Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

23 December 2009

ನಮಗೆ ಕ್ರಿಸ್ಮಸ್ ರಜೆ...

ಕ್ರಿಸ್ಮಸ್ ರಜೆ ಆರಂಭವಾಗಿದೆ, ನಾಡಿದ್ದು ೨೮ಕ್ಕೆ ಶಾಲೆ ಪುನಃ ತೆರೆಯಲಿದೆ. ಈ ಮಧ್ಯೆ ಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಿಗೆ ಆಯ್ಕೆಯಾದವರು ಮತ್ತು ರಾಜ್ಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಯಾರಿಯಲ್ಲಿ ಮಗ್ನರಾಗಿದ್ದಾರೆ. ಅಂದ ಹಾಗೆ ಕಳೆದ ವಾರ ಅಡೂರಿನಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದು ಸಂಸ್ಕೃತೋತ್ಸವ ಯುಪಿ ವಿಭಾಗ ಚಾಂಪಿಯನ್, ಹೈಸ್ಕೂಲು ವಿಭಾಗ ಚಾಂಪಿಯನ್ ಮತ್ತು ಸಂಸ್ಕೃತೋತ್ಸವ ಸಮಗ್ರ ಪ್ರಶಸ್ತಿಗಳನ್ನು ಶಾಲೆಗೆ ತಂದಿದ್ದಾರೆ. ಸಂಸ್ಕೃತ ಎಂಬ ಶಾಲೆಯ ಹೆಸರಿಗೆ ಅರ್ಥ ತಂದಿದ್ದಾರೆ. ಈ ಸಾಧನೆ ನಮ್ಮ ಶಾಲೆ ನಿರಂತರವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಡೆಸುತ್ತಿದೆ. ಈ ಜೈತ್ರಯಾತ್ರೆ ಹೀಗೆಯೇ ಮುಂದುವರಿಯುತ್ತಿರಲಿ,ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.

2 comments:

  1. ಭಾಗವಹಿಸಿ ಬಹುಮಾನ ಪಡೆದ ಎಲ್ಲರಿಗೂ ಅಭಿನ೦ದನೆಗಳು.

    "ಈ ಜೈತ್ರಯಾತ್ರೆ ಹೀಗೆಯೇ ಮುಂದುವರಿಯುತ್ತಿರಲಿ"

    ReplyDelete
  2. ಬಹಳ ಸಂತೋಷವಾಗುತ್ತಿದೆ. ೧೯೯೫-೯೬ ರ ಉಪಜಿಲ್ಲಾ ಸಂಸ್ಕೃತೋತ್ಸವದಲ್ಲಿ ನಮ್ಮ ಶಾಲೆ ಸಮಗ್ರ ಪ್ರಶಸ್ತಿ ಯನ್ನು ಪಡೆದಾಗ ಮೇಲಿನ ನೀರ್ಚಾಲಿನಿಂದ ಕನ್ನೆಪ್ಪಾದಿಯವರೆಗೆ ಮೆರವಣಿಗೆ ಯಲ್ಲಿ ಘೋಷಣೆ ಗಳೊಂದಿಗೆ ಭಾಗವಹಿಸಿದ್ದು, ನೆನಪಾಗುತ್ತಿದೆ. ಆ ವರ್ಷ ನಮ್ಮ ಶಾಲೆಯಲ್ಲಿಯೇ ಸಂಸ್ಕೃತೋತ್ಸವ ಜರುಗಿತ್ತು.

    ಅಭಿನಂದನೆಗಳು,
    --ಮಹೇಶ

    ReplyDelete