ನಮ್ಮ ಶಾಲಾ ಚಿತ್ರಕಲಾ ಅಧ್ಯಾಪಕರ ಆಸಕ್ತಿಯಲ್ಲಿ ಗರಿಗೆದರಿದ ಸಂಘ ಶಾಲಾ ಆರ್ಟ್ಸ್ ಕ್ಲಬ್. ವಿದ್ಯಾರ್ಥಿಗಳಿಗೂ ಈ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಮೊನ್ನೆ ಮಾದಕ ದ್ರವ್ಯ ವಿರೋಧಿ ದಿನ ಸರಿದು ಹೋಗಿರುವುದು ನಿಮಗೆಲ್ಲ ತಿಳಿದ ವಿಚಾರ. ಆರ್ಟ್ಸ್ ಕ್ಲಬ್ ಉದ್ಘಾಟನೆಯ ಜೊತೆ ಮಾದಕ ದ್ರವ್ಯ ವಿರೋಧಿ ಪೋಸ್ಟರ್ ರಚನಾ ಸ್ಪರ್ಧೆಯೂ ಜರಗಿತು. ಆ ಸಂದರ್ಭದ ಒಂದು ಝಲಕ್ ಇಲ್ಲಿದೆ...
ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಧ ಕ್ಲಬ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ಇಂದು ಮಧ್ಯಾಹ್ನ ಶಾಲೆಯಲ್ಲಿ ಜರಗಿತು. ಹಿರಿಯ ಅಧ್ಯಾಪಕರಾದ ಕೆ.ನಾರಾಯಣ ಭಟ್ ಉದ್ಘಾಟಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಕ್ಲಬ್ ಮತ್ತು ಗಣಿತ ಕ್ಲಬ್ ವಾರ್ಷಿಕ ಚಟುವಟಿಕೆಗಳನ್ನು ಆರಂಭಿಸಿದವು.