19 September 2014
05 September 2014
01 September 2014
27 August 2014
ಹೈಯರ್ ಸೆಕೆಂಡರಿ ವಿಭಾಗ ಆರಂಭ
ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಮುಖ್ಯ ಅತಿಥಿಗಳಾಗಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಮಂಜುನಾಥ ಮಾನ್ಯ, ಗಂಗಾಧರ ಗೋಳಿಯಡ್ಕ, ಶೀಲಾ ಕೆ.ಎನ್. ಭಟ್, ಸಮಾಜ ಸೇವಕ ಅಬ್ದುಲ್ಲ ಮುಗು, ನೀರ್ಚಾಲು ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಂಕರ ಸ್ವಾಮಿಕೃಪಾ ಶುಭ ಹಾರೈಸಿದರು.
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿ, ಪ್ರಭಾರ ಪ್ರಾಂಶುಪಾಲ ಎಚ್.ಸೂರ್ಯನಾರಾಯಣ ವಂದಿಸಿದರು. ಶಾಲಾ ಶಿಕ್ಷಕಿ ಶೈಲಜಾ.ಬಿ ಪ್ರಾರ್ಥಿಸಿದರು. ಶಾಲಾ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಎಂ. ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.
22 August 2014
‘ಬ್ಲೆಂಡ್ - ಬ್ಲಾಗ್ ತಯಾರಿ ಮತ್ತು ತರಬೇತಿ’
ಶಾಲಾ ಹಿರಿಯ ಶಿಕ್ಷಕ ಸಿ.ಎಚ್. ವೆಂಕಟರಾಜ ಅಧ್ಯಕ್ಷತೆ
ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅನಿಲ್
ಕುಮಾರ್ ಮತ್ತು ನಮ್ಮ ಶಾಲೆಯ ರವಿಶಂಕರ ದೊಡ್ಡಮಾಣಿ
ಉಪಸ್ಥಿತರಿದ್ದರು. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಂದ್ರನ್ ಸ್ವಾಗತಿಸಿ,
ಸೂರಂಬೈಲು ಸರಕಾರಿ
ಪ್ರೌಢಶಾಲೆಯ ಶಿಕ್ಷಕ ಇಸ್ಮಾಯಿಲ್ ಕೆ.ಎಂ ವಂದಿಸಿದರು. ಕುಂಟಿಕಾನ ಅನುದಾನಿತ ಹಿರಿಯ ಪ್ರಾಥಮಿಕ
ಶಾಲಾ ಶಿಕ್ಷಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಹೈಯರ್ ಸೆಕೆಂಡರಿ - ಕನ್ನಡಕ್ಕೆ ಅನುಮತಿ
ಶತಮಾನೋತ್ಸವ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ ಆಶ್ವಾಸನೆಯಂತೆ ನೀರ್ಚಾಲು
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಗೆ
ಹೈಯರ್ ಸೆಕೆಂಡರಿ ವಿಭಾಗವನ್ನು ತೆರೆಯಲು ಅನುಮತಿ ನೀಡಿ
ಕೇರಳ ಸರಕಾರ ಆದೇಶ ಹೊರಡಿಸಿದೆ.
ಈ ಮೊದಲು ನೀಡಿದ
ಆದೇಶದಲ್ಲಿ ಸರಕಾರವು ಭಾಷಾ ಕಲಿಕೆಗಾಗಿ
ಮಲಯಾಳವನ್ನು ಸೂಚಿಸಿತ್ತು. ಆದರೆ ವಿದ್ಯಾರ್ಥಿಗಳ, ಹಿತೈಷಿಗಳ
ಮತ್ತು ಶಾಲಾ ಆಡಳಿತ ಮಂಡಳಿಯ
ಬೇಡಿಕೆಯನ್ನು ಗಮನಿಸಿ 21.08.2014 ರಂದು
ಕೇರಳ ಸರಕಾರವು ಮಲಯಾಳದ ಬದಲು
ಕನ್ನಡ ತರಗತಿಗಳನ್ನು ಆರಂಭಿಸಲು ಸೂಚಿಸಿದೆ. ಈ ಆದೇಶದ ಪ್ರಕಾರ
ಇಂಗ್ಲಿಷ್, ಕನ್ನಡ ಭಾಷೆಗಳ ಹೊರತಾಗಿ
ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನ
ಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ
(ಪಿಸಿಎಂಬಿ) ತರಗತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯಲ್ಲಿ
23.08.2014 ರಂದು ಅಪರಾಹ್ನ 4 ಗಂಟೆಯ
ಮೊದಲು ಶಾಲಾ ಕಛೇರಿಯಲ್ಲಿ ಅರ್ಜಿಗಳನ್ನು
ಸಮರ್ಪಿಸಬಹುದಾಗಿದೆ.
ಶಾಲೆಯ ಈ ಬೇಡಿಕೆಯನ್ನು
ಮನ್ನಿಸಿ ಹೈಯರ್ ಸೆಕೆಂಡರಿ ವಿಭಾಗವನ್ನು
ತೆರೆಯಲು ಮತ್ತು ಸೂಕ್ತ ಕೋರ್ಸುಗಳಿಗೆ
ಅನುಮತಿ ನೀಡಿ ಸರಕಾರವು ಆದೇಶವನ್ನು
ಹೊರಡಿಸಲು ಪ್ರಯತ್ನಿಸಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ನೆಲ್ಲಿಕುನ್ನು, ಬದಿಯಡ್ಕ ಗ್ರಾಮ ಪಂಚಾಯತು
ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ
ಪಕ್ಷಗಳ ಪ್ರತಿನಿಧಿಗಳು ಮತ್ತು ಎಲ್ಲ ಹಿತೈಷಿಗಳಿಗೆ
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕೃತಜ್ಞತೆ
ಸಲ್ಲಿಸಿದ್ದಾರೆ.
19 August 2014
17 August 2014
ಶ್ರೀಕೃಷ್ಣ ಜಯಂತಿ ಉತ್ಸವ - 2014
“ಕೃಷ್ಣ ಎಂದರೆ ಸೆಳೆತ, ಸಂಭ್ರಮ, ಸಂತೋಷ, ಆತ್ಮೀಯತೆ, ನಮ್ಮವನೆಂಬ ವ್ಯಾಮೋಹ. ಕೃಷ್ಣನ ಹೆಸರು ಅನುಪಮ ಆನಂದದ ಅನುಭವ. ಅವನ ವ್ಯಕ್ತಿತ್ವ ಅನುಪಮ, ಆದರ್ಶ. ಲೋಕಕಲ್ಯಾಣಕ್ಕಾಗಿ ಅವತಾರವೆತ್ತಿದ ಮಹಾಪುರುಷರ ಜನ್ಮದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದುಕೊಡುತ್ತದೆ” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಿರಿಯ ಪ್ರಾಥಮಿಕ ಶಾಲಾ
ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಉಪಸ್ಥಿತರಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ಉಪನಾಯಕಿ
ರಮ್ಯಾ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ,
ಪ್ರೌಢಶಾಲಾ
ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕಿ ವಾಣಿ.ಪಿ.ಎಸ್
ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ
ಅಂಗವಾಗಿ ಮೋಹನ ನೀರ್ಚಾಲು, ಗಣೇಶ್ ನೀರ್ಚಾಲು, ಮನಮೋಹನ ಸೂರಂಬೈಲು ಇವರಿಂದ ‘ಭಕ್ತಿಗಾನ ಸುಧಾ’ ಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಶಿವಾನಂದ ಮಾಯಿಪ್ಪಾಡಿ, ತಬ್ಲಾದಲ್ಲಿ ಅಚ್ಯುತಾನಂದ
ಕೂಡ್ಲು ಮತ್ತು ಮೌನೇಶ್ ನೀರ್ಚಾಲು ಸಹಕರಿಸಿದರು.
15 August 2014
11 August 2014
06 August 2014
‘ಸಾಕ್ಷರ 2014’ ಯೋಜನೆಗೆ ಚಾಲನೆ
“ಅಕ್ಷರ ಜ್ಞಾನ ಮತ್ತು ಭಾಷಾ ಜ್ಞಾನ ನಿರ್ಣಯ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ
ಬೆಳೆಯಬೇಕು. ಭವಿಷ್ಯದ ಕಡೆಗೆ ಉತ್ತಮ ನಡೆಯನ್ನು ಹಾಕಿಕೊಳ್ಳುವುದು ವಿದ್ಯಾರ್ಥಿಗಳಿಗೆ
ಅಗತ್ಯ. ಆದ್ದರಿಂದ ಸಾಕ್ಷರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು
ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಅಭಿಪ್ರಾಯಪಟ್ಟರು. ಅವರು
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಪಂಚಾಯತು ಮತ್ತು ಡಯಟ್ ಕಾಸರಗೋಡು
ಕೈಗೊಂಡಿರುವ ‘ಸಾಕ್ಷರ’ ಯೋಜನೆಯನ್ನು ಇಂದು ನಮ್ಮ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಮೀನಾಕ್ಷಿ ಎಚ್.ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರಾದ ಶಿವಕುಮಾರ ಎಚ್. ಸ್ವಾಗತಿಸಿ ಗೋವಿಂದ ಶರ್ಮ ವಂದಿಸಿದರು. ತಲೆಂಗಳ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಮತ್ತು ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಮೀನಾಕ್ಷಿ ಎಚ್.ಎನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರಾದ ಶಿವಕುಮಾರ ಎಚ್. ಸ್ವಾಗತಿಸಿ ಗೋವಿಂದ ಶರ್ಮ ವಂದಿಸಿದರು. ತಲೆಂಗಳ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
30 July 2014
ರಕ್ಷಕ ಶಿಕ್ಷಕ ಸಂಘದ ಮಹಾಸಭೆ
“ಶಾಲೆಯ ಶತಮಾನೋತ್ಸವವು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು,
ಸಭಾಭವನದ ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಈ ಸುಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ
ಹೈಯರ್ ಸೆಕೆಂಡರಿ ವಿಭಾಗವನ್ನು ಆರಂಭಿಸುವ ಕುರಿತು ಸರಕಾರದಿಂದ ಸೂಚನೆ ದೊರೆಯುವ
ನಿರೀಕ್ಷೆ ಇದೆ. ಶತಮಾನೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರೂ ಮುಂದೆಯೂ ಶಾಲೆಯ
ಪ್ರಗತಿಗೆ ಸಕ್ರಿಯ ಸಹಕಾರ ನೀಡಬೇಕು" ಎಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು 18.07.2014
ಶುಕ್ರವಾರ ನಮ್ಮ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಮಾತನಾಡುತ್ತಿದ್ದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಚಂದ್ರಿಕಾ ಮುಂಡಿತ್ತಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವರದಿ ವಾಚಿಸಿದರು. ಶಿಕ್ಷಕರಾದ ಕೆ.ನಾರಾಯಣ ಭಟ್ ಸ್ವಾಗತಿಸಿ ಸಿ.ಎಚ್.ವೆಂಕಟರಾಜ ವಂದಿಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ, ರಕ್ಷಕ ಶಿಕ್ಷಕ ಸಂಘದ ಮಾತೃ ವಿಭಾಗದ ಅಧ್ಯಕ್ಷೆ ಚಂದ್ರಿಕಾ ಮುಂಡಿತ್ತಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ಸುಬ್ರಹ್ಮಣ್ಯ ಭಟ್ ವರದಿ ವಾಚಿಸಿದರು. ಶಿಕ್ಷಕರಾದ ಕೆ.ನಾರಾಯಣ ಭಟ್ ಸ್ವಾಗತಿಸಿ ಸಿ.ಎಚ್.ವೆಂಕಟರಾಜ ವಂದಿಸಿದರು.
11 July 2014
26 June 2014
Subscribe to:
Posts (Atom)

















