Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

16 December 2015

ಚೈತನ್ಯ ಸಂರಕ್ಷಣಾ ಯಜ್ಞ


ರಾಷ್ಟ್ರೀಯ ಚೈತನ್ಯ ಸಂರಕ್ಷಣಾ ದಿನದ ಆಚರಣೆಯ ಅಂಗವಾಗಿ 14.12.2015 ಸೋಮವಾರ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. ಶಾಲಾ ಮುಖ್ಯೋಪಾಧ್ಯಾಯರಾದ ಸಿ.ಎಚ್.ವೆಂಕಟರಾಜ ಪ್ರತಿಜ್ಞಾ ವಿಧಿ ಬೋಧಿಸಿದರು.

10 December 2015

ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ನಮ್ಮ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿ ಶುಭರಾಜ್. ಕೆ 16 ವರ್ಷಕ್ಕಿಂತ ಕೆಳಗಿನ ಹುಡುಗರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಥ್ರೋ ಬಾಲ್ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾನೆ. ಈತ ಕನ್ನೆಪ್ಪಾಡಿ ನಿವಾಸಿ ಬಾಲಕೃಷ್ಣ. ಪಿ ಮತ್ತು ಕುಸುಮಾ ಇವರ ಪುತ್ರ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈತ ತರಬೇತಿ ಪಡೆಯುತ್ತಿದ್ದಾನೆ.

ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

   ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನುಷಾ.ಬಿ 16 ವರ್ಷಕ್ಕಿಂತ ಕೆಳಗಿನ ಹುಡುಗಿಯರಿಗಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾಟದಲ್ಲಿ ಕೇರಳ ರಾಜ್ಯದ ತಂಡವನ್ನು ಪ್ರತಿನಿಧಿಸಿ ಆಡಲು ಆಯ್ಕೆಯಾಗಿದ್ದಾಳೆ. ಈಕೆ ಬೇಳ ಕಟ್ಟತ್ತಂಗಡಿ ನಿವಾಸಿ ಮಾಧವ.ಬಿ ಮತ್ತು ಲಕ್ಷ್ಮಿ. ಕೆ.ಬಿ ಇವರ ಪುತ್ರಿ. ನಮ್ಮ ಶಾಲೆಯ ಶಾರೀರಿಕ ಶಿಕ್ಷಕ ಎಂ.ಸೂರ್ಯನಾರಾಯಣ ಇವರಿಂದ ಈಕೆ ತರಬೇತಿ ಪಡೆಯುತ್ತಿದ್ದಾಳೆ.

08 December 2015

ಸಂಸ್ಕೃತೋತ್ಸವದಲ್ಲಿ ಪ್ರಶಸ್ತಿ



ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕೃತೋತ್ಸವದಲ್ಲಿ 78 ಅಂಕ ಗಳಿಸಿ ನಮ್ಮ ಶಾಲಾ ತಂಡವು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಮತ್ತು ಪ್ರೌಢಶಾಲಾ ವಿಭಾಗದ ಸಂಸ್ಕೃತೋತ್ಸವದಲ್ಲಿ 86 ಅಂಕ ಗಳಿಸಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದಿದೆ. ಶುಭಾಶಯಗಳು...

ವಿಜ್ಞಾನ ಮೇಳ - ರಾಜ್ಯ ಮಟ್ಟದಲ್ಲಿ ಬಹುಮಾನ


ಕೊಲ್ಲಂನಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಅಕ್ಷತಾ.ಡಿ (ಎಡನಾಡು ಗ್ರಾಮದ ಡಿ.ಗಣಪತಿ ಭಟ್ - ಸಾವಿತ್ರಿ ಇವರ ಪುತ್ರಿ) ಮತ್ತು ನಿಸರ್ಗ.ಕೆ (ಕೇಶವಪ್ರಸಾದ್ ಕೊಡ್ವಕರೆ - ಭಾರತಿ. ಎಂ.ಜಿ ಇವರ ಪುತ್ರಿ) ಮಾಲಿನ್ಯ ಸಂಸ್ಕರಣೆಯ ಕುರಿತಾಗಿ ಪ್ರದರ್ಶಿಸಿದ ಸ್ಥಿರ ಮಾದರಿಯು ‘ಬಿ’ ಗ್ರೇಡ್ ಸಹಿತ ಬಹುಮಾನವನ್ನು ಪಡೆದಿದೆ. ಒಂಭತ್ತನೇ ತರಗತಿ ವಿದ್ಯಾರ್ಥಿಗಳಾದ ಚಿನ್ಮಯ ಭಟ್.ಕೆ.ಕೆ (ಕಳತ್ತೂರು ಕಲ್ಪತರು ನಿವಾಸಿ ಕೆ.ಕೆ.ಲಕ್ಷ್ಮೀನಾರಾಯಣ ಭಟ್ - ಪರಮೇಶ್ವರಿ.ಕೆ.ಕೆ ಇವರ ಪುತ್ರ) ಮತ್ತು ಶರಣ್ ಕುಮಾರ್ (ಬೇಳ ದೊಡ್ಡಡ್ಕ ನಿವಾಸಿ ಹರಿಶ್ಚಂದ್ರ ಶೆಟ್ಟಿ - ಶಾಲಿನಿ ಇವರ ಪುತ್ರ) ಜೈವಿಕ ಕೀಟನಾಶಕದ ಕುರಿತಾಗಿ ಮಂಡಿಸಿದ ಸಂಶೋಧನಾತ್ಮಕ ಪ್ರೋಜೆಕ್ಟ್ ‘ಎ’ ಗ್ರೇಡ್ ಪಡೆದಿದೆ. ಇವರಿಗೆ ಶುಭಾಶಯಗಳು...