Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 February 2021

ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನ - ಧನ್ಯವಾದಗಳು

ಬೆಂಗಳೂರು
15-02-2021

ನಮ್ಮ ಮಾತೃ ಶ್ರೀಯವರಾದ ದಿ. ಕೋಳಾರಿ ಕೋರಿಕ್ಕಾರು ಕೃಷ್ಣ ಭಟ್ಟರ ಧರ್ಮಪತ್ನಿ, ದಿ. ಶ್ರೀಮತಿ ಲಕ್ಷ್ಮಿ ಅಮ್ಮನವರು ನಮ್ಮ ನ್ನಗಲಿ ಇಂದಿಗೆ ಐದು ತಿಂಗಳು. ಅವರಿಗೆ ದೊರೆತ ಅತ್ಯಲ್ಪ ಶಾಲಾ ಶಿಕ್ಷಣವನ್ನು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯು ನೀಡಿತ್ತು ಎಂಬುದು ಹೆಮ್ಮೆಯ ವಿಚಾರವಾಗಿದೆ.

ನಮ್ಮ ಮಾತೃಶ್ರೀಯವರು ನಮಗೆ ನೀಡಿದ ಆರಂಭಿಕ ಶಿಕ್ಷಣವೂ ಜೀವನ ಮೌಲ್ಯಗಳೂ ಅಳತೆಗೆ ನಿಲುಕದಷ್ಟು. ನಾವು ಏಳು ಜನ ಮಕ್ಕಳನ್ನು ಬಡತನ ಹಾಗೂ ಸೌಲಭ್ಯ ರಹಿತ ದಿನಗಳಾದ 1950-80ರ ದಶಕಗಳಲ್ಲಿ ಸ್ಪೂರ್ತಿ ಮತ್ತು ಉತ್ಸಾಹಗಳನ್ನು ತುಂಬಿ ಮುನ್ನಡೆಸಿದ ಅವರ ದಿವ್ಯ ಚೇತನಕ್ಕೆ ನಮ್ಮ ಅನಂತಾನಂತ ನಮನಗಳು.

1930-40ರ ದಶಕಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣವು ಒಂದು ಕನಸಿನ ಮಾತು. ನಮ್ಮ ಮಾತಶ್ರೀ ಯವರೂ ಕೂಡಾ  ಶಿಕ್ಷಣ ವಂಚಿತರಾದ ಆ ಕಾಲದ‌ ಹೆಣ್ಣು ಮಕ್ಕಳಲ್ಲಿ ಒಬ್ಬರು. ಅವರ ಶಾಲಾ ಶಿಕ್ಷಣವು‌ 3ನೇ ತರಗತಿ‌ಯಿಂದ ಆರಂಭವಾಗಿ 6ನೇ ತರಗತಿಯಲ್ಲಿ ಕೊನೆಗೊಂಡಿತ್ತು. ತಮ್ಮ 13ನೇ ವಯಸ್ಸಿನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ ಅವರು ಮತ್ತೆಂದೂ ಯಾವ ವಿಧವಾದ ವಿದ್ಯಾಭ್ಯಾಸವನ್ನೂ ಮುಂದುವರಿಸಲಾಗಲಿಲ್ಲ. ಹೀಗಿದ್ದೂ ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿ ಅವರನ್ನು ಉನ್ನತ ಶಿಕ್ಷಣದತ್ತ ಮುನ್ನಡೆಸಿದರು. ತಮ್ಮ ಮಕ್ಕಳಲ್ಲದೆ ಕುಟುಂಬದ ಹಾಗೂ ಕುಟುಂಬೇತರ ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಹಕರಿಸಿದ ಅವರ ದಿವ್ಯಾತ್ಮಕ್ಕೆ ಒಂದು ಕಿರು ಕಾಣಿಕೆಯಾಗಿ, ಅವರು ಕಲಿತ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ (ಯರಿ)ಗೆ  ಒಂದು ನಗದು ಬಹುಮಾನವನ್ನು ಕೊಡಮಾಡಲು ತೀರ್ಮಾನಿಸಿದ್ದೇವೆ.

ನಮ್ಮ ಪೇಕ್ಷೆಯನ್ನು ಅಂಗೀಕರಿಸಿ‌ ಶ್ರೀಮತಿ ಲಕ್ಷ್ಮಿ ಅಮ್ಮ ಸ್ಮಾರಕ ಬಹುಮಾನವನ್ನು ಅನುಷ್ಠಾನಗೊಳಿಸಿದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಆಡಳಿತ ಮಂಡಳಿ, ಮೂಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದಕ್ಕೆ ನಾವು ಆಭಾರಿಳು.

ಈ ಕಾರ್ಯದಲ್ಲಿ ನಮ್ಮ ಪರವಾಗಿ ಅಪೇಕ್ಷೆಯನ್ನು ಮಂಡಿಸಿ ಎಲ್ಲಾ ವಿಧವಾದ ಸಹಕಾರವನ್ನೂ ನೀಡಿದ ನಮ್ಮ ಸೋದರ ಸಂಬಂಧಿ ಮತ್ತು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಅಧ್ಯಾಪಕರೂ ಆಗಿರುವ ಶ್ರೀ ಗೋವಿಂದ ಶರ್ಮ, ಕೋರಿಕ್ಕಾರು ಅವರಿಗೆ ನಮ್ಮೆಲ್ಲರ ಅಕ್ಕರೆಯ ಧನ್ಯವಾದಗಳು.


ಇಂತಿ,
ದಿ. ಕೋಳಾರಿ ಕೋರಿಕ್ಕಾರು  ಕೃಷ್ಣ ಭಟ್ ಮತ್ತು ಶ್ರೀಮತಿ ಲಕ್ಷ್ಮಿ ಅಮ್ಮ ನವರ ಮಕ್ಕಳ ಪರವಾಗಿ,


ಮಗಳು,




ಶ್ರೀಮತಿ ಡಾ. ಕೆ. ಸುಮಂಗಲಾ ಭಟ್
ಸಂಸ್ಥಾಪಕ ನಿರ್ದೇಶಕರು
ಡೆಕ್ಟ್ರಾಸ್ ಟೆಕ್ನಾಲಜೀಸ್
ಕೆಂಗೇರಿ,‌ ಬೆಂಗಳೂರು -560060.

No comments:

Post a Comment