ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿ ಎಂಟು ವರ್ಷಗಳ ಕಾಲ
ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಯು. ರವಿಕೃಷ್ಣ ಇವರನ್ನು ಕೇರಳ ಪ್ರೈವೇಟ್
ಸೆಕೆಂಡರಿ ಸ್ಕೂಲ್ಸ್ ಹೆಡ್‍ಮಾಸ್ಟರ್ಸ್ ಅಸೋಸಿಯೇಷನ್ 10.05.2014 ಶನಿವಾರ
ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ
2013-14ನೇ ಸಾಲಿನ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದ ಸಂಸದ ಆಂಟೋ ಆಂಟನಿ ಪ್ರಶಸ್ತಿ ವಿತರಿಸಿದರು.
