Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

06 July 2009

ನೀರ್ಚಾಲಿನಲ್ಲಿ ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನೆ

“ಸ್ವಾತಂತ್ರ್ಯ ದೊರೆತ ಕೆಲವೇ ವರ್ಷಗಳಲ್ಲಿ ನಾಡಿನ ಇತಿಹಾಸದಲ್ಲಿ ಕೇಳರಿಯದ ಬದಲಾವಣೆಗಳು ಬಂದಿವೆ. ಸ್ವಾತಂತ್ರ್ಯ ದೊರೆಯುವ ಕಾಲಘಟ್ಟದಲ್ಲಿ ಇದ್ದ ಒಕ್ಕಲುತನ, ಜಮೀನ್ದಾರಿ ಪದ್ಧತಿಗಳು ಮೂಲೆಗುಂಪಾಗುತ್ತಿವೆ. ಇತಿಹಾಸದಲ್ಲಿ ಎಲ್ಲೂ ಸಂಭವಿಸದಿದ್ದ ಕೂಲಿ ಕಾರ್ಮಿಕರ ಕೊರತೆ ಈಗಿನ ಕೃಷಿಯನ್ನೂ ಕೃಷಿ ಕಾರ್ಮಿಕರನ್ನೂ ಬಹುವಾಗಿ ಕಾಡುತ್ತಿದೆ" ಎಂದು ಹಿರಿಯ ಕೃಷಿಕ ಪೆರ್ವ ನರಸಿಂಹ ಭಟ್ ಅಭಿಪ್ರಾಯಪಟ್ಟರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ೦೩.೦೭.೨೦೦೯ ಶುಕ್ರವಾರದಂದು ಸಮಾಜ ವಿಜ್ಞಾನ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉದ್ಘಾಟಿಸಿದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಮುಕ್ತೇಶ ಸ್ವಾಗತಿಸಿ, ವಿನೀತ್ ಶಂಕರ್.ಎಚ್ ವಂದಿಸಿದರು. ಸಮಾಜ ವಿಜ್ಞಾನ ಅಧ್ಯಾಪಕ ಎಚ್.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.

1 comment:

  1. ವೊಕ್ಕಲುತನ ಕಡಿಮೆಯಾಗಿ ಎಲ್ಲರೂ ಸುಖವಾಗಿದ್ದರೆ ಚೆನ್ನಾಗಿತ್ತು.ಇಂದು ಅತ್ತ ವಿದ್ಯಾಭ್ಯಾಸವೂ ಇಲ್ಲ ಇತ್ತ ಶಾರೀರಿಕ ಕೆಲಸ ಸಾಧ್ಯವಿಲ್ಲ ಎನ್ನುವ ಸ್ತಿತಿ ನಿರ್ಮಾಣವಾಗಿದ್ದು ಶೋಚನೀಯ.ಎಲ್ಲರೂ ಪೇಟೆಗೆ ಹೋಗಿ ಅಂಗಡಿಗಳಲ್ಲಿ ದಿನಕ್ಕೆ ೫೦ ರುಪಾಯಿಗೆ ದುಡಿದು ೬೦ ರುಪಾಯಿಯ ಶರಾಬು ಕುಡಿಯುವುದು ಸಾಮಾನ್ಯ.ಸ್ವಲ್ಪ ಸಮಯ ಹೋದರೆ ಜನರಿಗೆ ಎಚ್ಚರವಾಗುತ್ತೋ ಏನೋ.

    ReplyDelete