Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

06 January 2012

ಕಲೋತ್ಸವ ಪ್ರತಿಭೆಗಳು

ಚೆರ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕಲೋತ್ಸವದಲ್ಲಿ ಸಾಧನೆ ಮೆರೆದ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ರಂಜನಾ. ಕೆ - ಜಾನಪದ ನೃತ್ಯ - ಪ್ರಥಮ ಸ್ಥಾನ
( ಈಕೆ ನಮ್ಮ ಶಾಲಾ ಹಿರಿಯ ಶಿಕ್ಷಕ ಕೆ.ಶಂಕರನಾರಾಯಣ ಶರ್ಮ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ)

ಭಾಗ್ಯಶ್ರೀ .ಕೆ.ಎಸ್ - ಕಥಕ್ಕಳಿ ಸಂಗೀತ -
ಪ್ರಥಮ ಸ್ಥಾನ
( ಈಕೆ ಮುಳ್ಳೇರಿಯಾದ ಅಧ್ಯಾಪಕ ದಂಪತಿಗಳಾದ ಸತ್ಯಶಂಕರ.ಕೆ ಮತ್ತು ಶ್ರೀಕಲಾ ಇವರ ಪುತ್ರಿ)

ಶಾಂತಿ.ಕೆ - ಸಮಸ್ಯಾಪೂರಣಂ - ಪ್ರಥಮ ಸ್ಥಾನ
( ಈಕೆ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಗಣೇಶ್ ಭಟ್ ಮತ್ತು ಉಮಾಮಹೇಶ್ವರಿ ಇವರ ಪುತ್ರಿ)

ಎಲ್ಲರಿಗೂ ಶುಭಾಶಯಗಳು.

1 comment:

  1. ಅಪರೂಪದ ಕಲೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರು...ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.

    ReplyDelete