
30 June 2009
ನೀರ್ಚಾಲಿನಲ್ಲಿ ವಿದ್ಯಾರಂಗ ಆರಂಭ

26 June 2009
ಶತಮಾನದ ಹೊಸ್ತಿಲಲ್ಲಿ ಸನ್ನಡತೆಯ ಸಭೆ: ಖಂಡಿಗೆ ಶಾಮ ಭಟ್

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವರದಿ ವಾಚಿಸಿದರು. ಕೆ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಹಿರಿಯ ಅಧ್ಯಾಪಕ ಎಸ್.ವಿ.ಭಟ್ ಧನ್ಯವಾದ ಸಮರ್ಪಿಸಿದರು.
24 June 2009
22 June 2009
ಕವನ-ಸೊಬಗಿನ ಪ್ರಕೃತಿ
-ಶ್ರೀವಾಣಿ.ಕೆ
ಮರಗಿಡಗಳ ತಾಯ್ನೆಲವಿದು
ಬನವನಗಳ ನಾಡು
ದಿನದಿನವೂ
ತಂಪೆರೆಯುವ ವನದೇವಿಯ ಬೀಡು
ಈ ಮಣ್ಣಿನ ಈ ನಾಡಿನ
ಹಿರಿಮೆಯದೆಂತೋ
ಈ ನಾಡಿನ ಸ್ವಾತಂತ್ರ್ಯಕೆ
ಹೋರಾಡಿದವರೆನಿತೋ
ಶ್ರೀಗಾಂಧಿಯ ಆದರ್ಶವ
ಪಾಲಿಪ ನಾಡು
ಮತಜಾತಿಯ ಮರೆತಿಹ ಇದು
ದೇವರ ಬೀಡು
ಸೌಂದರ್ಯವ ತುಂಬಿರುವ
ನದಿಹೊಳೆಗಳ ನೋಡು
ಗಿರಿಶಿಖರದ ಉನ್ನತಿಯಲಿ
ಮೆರೆಯುತಿಹುದು ಕಾಡು
ಮೃಗಪಕ್ಷಿಯ ನಲಿವಿರುವುದು
ಇದು ಪ್ರಕೃತಿಯ ಬೆಡಗು
ಮನಮೋಹಕ ಸೌಂದರ್ಯದ
ಭೂ ತಾಯಿಯ ಸೊಬಗು
ಜನಮನಗಳ ಸಮ್ಮಿಲನವು
ತರುತಿಹವು ಹರುಷವು
ಮತಭಾಷೆಯ ಮರೆತಿಹರು
ಹರುಷದಿ ಒಗ್ಗೂಡುವರು
ಪರಿಸರವೇ ನಮ್ಮುಸಿರು
ಅದರಿಂದಲೇ ನಾವು
ಸುಖವಿರುವುದು ಅದನುಳಿಸಿದರೆ
ಭಾಗಿಯಾಗೋಣ ಅದರಲಿ ನಾವು ನೀವು.
19 June 2009
12 June 2009
ರಜಾಕಾಲದ ಅನುಭವ -ಅಜೇಯಕೃಷ್ಣ. ಕೆ
ನನಗೆ ಮಾರ್ಚ್ ಇಪ್ಪತ್ತೇಳರಂದು ೯ನೇ ತರಗತಿಯ ಎಲ್ಲಾ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಯಿತು. ಎಪ್ರಿಲ್ ೨ ರಂದು ನಾನು ಸ್ಕೌಟ್ ರಾಜ್ಯಪುರಸ್ಕಾರ ಪ್ರಿಟೆಸ್ಟ್ ಶಿಬಿರದಲ್ಲಿ ಸಂತಸದಿಂದ ಭಾಗವಹಿಸಿದೆ. ನಂತರ ನಾನು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಎರಡು ತಿಂಗಳ ಕಾಲ ಜರಗಿದ ವಸಂತ ವೇದಪಾಠ ಶಿಬಿರದಲ್ಲಿ ಭಾಗವಹಿಸಿದೆ. ಅಲ್ಲಿ ಮೇ ೨೧ ರಂದು ಶಿವ ಪಂಚಾಕ್ಷರಿ ಯಜ್ಞ ನಡೆಯಿತು. ಮೇ ೨೬ ರಂದು ನನಗೆ ರಾಜ್ಯ ಪುರಸ್ಕಾರ ಪರಿಕ್ಷೆಯಲ್ಲಿ ಭಾಗವಹಿಸಲಿತ್ತು. ವೇದಪಾಠ ಮುಕ್ತಾಯವಾದ ತಕ್ಷಣ ನಾನು ಆ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದೆ. ಮೇ ೨೯ ರಂದು ಮುಕ್ತಾಯವಾದ ಆ ಪರೀಕ್ಷೆ ಬಹಳ ಸುಲಭವಾಗಿತ್ತು. ಪುನಃ ಶಾಲೆ ಆರಂಭವಾಗುವ ಸಮಯವೂ ಸನ್ನಿಹಿತವಾಯಿತು. ನಾನು ಶಾಲೆಯ ಬಾಗಿಲು ತೆರೆಯುವುದನ್ನೇ ಕಾಯಲು ಆರಂಭಿಸಿದೆ.
10 June 2009
ಡಾ| ಕಯ್ಯಾರ ಕಿಞ್ಞಣ್ಣ ರೈ - ತೊಂಭತ್ತೈದು : ಶುಭಾಶಯಗಳು

07 June 2009
ವಿಶ್ವ ಪರಿಸರ ದಿನ - ಸಸಿ ವಿತರಣೆ

05 June 2009
ಶಾಲಾರಂಭ - ಒಂದು ನೋಟ

ಶಾಲೆ ಮೊನ್ನೆ ಸೋಮವಾರ ಒಂದನೇ ತಾರೀಕು ಆರಂಭವಾಗಿದೆ, ಜೊತೆಯಲ್ಲಿ ಮಳೆಗಾಲವೂ. ಮಳೆಗೆ ಒದ್ದೆಯಾದ ದೂರವಾಣಿ ತಂತಿ ನಮ್ಮ ಬ್ರಾಡ್‌ಬ್ಯಾಂಡ್ ಲೋಕವನ್ನೆಲ್ಲ ಲಗಾಡಿ ತೆಗೆದು ಬಿಟ್ಟಿದೆ. ಅನಿವಾರ್ಯವಾಗಿ ನಮ್ಮ ಕೈಕಟ್ಟಿ ಹಾಕಿದೆ. ನಾಲ್ಕು ದಿನಗಳ ಸತತ ಪರಿಶ್ರಮದ ನಂತರ ಈ ಹಳ್ಳಿ ಮೂಲೆಯ ಶಾಲೆ ಅಂತರ್ಜಾಲಕ್ಕೆ ಮತ್ತೆ ತೆರೆದುಕೊಂಡಿದೆ. ಈಗ ಹೊಸ ಅವತಾರದೊಂದಿಗೆ ಕಂಪ್ಯೂಟರ್ ಲ್ಯಾಬ್ ಸಜ್ಜಾಗಿದೆ. ಎಲ್ಲಾ ೧೮ ಕಂಪ್ಯೂಟರ್‌ಗಳನ್ನೂ ಲ್ಯಾನ್ ಮೂಲಕ ಬಂಧಿಸಿಡುವ ಪ್ರಯತ್ನ ಮಾಡಿದ್ದೇವೆ. ಈ ಬಾರಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ಇಂಟರ್‌ನೆಟ್ ಶಿಕ್ಷಣವೂ ಇದೆ. ಈ ಮಧ್ಯೆ ಶಾಲಾ ಪ್ರವೇಶೋತ್ಸವವನ್ನು ಉಚಿತ ಪುಸ್ತಕ ವಿತರಿಸುವುದರೊಂದಿಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ದಿವಾಕರ ಮಾನ್ಯ ಇವರು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಅಬ್ಬಾಸ್ ಅವರ ಸಮ್ಮುಖದಲ್ಲಿ ಉದ್ಘಾಟಿಸಿದ್ದಾರೆ. ಫೋಟೋ ನಿಮ್ಮ ಮುಂದೆ ಇರಿಸಿದ್ದೇವೆ. ಈ ಶೈಕ್ಷಣಿಕ ವರ್ಷದ ಪ್ರತಿಭೆಗಳನ್ನು ಶೀಘ್ರ ಹೊತ್ತು ತರುತ್ತೇವೆ. ಹಿಂದೆ ನೀಡಿದಕ್ಕಿಂತಲೂ ಮಿಗಿಲಾದ ಪ್ರೋತ್ಸಾಹವನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ. ಆಗದೇ....
Subscribe to:
Posts (Atom)