ರಮೇಶ ನಾಯಕ್ ನಮ್ಮ ಶಾಲೆಯ ಎಂಟನೇ ತರಗತಿಯ ಹುಡುಗ. ತರಗತಿಯೊಳಗೆ ಸುಪ್ತವಾಗಿ ಉಳಿಯುತ್ತಿದ್ದವನ ಪ್ರತಿಭೆ ನಮ್ಮ ಚಿತ್ರಕಲಾ ಅಧ್ಯಾಪಕರ ಕೈಗೆ ಸಿಕ್ಕಿದ್ದರಿಂದ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಆತ ಪ್ರಶಸ್ತಿಗಳಿಸುವಂತಾಯಿತು. ಶುಭಾಶಯಗಳು.
ಕಳೆದ ಎಂಟೂವರೆ ವರ್ಷಗಳಿಂದ ನೀರ್ಚಾಲು ಶಾಲೆಯಲ್ಲಿ ಅಧ್ಯಾಪಕ, ಅದಕ್ಕೂ ಮೊದಲು ಕೃಷಿಕ,ಹವ್ಯಾಸಿ ಬರಹಗಾರ. ಬ್ಲಾಗ್ ನನ್ನ ಕನಸಿನ ಕೂಸು, ಹಾಗಾಗಿ ಸದ್ಯಕ್ಕೆ ಸಂಪಾದಕ. ಗಡಿನಾಡು ಕಾಸರಗೋಡಿನ ನೆಲದಲ್ಲಿ ಶತಮಾನಗಳಿಂದ ನಿರಂತರ ವಿದ್ಯಾದಾನ ಮಾಡುತ್ತಿರುವ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಜಗದಗಲ ಖ್ಯಾತಿ ಗಳಿಸಿದೆ. ಪೆರಡಾಲದಲ್ಲಿ ಹುಟ್ಟಿ ನೀರ್ಚಾಲಿನಲ್ಲಿ ಬೆಳೆದು ಅನೇಕ ವಿದ್ವಜ್ಜನರನ್ನು ನಾಡಿಗೆ ನೀಡಿದ ಹೆಮ್ಮೆ ಈ ವಿದ್ಯಾಸಂಸ್ಥೆಗಿದೆ. ಇಲ್ಲಿನ ವಿದ್ಯಾರ್ಥಿ - ಅಧ್ಯಾಪಕ ವೃಂದದ ಇ-ಪತ್ರಿಕೆ ಇದು. ಓದಿ, ಪ್ರೋತ್ಸಾಹಿಸಿ.
0 comments:
Post a Comment