Flash

Flash: ಸಿದ್ಧವಾಗುತ್ತಿದೆ ತರಕಾರಿ ತೋಟ...

03 November 2017

ಸಂಸ್ಕೃತೋತ್ಸವದಲ್ಲಿ ನಮ್ಮ ಶಾಲೆ ಮೇಲುಗೈ


ನಮ್ಮ ಶಾಲೆಯಲ್ಲಿ 31.10.2017ರಂದು ಆರಂಭವಾದ ಶಾಲಾ ಕಲೋತ್ಸವದ ವಿವಿಧ ವಿಭಾಗಗಳಲ್ಲಿ ವಿವಿಧ ಶಾಲೆಗಳು ಅಂಕಗಳಿಕೆಯಲ್ಲಿ ಮುಂಚೂಣಿಯಲ್ಲಿವೆ. ಎಲ್.ಪಿ.ಜನರಲ್ ವಿಭಾಗದಲ್ಲಿ ಜಿ.ವಿ.ಎಚ್.ಎಸ್.ಎಸ್ ಕಾರಡ್ಕವು 58 ಅಂಕಗಳೊಂದಿಗೆ ಮುಂಚೂಣಿಯಲ್ಲಿದೆ. ಯು.ಪಿ.ಜನರಲ್ ವಿಭಾಗದಲ್ಲಿ 49 ಅಂಕಗಳೊಂದಿಗೆ ಸಂತ ಬಾರ್ತಲೋಮೆಯ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲು ಜನರಲ್ ವಿಭಾಗದಲ್ಲಿ 87 ಅಂಕಗಳೊಂದಿಗೆ ಜಿ.ವಿ.ಎಚ್.ಎಸ್.ಎಸ್ ಕಾರಡ್ಕವು ಪ್ರಥಮ ಸ್ಥಾನದಲ್ಲಿದೆ. ಹೈಯರ್ ಸೆಕೆಂಡರಿ ಜನರಲ್ ವಿಭಾಗದಲ್ಲಿ 118 ಅಂಕಗಳೊಂದಿಗೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನದಲ್ಲಿದೆ. ಯು.ಪಿ. ಸಂಸ್ಕೃತ ವಿಭಾಗದಲ್ಲಿ 68 ಅಂಕಗಳೊಂದಿಗೆ ಆತಿಥೇಯರಾದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂದರಿ ಶಾಲೆ, ಎ.ಯು.ಪಿ.ಎಸ್ ಏತಡ್ಕ ಮತ್ತು ಸಂತ ಬಾರ್ತಲೋಮೆಯ ಹಿರಿಯ ಪ್ರಾಥಮಿಕ ಶಾಲೆ ಸಮಾನ ಅಂಕಗಳೊಂದಿಗೆ ಮುಂಚೂಣಿಯಲ್ಲಿವೆ. ಹೈಸ್ಕೂಲು ಸಂಸ್ಕೃತ ವಿಭಾಗದಲ್ಲಿ 68 ಅಂಕಗಳೊಂದಿಗೆ ನೀರ್ಚಾಲು ಶಾಲೆ, ಎಲ್.ಪಿ.ಅರಬಿಕ್ ವಿಭಾಗದಲ್ಲಿ 23 ಅಂಕಗಳೊಂದಿಗೆ ಸೂರಂಬೈಲು ಸಿ.ಎಚ್.ಮೊಹಮ್ಮದ್ ಕೋಯ ಸ್ಮಾರಕ ಕಿರಿಯ ಪ್ರಾಥಮಿಕ ಶಾಲೆ, ಯು.ಪಿ.ಅರಬಿಕ್ ವಿಭಾಗದಲ್ಲಿ 39 ಅಂಕಗಳೊಂದಿಗೆ ಜಿ.ಯು.ಪಿ.ಎಸ್ ಪಳ್ಳಂಗೋಡು, ಹೈಸ್ಕೂಲು ಅರಬಿಕ್ ವಿಭಾಗದಲ್ಲಿ 53 ಅಂಕಗಳೊಂದಿಗೆ ಜಿ.ವಿ.ಎಚ್.ಎಸ್.ಎಸ್ ಮೊಗ್ರಾಲ್ ಶಾಲೆಗಳು ಕಲೋತ್ಸವದ ನಾಲ್ಕನೇ ದಿನದ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ಪ್ರಥಮ ಸ್ಥಾನದಲ್ಲಿವೆ. ಕಲೋತ್ಸವದ ಕೊನೆಯ ದಿನವಾದ ಶನಿವಾರ ಸಾಯಂಕಾಲ ಸಮಾರೋಪ ಸಮಾರಂಭದೊಂದಿಗೆ 58ನೇ ಕುಂಬಳೆ ಉಪಜಿಲ್ಲಾ ಕಲೋತ್ಸವಕ್ಕೆ ತೆರೆ ಬೀಳಲಿದೆ.

No comments:

Post a Comment