರಕಾನ ಜಲಪಾತ ಮತ್ತೆ ನಮ್ಮಆಸಕ್ತಿಯ ವಿಷಯ. ಅಲ್ಲಿ ಹುಡುಕಿದಷ್ಟೂ ಆನಂದ, ಸಂತೋಷ, ನಮ್ಮ ವಿದ್ಯಾರ್ಥಿಗಳಿಗೆ ಅದು ಅಗಣಿತ ಸೌಂದರ್ಯದ ಅಬ್ಬಿ, ಇಲ್ಲಿದೆ ಆ ಜಲಪಾತದ ಇನ್ನೊಂದು ನೋಟ...

22 July 2009

ಮನೋರಮಾ ನ್ಯೂಸ್ ಮತ್ತು ನಮ್ಮ ಬೇವಿನ ಮರ

ಮೊನ್ನೆ ಬೇವಿನ ಮರ ಬಿದ್ದ ವಾರ್ತೆ ಸಿಕ್ಕಿದ ತಕ್ಷಣ ಮಲಯಾಳದ ಪ್ರಸಿದ್ಧ ಚಾನೆಲ್ ಮನೋರಮಾ ನ್ಯೂಸ್ ಪ್ರತಿನಿಧಿಗಳು ಶಾಲೆಗೆ ಬಂದಿದ್ದರು. ಆ ವಾರ್ತೆ ಮೊನ್ನೆ ಬೆಳಗ್ಗೆ ಪ್ರಸಾರವಾಗಿದೆ. ನಿಮಗಾಗಿ ಇಲ್ಲಿ ಅದನ್ನೇ ಪ್ರಸ್ತುತ ಪಡಿಸುತ್ತಿದ್ದೇವೆ. video

ಶೇಖರಕಾನಕ್ಕೆ ಬಯಲು ಪ್ರವಾಸ

ವರ್ಷಧಾರೆಯ ನಡುವೆ ಮೈದುಂಬಿ ಹರಿದ ಶೇಖರಕಾನ ಅಬ್ಬಿಯನ್ನು ವೀಕ್ಷಿಸಲು ಹೋಗಿದ್ದೆವು, ಮೊನ್ನೆ...

16 July 2009

ಕುಂಭ ದ್ರೋಣ ಮಳೆಗೆ ಕಹಿಬೇವಿನ ಮರ ಧರಾಶಾಯಿ...

ನೀರ್ಚಾಲಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಬೇರೂರಿದ್ದ, ನಮ್ಮ ಶಾಲೆಯ ಐಡೆಂಟಿಟಿಯಾಗಿದ್ದ ಸುಮಾರು ಶಾಲೆಯಷ್ಟೇ ಆಯುಸ್ಸು ಹೊಂದಿದ್ದ ಸರ್ವ ರೋಗ ನಿವಾರಕ ಕಹಿಬೇವಿನ ಮರ ನಿನ್ನೆ ಸುರಿದ ಮಳೆಗೆ ಧರಾಶಾಯಿಯಾಗಿದೆ. ನೀರ್ಚಾಲಿನ ಖ್ಯಾತ 'ಉಬ್ಬಾನ ಡಾಕ್ಟ್ರ' ಮದ್ದು ಮಾಡಿಕೊಳ್ಳುತ್ತಿದ್ದ, ಚಿಕನ್ ಪಾಕ್ಸ್ ಹಾಗೂ ಇತರ ಚರ್ಮರೋಗ ಬಾಧಿತರೆಲ್ಲ ಈ ಮರದ ಎಲೆಯನ್ನು ಅರೆದು ಮೈಗೆ ಹಚ್ಚಿಕೊಂಡವರೇ...ಶಾಲಾ ಪರಿಸರದಲ್ಲಿ ಸ್ವಚ್ಚ ವಾಯುವನ್ನು ನೀಡುತ್ತಿದ್ದ ಆ ಮರ ನಮ್ಮ ನಡುವೆ ಮೌನವನ್ನು ಉಳಿಸಿ ಹೋಗಿದೆ. ಇನ್ನು ಊರವರೆಲ್ಲ ಕಹಿಬೇವಿನ ಗಿಡಕ್ಕಾಗಿ ಎಲ್ಲಿ ಅಲೆದಾಡುವುದೋ... ಎಂದು ದಾರಿ ತೋರಿಸದೆ....

15 July 2009

ಇಕೋ ಕ್ಲಬ್ ಉದ್ಘಾಟನೆ

“ ನಮ್ಮ ಪರಿಸರವನ್ನು ಯಾವತ್ತೂ ಶುಚಿಯಾಗಿ ಇರಿಸಿಕೊಳ್ಳಬೇಕು. ಆ ಮೂಲಕ ಸ್ವಚ್ಚ ವಾತಾವರಣದ ನಿರ್ಮಾಣವಾಗಬೇಕು. ಶುದ್ಧ ಗಾಳಿ ನಮ್ಮ ಉಸಿರಾಗಬೇಕು. ಆರೋಗ್ಯದ ದೃಷ್ಟಿಯಿಂದ ಮಹಾಮಾರಿಗಳಾದ ಡೆಂಗ್ಯು, ಮಲೇರಿಯಾ, ಹಂದಿ ಜ್ವರದಂತಹ ಖಾಯಿಲೆಗಳನ್ನು ನಾವು ಹೊಡೆದೋಡಿಸಬೇಕು"ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೧೦.೦೭.೨೦೦೯ ಶುಕ್ರವಾರದಂದು ಆರೋಗ್ಯ ಮತ್ತು ಪರಿಸರ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಿಕೆ ಎ.ಭುವನೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಎಂ.ಕೆ.ಶಿವಪ್ರಕಾಶ್ ವಂದಿಸಿದರು. ವಿದ್ಯಾರ್ಥಿ ಅನುತೇಜ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ - ಅನುತೇಜ್

ಕ್ಷಮೆ ಇರಲಿ, ಕೆಲ ದಿನಗಳು ಅನಿವಾರ್ಯವಾಗಿ ನೆಟ್ ಲೋಕದಿಂದ ಹೊರಗಿರಬೇಕಾಗಿ ಬಂತು, ಮಳೆಗಾಲದ ಅಬ್ಬರಕ್ಕೆ ನಮ್ಮ ಬ್ರಾಡ್ ಬ್ಯಾಂಡ್ ಸತ್ತು ಮಲಗಿತ್ತು, ಒಂದು ವಾರ. ಈಗ ಮತ್ತೆ ಎದ್ದು ಬಂದಿದ್ದೇವೆ, ಅನುತೇಜ್ ಬಿಡಿಸಿದ ಚಿತ್ರದೊಂದಿಗೆ. ಸಾಧ್ಯವಾದಷ್ಟು ಅಕ್ಷರ ತಪ್ಪುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ, ಆದರೂ ಕೆಲವೊಮ್ಮೆ ತಪ್ಪುಗಳು ನುಸುಳಿಬಿಡುತ್ತವೆ. ನಿಮ್ಮ ಪ್ರೋತ್ಸಾಹ ಇರಲಿ, ಸದಾ....

07 July 2009

ಚಿತ್ರ - ಆಧಿಶ್. ಎನ್.ಕೆ

ಶಾಲೆ ಪೂರ್ತಿ ಈಗ ಕ್ಲಬ್ ಉದ್ಘಾಟನೆಗಳ ಕಾಲ. ಈ ಗೌಜಿಯಲ್ಲಿ ಆಧಿಶ್ ಹೊತ್ತು ತಂದ ಪಾರಿವಾಳವನ್ನು ಹಾರಿ ಬಿಡುತ್ತಿದ್ದೇವೆ...

06 July 2009

ನೀರ್ಚಾಲಿನಲ್ಲಿ ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ

“ಸ್ವಾತಂತ್ರ್ಯ ದೊರೆತ ಕೆಲವೇ ವರ್ಷಗಳಲ್ಲಿ ನಾಡಿನ ಇತಿಹಾಸದಲ್ಲಿ ಕೇಳರಿಯದ ಬದಲಾವಣೆಗಳು ಬಂದಿವೆ. ಸ್ವಾತಂತ್ರ್ಯ ದೊರೆಯುವ ಕಾಲಘಟ್ಟದಲ್ಲಿ ಇದ್ದ ಒಕ್ಕಲುತನ, ಜಮೀನ್ದಾರಿ ಪದ್ಧತಿಗಳು ಮೂಲೆಗುಂಪಾಗುತ್ತಿವೆ. ಇತಿಹಾಸದಲ್ಲಿ ಎಲ್ಲೂ ಸಂಭವಿಸದಿದ್ದ ಕೂಲಿ ಕಾರ್ಮಿಕರ ಕೊರತೆ ಈಗಿನ ಕೃಷಿಯನ್ನೂ ಕೃಷಿ ಕಾರ್ಮಿಕರನ್ನೂ ಬಹುವಾಗಿ ಕಾಡುತ್ತಿದೆ" ಎಂದು ಹಿರಿಯ ಕೃಷಿಕ ಪೆರ್ವ ನರಸಿಂಹ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೦೩.೦೭.೨೦೦೯ ಶುಕ್ರವಾರದಂದು ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉದ್ಘಾಟಿಸಿದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಮುಕ್ತೇಶ ಸ್ವಾಗತಿಸಿ, ವಿನೀತ್ ಶಂಕರ್.ಎಚ್ ವಂದಿಸಿದರು. ಸಮಾಜ ವಿಜ್ಞಾನ ಅಧ್ಯಾಪಕ ಎಚ್.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

03 July 2009

ಚಿತ್ರ - ಅಶ್ವಿನಿ.ಎಂ

ಅಶ್ವಿನಿ.ಎಂ ಬಿಡಿಸಿದ ಮತ್ತೊಂದು ಚಿತ್ರ , ಸದ್ಯ ನಿಮ್ಮ ಮುಂದೆ ಹರವಿದ್ದೇವೆ. ಸೈಕಲ್ಲೇರಿ ಹೊರಟ ಚಿತ್ರ, ಕ್ಷಮೆ ಇರಲಿ... ಇನ್ನು ಕೆಲವೇ ದಿನಗಳಲ್ಲಿ ಶಾಲೆಗೆ ಸ್ಕ್ಯಾನಿಂಗ್ ಯಂತ್ರ ಬರಲಿದೆ. ಅಲ್ಲಿಯ ತನಕ ಚಿತ್ರಗಳ ಗುಣಮಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.....

ಮಾದಕ ದ್ರವ್ಯ ವಿರೋಧಿ ದಿನ

ಮಾದಕ ದ್ರವ್ಯ ವಿರೋಧಿ ದಿನದ ಆಚರಣೆಯ ಅಂಗವಾಗಿ ಕಳೆದ ವಾರ ಶಾಲೆಯಲ್ಲಿ ಪೋಸ್ಟರ್ ರಚನಾ ಸ್ಪರ್ಧೆ ಏರ್ಪಟ್ಟಿತ್ತು. ಸ್ವಲ್ಪ ತಡವಾಗಿಯಾದರೂ ಸ್ಪರ್ಧಾ ವೇದಿಕೆಯಿಂದ ಚಿತ್ರ ನಿಮ್ಮ ಮುಂದೆ....

01 July 2009

ಬೆಂಗಳೂರು ಮಿರರ್

ಬೆಂಗಳೂರಿನ ಟೈಮ್ಸ್ ಓಫ್ ಇಂಡಿಯಾ ಓದುಗರಿಗೆಲ್ಲ ಬೆಂಗಳೂರು ಮಿರರ್ ಪರಿಚಿತ. ಅತ್ಯುತ್ತಮ ಪ್ರಸಾರ ಹೊಂದಿರುವ ಟ್ಯಾಬ್ಲಾಯ್ಡ್ ಪತ್ರಿಕೆ ಅದು. ಅತ್ಯುತ್ತಮ ವಿನ್ಯಾಸ ಮತ್ತು ಬಣ್ಣದ ಪುಟಗಳು ಆ ಪತ್ರಿಕೆಯ ಹೆಚ್ಚುಗಾರಿಕೆ. ಜೂನ್ ೧೦ ರ ಆ ದೈನಿಕದಲ್ಲಿ ನಮ್ಮ ಬ್ಲಾಗ್ ಬಗ್ಗೆ ಪತ್ರಿಕೆಯ ಪ್ರತಿನಿಧಿ ದೀಪ್ತಿ ಶ್ರೀಧರ್ ಅವರಿಂದ ವಿಶೇಷ ಲೇಖನ. ನಮ್ಮ ಪುಟ್ಟ ಪ್ರಯತ್ನಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನಾವು ಆಭಾರಿ... ಹೆಚ್ಚಿನ ಓದಿಗಾಗಿ....
http://www.bangaloremirror.com/index.aspx?page=article&sectid=10&contentid=20090610200906100117045715b1792a&sectxslt=&pageno=1