Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 March 2010

ಬೇಸಿಗೆ ರಜಾ...

ನಾಳೆಯಿಂದ ಎರಡು ತಿಂಗಳು ನಮಗೆ ಬೇಸಿಗೆ ರಜಾ. ವಿದ್ಯಾರ್ಥಿಗಳಿಗೆ ಮಾಮೂಲಿ ಪ್ರವಾಸ, ಅಜ್ಜನಮನೆ, ಬೀಜದ ಗುಡ್ಡೆ, ಮಾವಿನಮರ... ಇತ್ಯಾದಿ. ಅಧ್ಯಾಪಕರಿಗೆ ಉತ್ತರಪತ್ರಿಕೆಗಳ ಮೌಲ್ಯಮಾಪನ, ಸರಕಾರಿ ಜನಗಣತಿ, ಮುಂದಿನ ವರ್ಷದ ತರಬೆತಿ... ಇತ್ಯಾದಿ ಕಾರ್ಯಕ್ರಮಗಳು. ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಬೇಸಿಗೆಯನ್ನು ಹಾರೈಸುತ್ತೇವೆ.

29 March 2010

ರಜೆಗೆ ತಯಾರಿ

ನಾಡಿದ್ದು ಅಧ್ಯಯನ ವರ್ಷದ ಕೊನೆ. ನಾಳೆ ಎಂಟು ಮತ್ತು ಒಂಭತ್ತನೇ ತರಗತಿಗೆ ಕೊನೆಯ ಪರೀಕ್ಷೆ. ನಾಡಿದ್ದಿನಿಂದ ಅವರಿಗೆ ರಜೆಯ ಮಜಾ... ಈ ಸಂದರ್ಭದಲ್ಲಿ ಅವಿತೇಶ್ ಬಿಡಿಸಿದ ಸಾಂದರ್ಭಿಕ ಚಿತ್ರ ನಿಮ್ಮ ಮುಂದೆ...

26 March 2010

ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಕ್ತಾಯ

ನಾಳೆ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಮುಕ್ತಾಯವಾಗುತ್ತದೆ. ಈ ಚಿತ್ರ ಬಿಡಿಸಿದ ಅನುಶ್ರೀ ಮತ್ತು ಹಿಂದಿನ ಚಿತ್ರ ಬಿಡಿಸಿದ ಅನುತೇಜ್ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ಅವಳಿ ಜವಳಿಗಳು. ನಾಳೆಯಿಂದ ಅವರಿಗೆ ರಜೆಯ ಮಜಾ... ರಜೆಯ ಸಂತಸಕ್ಕೆ ದಾಟುವ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಶುಭ ಹಾರೈಕೆಗಳು...

23 March 2010

ಅನುತೇಜ್ ಬಿಡಿಸಿದ ಚಿತ್ರ

ಬೇಸಿಗೆಯ ಬೇಗೆಯ ನಡುವೆ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳೇ ಹೆಚ್ಚು ಆಪ್ತವಾಗುತ್ತಿವೆ...

19 March 2010

ಮತ್ತೊಂದು ಚಿತ್ರ

ಶಾಲೆ ಪರೀಕ್ಷೆಯ ಬಿಸಿಯಲ್ಲಿದೆ. ಮೊನ್ನೆ ಸಣ್ಣ ಮಳೆ ಸುರಿದಿದೆ, ಆದರೆ ಬೇಗೆ ಮತ್ತಷ್ಟು ಹೆಚ್ಚಿದೆ. ಎಲ್ಲೋ ಕೆರೆಯ ನೀರಲ್ಲಿ ಮುಳುಗಿದವನ ಕಥೆ ಹೀಗಾಯಿತೆ?

16 March 2010

ಬರಬಹುದೇ ಬೇಸಿಗೆ ಮಳೆ?

ಆಶಿತ್ ಕೃಷ್ಣ ಉಪಾಧ್ಯಾಯ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ. ಈ ಸಂದರ್ಭದಲ್ಲಿ ನಮ್ಮ ಬ್ಲಾಗ್ ಗಾಗಿ ಅವನು ಬರೆದ ಚಿತ್ರ ನಿಮ್ಮ ಮುಂದಿದೆ.

12 March 2010

ವಿಲಿಯಂ ಶೇಕ್ಸ್‌ಪಿಯರ್

ಆಶಿತ್ ಕೃಷ್ಣ ಉಪಾಧ್ಯಾಯ ಬಿಡಿಸಿದ ಒಂದು ಚಿತ್ರ ಇದು.

06 March 2010

ಜನಪ್ರತಿನಿಧಿಯೊಂದಿಗೆ...

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ನಮ್ಮ ಶಾಲೆಯ ಹಳೆವಿದ್ಯಾರ್ಥಿ. ಶಾಲೆಯ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಹೃದಯಿ. ಯು.ಪಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಮೊನ್ನೆ ವಿಶೇಷ ಸಂದರ್ಶನ ನೀಡಿದ್ದರು. ವಿದ್ಯಾರ್ಥಿಗಳು ಪಂಚಾಯತು ಕಾರ್ಯ ಕಲಾಪಗಳ ಕುರಿತಾಗಿ ಮಾಹಿತಿಗಳನ್ನು ಪಡೆದುಕೊಂಡರು.

05 March 2010

ಆಶ್ರಯದಲ್ಲಿ ಒಂದು ದಿನ...

ಕನ್ನೆಪ್ಪಾಡಿ ಬಳಿಯಲ್ಲಿ ಒಂದು ಹಿರಿಯರ ಮನೆ ಇದೆ, ಅಧ್ಯಾಪಿಕೆಯಾಗಿದ್ದ ಶಾರದಾ ಟೀಚರ್ ಮತ್ತು ಸಂಗಡಿಗರು ಕಟ್ಟಿ ಬೆಳೆಸಿದ ಈ ಮನೆಯಲ್ಲಿ ಸಂತಸದಲ್ಲಿ ಕಳೆಯುತ್ತಿರುವ ಜೀವನ ಸಂಧ್ಯಾ ಕಾಲದಲ್ಲಿರುವ ಹಿರಿಯರಿದ್ದಾರೆ. ನಮ್ಮ ಶಾಲಾ ವಿದ್ಯಾರ್ಥಿಗಳ ಪ್ರಯಾಣ ಕಳೆದ ವಾರ ಆ ‘ಆಶ್ರಯ’ಧಾಮದ ಕಡೆಗೆ, ಒಂದಷ್ಟು ಹಾಡು, ಭಜನೆ, ನಾಟಕ, ಸಂಗೀತ... ಹೀಗೆಲ್ಲ.

02 March 2010

ಸಹಾಯ ನಿಧಿ ಹಸ್ತಾಂತರ

ಕಳೆದ ಅಕ್ಟೋಬರ್ ೧೭, ೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ದಾರುಣವಾಗಿ ಮೃತಪಟ್ಟ ನಮ್ಮ ಶಾಲಾ ವಿದ್ಯಾರ್ಥಿಗಳಾದ ಅಜೀಷ್, ಅಜಿತ್, ಅಭಿಲಾಶ್, ರತನ್ ಕುಮಾರ್ ಅವರ ಕುಟುಂಬದ ಸಹಾಯಾರ್ಥವಾಗಿ ಜಿಲ್ಲೆಯ ವಿವಿಧ ಶಾಲೆಗಳಿಂದ, ಸಹೃದಯರಿಂದ ಸಂಗ್ರಹಿಸಿದ ರೂ. ೧,೮೧,೬೦೩/-ನ್ನು ೦೨.೦೩.೨೦೧೦ ಮಂಗಳವಾರ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಕೆ.ಮೋಹನದಾಸ್ ಮೃತರ ಕುಟುಂಬಕ್ಕೆ ನೀಡಿದರು. ನಾರಾಯಣ ಮತ್ತು ರಾಘವ ಇವರು ಮೊತ್ತವನ್ನು ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಜಯದೇವ ಖಂಡಿಗೆ, ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ, ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಪತ್ರಕರ್ತರ ಸಂಘಟನೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಿಬಿ ಜೋನ್ ಉಪಸ್ಥಿತರಿದ್ದರು.