Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

30 January 2016

ಫೆಬ್ರವರಿ 3 ರಂದು ಶಾಲಾ ವಾರ್ಷಿಕೋತ್ಸವ, ಬನ್ನಿ


ನಮ್ಮ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು 03.02.2016ನೇ ಬುಧವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ನಿರ್ವಹಿಸಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಡಿ.ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಪ್ಪಣ್ಣ ಸೀತಾಂಗೋಳಿ ಮತ್ತು ಚಂದ್ರಹಾಸ ರೈ ಶುಭಾಶಂಸನೆಗೈಯುವರು. ತಾವೆಲ್ಲರೂ ಬರಬೇಕಾಗಿ ಅಪೇಕ್ಷೆ.