Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

19 January 2011

ನಮಸ್ಕಾರ, ನಾವು ತೃತೀಯ ವರ್ಷಕ್ಕೆ ಕಾಲಿಡುತ್ತಿದ್ದೇವೆ...

ಒಂದು, ಎರಡು... ವರ್ಷಗಳು ಕಳೆದಿವೆ. ೨೦೦೯ ಜನವರಿ ೧೯ರಂದು ಈ ಬ್ಲಾಗನ್ನು ನಿಮ್ಮೆದುರು ತೆರೆದಿಡುವಾಗ ಇಷ್ಟೆಲ್ಲ ನಿರೀಕ್ಷೆಗಳಿರಲಿಲ್ಲ. ಆದರೆ ಎರಡು ವರ್ಷಗಳಲ್ಲಿ ಈ ಬ್ಲಾಗ್ ನಮಗೆ ಸಂವಹನದ ಹೊಸ ಮಜಲುಗಳನ್ನು ತೆರೆದು ತೋರಿಸಿದೆ. ಕಾಲಉರುಳಿದೆ,ನಿನ್ನೆ ಸಂಜೆ ಶಾಲೆಯಿಂದ ಹೊರಟ ವಿದ್ಯಾರ್ಥಿಗಳು ಕೇರಳ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ತಿರುಗಾಟ ನಿರತರಾಗಿದ್ದಾರೆ. ಎರಡು ವರ್ಷಗಳಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಶಾಲೆಯ ಇನ್ನಷ್ಟು ಪೂರ್ವ ಇದ್ಯಾರ್ಥಿಗಳನ್ನು ಹಿತೈಷಿಗಳನ್ನು ತಲಪಲು ನಮಗೆ ಸಾಧ್ಯವಾಗಿದೆ. ಹಾಗಾಗಿ ನಾವು ಅಂತರ್ಜಾಲದ ಮೂಲಕ ದೇಶ ವಿದೇಶಗಳನ್ನು ತಲಪಿದ್ದೇವೆ ಎಂಬುದನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇವೆ. ಇದಕ್ಕೆ ಈ ಕ್ಷಣದ ಮಾಹಿತಿಯ ಪ್ರಕಾರ ೧೩೦ ಮಂದಿ ಫಾಲೋವರುಗಳು ಇದ್ದಾರೆ ಎಂಬುದಕ್ಕಿಂತ ಹೆಚ್ಚಿನ ದೃಷ್ಟಾಂತ ಬೇಕೇ...

ನಿಮಗೆಲ್ಲ ಈ ಸಂದರ್ಭದಲ್ಲಿ ನಮ್ಮ ಭಾವಪೂರ್ಣ ನಮನಗಳು. ನಮ್ಮನ್ನು ಈ ಹುಟ್ಟುಹಬ್ಬ ಸಂಭ್ರಮದ ತನಕ ಬೆಳೆಸಿದ ನಿಮಗೆ ನಾವು ಆಭಾರಿಗಳು. ಪ್ರೀತಿ ಇರಲಿ...

3 comments:

  1. ಹುಟ್ಟು ಹಬ್ಬದ ಶುಭಾಶಯಗಳು.. Followers/ commentatorsಗಳ ಸಂಖ್ಯೆ ಇನ್ನೂ ಹೆಚ್ಚಾಗಲಿ ಎಂಬ ಶುಭ ಹಾರೈಕೆಗಳು.

    ReplyDelete
  2. ಹುಟ್ಟು ಹಬ್ಬದ ಶುಭಾಷಯಳು. ನಮ್ಮ ಶಾಲೆಯ ನೆನಪು ಮರುಕಳಿಸುವಂತೆ ಮಾಡಿದ ಇದರ ಸ್ರುಷ್ಟಿಕರ್ತರಾದ ನಿಮಗೂ ವಂದನೆಗಳು

    ReplyDelete