Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

12 October 2011

ಗೌತಮ್ ಬಿಡಿಸಿದ ಚಿತ್ರ

ಎಂಟನೇ ತರಗತಿಯಲ್ಲಿ ಈ ಬಾರಿ ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವೂ ಆರಂಭವಾಗಿದೆ. ಮೊದಲ ತಂಡದಲ್ಲಿರುವ ಗೌತಮ್ ಚಿತ್ರ ಬಿಡಿಸುವುದರಲ್ಲಿ ತನ್ನ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳನ್ನು ಈ ಮೂಲಕ ಮತ್ತೆ ಮಾಡಿಕೊಳ್ಳುತ್ತಿದ್ದೇವೆ.

2 comments:

  1. ಮಹಾಜನ ಪ್ರೌಢಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಆರಂಭವಾಯಿತೇ? ಅಯ್ಯೋ. ಸುದ್ದಿ ತಿಳಿದು ಬೇಸರವಾಯಿತು. ಶಾಲೆ ಬಗ್ಗೆ ಅಲ್ಲ. ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣದ ಮಹತ್ವ ಅರಿಯದೆಹೋದ ನಮ್ಮ ಪಾಲಕರ ಬಗ್ಗೆ. ನೀರ್ಚಾಲು ಶಾಲೆಯಲ್ಲಿ ಕಲಿತ ನನಗೆ ಇದು ಕಹಿಸುದ್ದಿ. ಅರಗಿಸಿಕೊಳ್ಳಲಿಕ್ಕೆ ಆಗುತ್ತಾ ಇಲ್ಲ. ಒಂದು ವಿನಂತಿ: ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕನ್ನಡ ಭಾಷಾ ಅಧ್ಯಾಪಕರು ವಿಶೇಷ ಆಸಕ್ತಿಯಿಂದ ಕೆಲವು ಅವಧಿ ಕನ್ನಡಪಾಠ ಮಾಡಬೇಕು. ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕು. ಇದು ನನ್ನ ಹೃದಯದಿಂದ ನುಡಿವ ಮಾತು. ಪಾಲಕರಲ್ಲಿ ಚರ್ಚಿಸಿ ನನ್ನ ಬೇಡಿಕೆ ನೆರವೇರಿಸುವಿರಾ?

    ReplyDelete
    Replies
    1. ನಮಸ್ತೆ, ನಿಮ್ಮ ಕನ್ನಡ ಪ್ರೀತಿ ನಮಗೆ ಹೊಸ ಹುರುಪನ್ನು ನೀಡುತ್ತದೆ. ಈಗಾಗಲೇ ಕನ್ನಡ ವಾತಾವರಣದಲ್ಲಿ, ಕನ್ನಡವನ್ನೇ ದ್ವಿತೀಯ ಭಾಶೆಯನ್ನು ಓದಿಕೊಂಡು ನಮ್ಮ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಮುಂದುವರಿಯುತ್ತಿದ್ದಾರೆ. ಆಂಗ್ಲ ಮಾಧ್ಯಮ ಆರಂಭವಾಗಬೇಕೆಂಬ ಅನೇಕ ಮಂದಿ ಹೆತ್ತವರ ಒತ್ತಾಸೆ ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ದಾರಿಯಾಯಿತು, ಹೊರತು ಇನ್ನೇನಲ್ಲ. ವಿದ್ಯಾರ್ಥಿಗಳ ಕನ್ನಡ ಪ್ರೀತಿ ಒಂದಿನಿತೂ ಕಡಿಮೆಯಾಗದಂತೆ ಎಚ್ಚರವಹಿಸಿ ಅವರನ್ನು ಮುನ್ನಡೆಸುತ್ತೇವೆ. ನಿಮ್ಮ ಅಭಿಪ್ರಾಯವನ್ನು ನಮ್ಮ ಜತೆ ಹಂಚಿಕೊಂಡುದಕ್ಕೆ ಕೃತಜ್ಞತೆಗಳು.

      Delete