Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

27 August 2009

ಕವನ - ಸಂಧ್ಯಾ ಸಮಯ :ಮಾನಸ. ಪಿ.ಯಸ್

ಸಂಜೆಯ ಸಮಯದಿ ಮುಳುಗುವ ಸೂರ್ಯನ

ಕಿರಣದ ಸೊಬಗನು ನೋಡಿದೆಯಾ

ಕಡಲಲಿ ನರ್ತನವಾಡುವ ಕಿರಣದ

ಅಲೆಗಳ ಅಂದವ ಸವಿಯುವೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಕೆಂಬಣ್ಣದ ಬಾನಲಿ ಹೊಳೆಯುವ ಮೇಘದಿ

ಹರಿಯುವ ರಕ್ತವ ನೋಡಿದೆಯಾ

ಸಂಜೆಯ ಕಂಪಲಿ ಮಕ್ಕಳ ಆಟದ

ಅಂದವ ನೀನು ಸವಿಯುವೆಯ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ಚಿಲಿಪಿಲಿಗುಟ್ಟುವ ಹಕ್ಕಿಯು ತನ್ನಯ

ಗೂಡನು ಸೇರುವ ಸಂತಸ ಸವಿಯುವೆಯಾ

ಮೆಲ್ಲನೆ ತನ್ನಯ ಮರಿಗಳ ಮುದ್ದಿಸಿ

ಹಣ್ಣನು ಕೊಡುವುದ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

ತಣ್ಣನೆ ಗಾಳಿಯು ಬೀಸುತ ಮೆಲ್ಲಗೆ

ಕಂಪನು ತರುವುದ ಸವಿಯುವೆಯಾ

ಗಾಳಿಯ ರಭಸಕೆ ಮಾಮರ ಚಾಮರ

ಮಾಡುವ ನರ್ತನ ನೋಡಿದೆಯಾ

ಮುಸ್ಸಂಜೆಯ ಸೊಬಗನು ಸವಿಯುವೆಯಾ

3 comments:

  1. ತುಂಬಾ ಉತ್ತಮ .......ಈ ಬ್ಲಾಗಿನಲ್ಲಿ ಇನ್ನು ಇಂತಹ ಸುಂದರ ಕವನಗಳು ಹಾಗು ಲೇಖನಗಳು ಮೂಡಿಬರಲಿ ಎ೦ದು ಹಾರೈಸುತ್ತೇನೆ.
    ಅಗಸ್ಟಿನ್ ಬರ್ನಾಡ್
    ಟ್ರೈನರ್ ಐ.ಟಿ.ಸ್ಕೂಲ್ ಪ್ರಾಜೆಕ್ಟ್
    ಕಾಸರಗೋಡು.

    ReplyDelete
  2. ನಿಮ್ಮ ಸಲಹೆಯ ಪ್ರಕಾರ ನಮ್ಮ ವಿದ್ಯಾರ್ಥಿಗಳೇ ಲಿನಕ್ಸ್ ನಲ್ಲಿ ಟೈಪಿಸಿ ಪ್ರಕಟಿಸಿದ ಕವನ ಅದು. ಥ್ಯಾಂಕ್ಸ್ ...... ಬಹುಶ: ಇನ್ನು ಮುಂದಿನ ಹೆಚ್ಚಿನ ಬರವಣಿಗೆಗಳೂ ಟೈಪಿಂಗೂ ಅವರದ್ದೇ ಆಗಿರುತ್ತದೆ.

    ReplyDelete