Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

06 May 2009

ಖಂಡಿಗೆ ಶ್ರೀಕೃಷ್ಣ ಭಟ್, ಕೇರ - ಅಸ್ತಂಗತ

ನಮ್ಮ ಶಾಲಾ ಆಡಳಿತ ಮಂಡಳಿಯ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಖಂಡಿಗೆ ಮನೆತನದ ಗೌರವಾನ್ವಿತರಾದ ಖಂಡಿಗೆ ಶ್ರೀಕೃಷ್ಣ ಭಟ್, ಕೇರ ೦೪.೦೫.೨೦೦೯ ಸೋಮವಾರ ಸಂಜೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜೀವನದ ಕೊನೆಯ ಕ್ಷಣದ ತನಕವೂ ಅವರು ತಮ್ಮ ಜವಾಬ್ದಾರಿಗಳಲ್ಲಿ ಸಕ್ರಿಯರಾಗಿದ್ದರು. ಅಡಿಕೆ ಪತ್ರಿಕೆಯ ಪ್ರಕಾಶಕರಾಗಿ, ಪ್ರತಿಷ್ಟಿತ ‘ಕ್ಯಾಂಪ್ಕೊ’ದ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಸಾಮಾಜಿಕ ಸೇವೆಗಳು ಅನೇಕ. ನಮ್ಮ ಬ್ಲಾಗ್ ಲೋಕಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಚೇತನಕ್ಕೆ ನಾವು ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

1 comment:

  1. ಹವ್ದು ,ಒಬ್ಬ ಮಾದರಿ,ಆದರ್ಶ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಬದುಕು ,ಜೀವನ ಎಲ್ಲರಿಗೂ ದಾರಿದೀಪವಾಗಲಿ.

    -ಡಾ. ಅರುಣಪ್ರಸಾದ್

    ReplyDelete