Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 September 2024

ನೀರ್ಚಾಲಿನಲ್ಲಿ ಅಕ್ಟೋಬರ್ 7 ರಿಂದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಒಲಿಂಪಿಕ್ಸ್



ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಒಲಿಂಪಿಕ್ಸ್ ಈ ಬಾರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. 2024 ಅಕ್ಟೋಬರ್ 7 ರಿಂದ 10 ರ ತನಕ ಶಾಲಾ ಮಕ್ಕಳ ವಿವಿಧ ಕ್ರೀಡಾ ಸ್ಪರ್ಧೆಗಳು ಶಾಲೆಯ ನೀರ್ಚಾಲು ಮತ್ತು ಮಲ್ಲಡ್ಕದ ಮೈದಾನದಲ್ಲಿ ಜರಗಲಿದೆ. ಅಕ್ಟೋಬರ್ 7 ರಂದು ಬೆಳಗ್ಗೆ ಶಾಲಾ ವ್ಯವಸ್ಥಾಪಕರಾದ ಜಯದೇವ ಖಂಡಿಗೆಯವರು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 8 ರಂದು ಬೆಳಗ್ಗೆ ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಅಧ್ಯಕ್ಷತೆಯಲ್ಲಿ ಜರಗುವ ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉಣ್ಣಿತ್ತಾನ್ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಲಿದ್ದಾರೆ.

ಅಕ್ಟೋಬರ್ 10 ಗುರುವಾದ ಅಪರಾಹ್ನ ಸಮಾರೋಪ ಸಮಾರಂಭ ಜರಗಲಿದೆ.

No comments:

Post a Comment