Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

06 June 2016

ವಿಶ್ವಪರಿಸರ ದಿನಾಚರಣೆ

ಇಂದು ನಮ್ಮ ಶಾಲೆಯಲ್ಲಿ ಜರಗಿದ ವಿಶ್ವಪರಿಸರ ದಿನಾಚರಣೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಶಿಕ್ಷಕರಾದ ಗೋವಿಂದ ಶರ್ಮ.ಕೆ, ಇಕೋ ಕ್ಲಬ್ ಸಂಚಾಲಕ ಶಿವಪ್ರಕಾಶ್.ಎಂ.ಕೆ ಉಪಸ್ಥಿತರಿದ್ದರು.

01 June 2016

ಶಾಲಾ ಪ್ರವೇಶೋತ್ಸವ

ಈ ಬಾರಿಯ ಶಾಲಾ ಪ್ರವೇಶೋತ್ಸವ ಬದಿಯಡ್ಕ ಪಂಚಾಯತು ಮಟ್ಟದ ಆಚರಣೆಯೊಂದಿಗೆ ನಮ್ಮ ಶಾಲೆಯಲ್ಲಿ ಜರಗಿತು. ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತಿತರರು ಚಿಣ್ಣರನ್ನು ಶಾಲೆಗೆ ಸ್ವಾಗತಿಸಿದರು. ನೂತನ ಶೈಕ್ಷಣಿಕ ವರ್ಷಕ್ಕೆ ‘ಮಹಾಜನ’ ದ ಶುಭಾಶಯಗಳು...