Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

05 September 2015

ಶ್ರೀಕೃಷ್ಣ ಜಯಂತಿ ಉತ್ಸವ 2015
“ಮಹಾಭಾರತದಲ್ಲಿ ಮಹಾಮಹಿಮನಾದ ಶ್ರೀಕೃಷ್ಣನ ಪಾತ್ರ ಅತ್ಯಂತ ಹೆಚ್ಚು ಪ್ರಧಾನವಾದದ್ದು. ಆತ ಯೋಗ ಪುರುಷ. ಎಲ್ಲೂ ಯುದ್ಧದಲ್ಲಿ ನೇರವಾಗಿ ಭಾಗವಹಿಸಿದವನಲ್ಲ. ‘ಅಹಂ’ ಅನ್ನು ಅಳಿಸಿ ದೇವರನ್ನೇ ಶರಣು ಎಂದವರನ್ನು ಕೈಬಿಟ್ಟವನೂ ಅಲ್ಲ. ಆದರೆ ಆತ ಚತುರ, ರಾಜಕಾರಣಿ, ಧರ್ಮಶಾಸ್ತ್ರ ಕೋವಿದ. ಸಾಂದರ್ಭಿಕವಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾನೆ. ಕೃಷ್ಣ ಮತ್ತು ಡಾ|ರಾಧಾಕೃಷ್ಣ ಇವರ ಜನ್ಮದಿನಗಳು ಒಂದೇ ದಿನ ಬಂದಿರುವುದು ಈ ವರ್ಷದ ವಿಶೇಷ. ಹೀಗೆ ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹಾಪುರುಷರ ಜನ್ಮದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದುಕೊಡುತ್ತದೆ” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಕುಳಮರ್ವ ಕೇಶವಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವ ಮತ್ತು ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೋಜೆಕ್ಟ್‌ನಲ್ಲಿ ನೋಂದಾವಣೆಗೊಂಡ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಳತ್ತೂರು  ಇವರಿಂದ ದಾಸ ಸಂಕೀರ್ತನೆ ಕಾರ್ಯಕ್ರಮ ಜರಗಿತು.

No comments:

Post a Comment