Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

24 September 2010

ಶಾಲಾ ವಿಜ್ಞಾನ ಮೇಳ

ಶಾಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಇಂದು ಜರಗಿತು. ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಸ್ತುಪ್ರದರ್ಶನ ವೀಕ್ಷಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು.

ಉದ್ಯೋಗ ಮಾಹಿತಿ

“ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಲ್ಲಿ ಮಲಯಾಳದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಉದ್ಯೋಗ ಕುರಿತಾದ ಮಾಹಿತಿ ಕಡಿಮೆ ಇದೆ. ಮಲಯಾಳದ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದರ ಮೂಲಕ ಉದ್ಯೋಗಕ್ಕೆ ಅಗತ್ಯವಾದ ಕನಿಷ್ಟ ವಿದ್ಯಾಭ್ಯಾಸ ಕುರಿತಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಕನ್ನಡ ವಿದ್ಯಾರ್ಥಿಗಳಿಗೆ ಸಹಾಯಕವಾಗಬಲ್ಲ ಉದ್ಯೋಗ ಮಾಹಿತಿ ನೀಡುವದಕ್ಕೆಂದೇ ಮೀಸಲಾದ ಪತ್ರಿಕೆಗಳ ಕೊರತೆ ಇರುವುದರಿಂದ ಕನ್ನಡ ವಿದ್ಯಾರ್ಥಿಗಳು ಉತ್ತಮ ಅವಕಾಶದಿಂದ ವಂಚಿತರಾಗುತ್ತಿದ್ದಾರೆ" ಎಂದು ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿ ಯು.ಸುಕುಮಾರನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ “ಎಸ್.ಎಸ್.ಎಲ್.ಸಿ ನಂತರ ಮುಂದೇನು?" ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಹಿರಿಯ ಅಧ್ಯಾಪಕ ಕೆ.ಶಂಕರನಾರಾಯಣ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್.ವಿ.ಭಟ್ ಸ್ವಾಗತಿಸಿದರು. ಅಧ್ಯಾಪಕ ಟಿ.ಕೃಷ್ಣಪ್ರಸಾದ್ ವಂದಿಸಿದರು.

15 September 2010

ಮಿಥುನ್ ಬಿಡಿಸಿದ ಚಿತ್ರ

ಮಿಥುನ್. ಪಿ.ಎಸ್ ಈಗ ಶಾಲಾ ವಿದ್ಯಾರ್ಥಿ ಮುಖಂಡ. ಕಲಿಯುವುದರಲ್ಲೂ ಮುಂದೆ, ಆಟೋಟದಲ್ಲೂ ಪ್ರಾವೀಣ್ಯ ಪಡೆದವ. ಅವ ಬಿಡಿಸಿದ ಚಿತ್ರ ನಿಮ್ಮ ಮುಂದೆ ಇರಿಸಿದ್ದೇವೆ.

08 September 2010

ಪೆನ್ಸಿಲ್ ಚಿತ್ರ

ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಇದು ಹತ್ತನೇ ತರಗತಿಯ ವಿನೋದ್ ಕುಮಾರ್ ಬಿಡಿಸಿದ ಚಿತ್ರ.

06 September 2010

ಶಿಕ್ಷಕರ ದಿನಾಚರಣೆ

“ಸಮಾಜಕ್ಕೆ ಶಿಕ್ಷಕರ ಮಹತ್ವವನ್ನು ಸಾರಿದ ಧೀಮಂತ ವ್ಯಕ್ತಿ ಡಾಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಕೊಂಡಾಡುವುದು ಅವರ ಜೀವನ ಸಂದೇಶವನ್ನು ಮೆಲುಕು ಹಾಕಲು ಉತ್ತಮ ಅವಕಾಶವನ್ನು ನೀಡುತ್ತದೆ. ಶಾಲೆಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಗೌರವಿಸಲು ಅವಕಾಶವನ್ನು ಒದಗಿಸಿಕೊಡುತ್ತದೆ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಗುರುಭಕ್ತಿ ಬೆಳೆಯುತ್ತದೆ" ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ೦೬.೦೯.೨೦೧೦ ಸೋಮವಾರದಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಿಕ್ಷಕರಾದ ಚಂದ್ರಶೇಖರ ರೈ ಮತ್ತು ಪರಮೇಶ್ವರಿ. ವೈ ವಿದ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಸ್ವಾಗತಿಸಿದರು. ಶಿಕ್ಷಕಿ ಮಾಲತಿ.ಎಂ ವಂದಿಸಿದರು.

01 September 2010

ಶ್ರೀಕೃಷ್ಣ ಜಯಂತಿ


“ಶ್ರೀಕೃಷ್ಣ ಜಗತ್ತಿಗೆ ನೀಡಿದ ಮಹಾನ್ ಸಂಪತ್ತು ಭಗವದ್ಗೀತೆ. ಮನಸ್ಸು ತಲ್ಲಣಗೊಂಡು ಸಂಕಷ್ಟದಲ್ಲಿದ್ದಾಗ ಭಗವದ್ಗೀತೆಯ ಸಾಲುಗಳು ನಮಗೆ ಸ್ಫೂರ್ತಿ ನೀಡುತ್ತವೆ. ಶ್ರೀಕೃಷ್ಣ ಮತ್ತು ಭಗವದ್ಗೀತೆಯಂತೆ ಜೀವನ ಸಂಕಷ್ಟಗಳನ್ನು ನಿವಾರಿಸುವ ವಿಚಾರಗಳನ್ನು ನಾವು ಯಾವತ್ತೂ ನೆನಪಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ವಿದ್ಯಾಲಯಗಳಲ್ಲಿ ಶ್ರೀಕೃಷ್ಣ ಜಯಂತಿ ಉತ್ಸವದ ಆಚರಣೆ ಸ್ತುತ್ಯರ್ಹ ಕಾರ್ಯ" ಎಂದು ಪಾಣಾಜೆ ಸುಬೋಧ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಹೇಳಿದರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬೊಳುಂಬು ಸುಬ್ರಾಯ ಭಟ್ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಎಂ.ವಿ.ಭಟ್ ಮಧುರಂಗಾನ ಬಹುಮಾನ ವಿತರಿಸಿದರು. ಶಾಲಾ ವಿದ್ಯಾರ್ಥಿ ಮುಖಂಡ ಮಿಥುನ್ ಪಿ.ಎಸ್ ವರದಿ ವಾಚಿಸಿದರು. ಹಿರಿಯ ಅಧ್ಯಾಪಕರಾದ ಸುಬ್ರಹ್ಮಣ್ಯ ವಿ.ಭಟ್ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.

ಮನರಂಜನಾ ಕಾರ್ಯಕ್ರಮದ ಅಂಗವಾಗಿ ಶಾಲೆಯ ಪೂರ್ವ ವಿದ್ಯಾರ್ಥಿ ಸರಳಿ ಈಶ್ವರ ಪ್ರಕಾಶ್ ಮತ್ತು ಬಳಗದವರಿಂದ ‘ಸಂಗೀತ ಸ್ವರ ಸಿಂಚನ’ ಕಾರ್ಯಕ್ರಮ ಜರಗಿತು.