Flash

Flash: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಹತ್ತು ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 September 2009

“ಯಕ್ಷಗಾನ ಗಂಡುಕಲೆ”:- ಮಾಧವ ತಲ್ಪಣಾಜೆ

“ಕರಾವಳಿ ಮಲೆನಾಡಿನ ಗಂಡುಕಲೆ ಯಕ್ಷಗಾನವು ಕಲಾಲೋಕಕ್ಕೆ ನೀಡಿದ ಸಂಭಾವನೆ ಅನನ್ಯವಾದುದು, ಈ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎಂದು ಯಕ್ಷಗಾನ ಕಲಾವಿದ ಮಾಧವ ತಲ್ಪಣಾಜೆ ಅಭಿಪ್ರಾಯಪಟ್ಟರು. ಅವರು ೦೮.೦೯.೨೦೦೯ ಮಂಗಳವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್.ಪಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕನೇ ತರಗತಿ ವಿದ್ಯಾರ್ಥಿಗಳು ಯಕ್ಷಗಾನ ಕುರಿತಾದ ಸಂವಾದ ನಡೆಸಿದರು. ಶಿಕ್ಷಕಿ ಮಾಲತಿ ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಸಂದೇಶ ರೈ ವಂದಿಸಿದರು.

1 comment:

  1. ನಿಮ್ಮ ಬ್ಲಾಗ್ ಹಾಗೂ ಉದ್ದೇಶ ಎರಡೂ ಚೆನ್ನಾಗಿದೆ. ನನ್ನ ಸ್ವಂತ ಊರು ಉಡುಪಿಯ ಬಳಿಯ ಕಾಪು. ನಿಮ್ಮ ಶಾಲೆಗೆ ಭೇಟಿ ಕೊಟ್ಟು ಪುಟಾಣಿಗಳಿಗೆ ಉಪಯೋಗವಾಗುವ ಯಾವುದಾದರು ಕೆಲಸ ಮಾಡುವ ಆಸೆ ಇದೆ. pachujanu@gmail.com ನನ್ನ ಇ ವಿಳಾಸ. ದಯವಿಟ್ಟು ಇ ಪತ್ರ ಬರೆಯಿರಿ. ವಂದನೆಗಳು - ಪ್ರಶಾಂತ್

    ReplyDelete