Flash

Flash: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ: ಹತ್ತು ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 June 2014

ವಾಚನಾ ಸಪ್ತಾಹ - 2014

   
“ಓದಬೇಕು, ಓದಿ ಕಲಿಯಬೇಕು, ಆ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಅಜ್ಞಾನವು ಅಂಧಕಾರವನ್ನು ಸೂಚಿಸುತ್ತದೆ. ಆದರೆ ಅಕ್ಷರವು ಬೆಂಕಿ, ಜ್ಞಾನವು ಬೆಳಕು. ಜ್ಞಾನವು ಜಗತ್ತನ್ನು ವ್ಯಾಪಿಸಲಿ. ಬೆಳಕು ಜಗತ್ತನ್ನು ತುಂಬಿ ಶಾಂತಿ, ಸಮೃದ್ಧಿ ನೆಲೆಸಲಿ” ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಶಿಕ್ಷಕರಾದ ಕೆ.ನಾರಾಯಣ ಭಟ್, ಸಿ.ಎಚ್. ಸುಬ್ರಹ್ಮಣ್ಯ ಭಟ್, ಎಂ.ಸೂರ್ಯನಾರಾಯಣ ಮತ್ತು ಶಿಕ್ಷಕಿ ವಾಣಿ.ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನಕೃಷ್ಣ.ಸಿ.ವಿ ಮತ್ತು ಸ್ವಾಗತ ರೈ.ಕೆ ಓದುವಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ವಾಚನ ಸಪ್ತಾಹದ ಅಂಗವಾಗಿ ಜರಗಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ವಿದ್ಯಾರ್ಥಿಗಳಾದ ಕುಮಾರ ಸುಬ್ರಹ್ಮಣ್ಯ.ಎಚ್ ಸ್ವಾಗತಿಸಿ ಅಭಿಲಾಶ ಶರ್ಮಾ.ಎಂ ವಂದಿಸಿದರು. ರಾಮಕಿಶೋರ.ಎಚ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment