Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

21 June 2014

ವಿದ್ಯಾರ್ಥಿಗಳಿಗೆ ಕೊಡೆ ಕೊಡುಗೆ

   
“ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲಕರ ವಾತಾವರಣವನ್ನು ಮತ್ತು ಆರ್ಥಿಕ ಸಹಾಯವನ್ನು ಒದಗಿಸುವುದು ಪರಿಸರದ ಹಿರಿಯರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸಂಸ್ಥೆಗಳಿಗೆ ಬದ್ಧತೆ ಇರಬೇಕು, ಆ ಮೂಲಕ ಕಲಿಕಾ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವತ್ತ ಗಮನ ಹರಿಸಬೇಕು" ಎಂದು ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ದಾಮೋದರ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ ಶಾಖೆ ಮತ್ತು ದಾನಿಗಳಾದ ಉದ್ಯಮಿ ಕೆ.ಎಂ. ಅಬ್ದುಲ್ ರಹಮಾನ್, ನೀರ್ಚಾಲು ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಶಿವಶಂಕರ, ಪೆರಡಾಲ ಪ್ರಿಂಟಿಂಗ್ ಪ್ರೆಸ್ ಮಾಲಕ ನಾರಾಯಣ ಮಣಿಯಾಣಿ ಮೊಳೆಯಾರು, ಬಿ.ಕೃಷ್ಣ ಟೈಲರ್ ಉಚಿತವಾಗಿ ನೀಡಿದ ಕೊಡೆಗಳನ್ನು ವಿತರಿಸಿ ಮಾತನಾಡುತಿದ್ದರು.
    ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ ಶಾಖಾ ಪ್ರಬಂಧಕ ಚಂದ್ರಶೇಖರನ್ ನಾಯರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಪ್ರಸಾದ್ ಹೊಸಮನೆ, ವಿದ್ಯಾ.ಬಿ ಕೋಣಮ್ಮೆ , ಶಾಲಾ ಮುಖ್ಯೋಪಾಧ್ಯಾಯ ಕೆ.ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಕೆ.ನಾರಾಯಣ ಭಟ್ ಸ್ವಾಗತಿಸಿ, ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು.

No comments:

Post a Comment