Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

19 January 2009

ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ, ನೀರ್ಚಾಲು


ಗಡಿನಾಡು ಕಾಸರಗೋಡಿನ ಹೆಮ್ಮೆಯ ವಿದ್ಯಾಸಂಸ್ಥೆಯಾದ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ, ನೀರ್ಚಾಲು ೧೯೧೧ರಲ್ಲಿ ಶ್ರೀ ಖಂಡಿಗೆ ಶಂಭಟ್ಟ ಮತ್ತು ಈಶ್ವರ ಭಟ್ಟರ ನೇತೃತ್ವದಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಸನ್ನಿಧಿಯಲ್ಲಿ ಸಂಸ್ಕೃತ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂದಿತು. ೧೯೧೫ರಲ್ಲಿ ನೀರ್ಚಾಲಿನ ಸುಂದರ ಪ್ರದೇಶಕ್ಕೆ ಶಾಲೆಯನ್ನು ವರ್ಗಾಯಿಸಲಾಯಿತು. ೧೯೨೦ನೇ ಇಸವಿಯಲ್ಲಿ ಮದರಾಸು ವಿಶ್ವವಿದ್ಯಾನಿಲಯವು ಮಹಾಜನ ಪಾಠಶಾಲೆಯನ್ನು ಪ್ರಾಚ್ಯಕಲಾಶಾಲೆಯನ್ನಾಗಿ ಅಂಗೀಕರಿಸಿತು. ಹಾಗೂ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ತರಗತಿ ನಡೆಸಲು ಅನುಮತಿ ನೀಡಿತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಂಸ್ಕೃತ ಪಾಠಶಾಲೆಯ ಬೆಳವಣಿಗೆಯು ಕುಂಠಿತವಾಯಿತು. ವಿದ್ಯಾಭಿಮಾನಿಗಳ ಅಪೇಕ್ಷೆಯ ಮೇರೆಗೆ ವಿಜ್ಞಾನ, ಗಣಿತ, ಆಂಗ್ಲ ಭಾಷೆಗಳಿಗೆ ಪ್ರಾಧಾನ್ಯವನ್ನು ನೀಡುತ್ತಾ ೧೯೫೨ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ತೆರೆಯಲಾಯಿತು. ಕೇರಳ ಸರಕಾರದ ಆದೇಶದಂತೆ ಸಂಸ್ಕೃತ ಪ್ರಾಥಮಿಕ ಶಾಲೆಯು ೧೯೫೭ರಲ್ಲಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾವಣೆಗೊಂಡಿತು. ಹೀಗೆ ನೀರ್ಚಾಲಿನ ವಿಶಾಲ ಪರಿಸರದಲ್ಲಿ ಒಂದರಿಂದ ಹತ್ತನೆಯ ತರಗತಿಯ ತನಕ ವಿದ್ಯಾಭ್ಯಾಸವು ಜನಸಾಮಾನ್ಯರಿಗೂ ದೊರೆಯುವಂತಾದವು. ಪ್ರಸ್ತುತ ಶ್ರೀ ಖಂಡಿಗೆ ಶಾಮ ಭಟ್ಟರು ತಾ. ೨೭.೦೮.೧೯೭೩ರಿಂದ ಸಂಸ್ಥೆಯ ವ್ಯವಸ್ಥಾಪಕರಾಗಿ ಸಕ್ರಿಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಈ ಶಾಲೆಯ ರಜತ, ಸುವರ್ಣ ಮತ್ತು ವಜ್ರ ಮಹೋತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಪ್ರಸ್ತುತ ೭೦೦ ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದಾರೆ. ಅಧ್ಯಯನಕ್ಕೆ ಅಗತ್ಯವಾದ ತರಗತಿ ಕೋಣೆಗಳು, ಆಧುನಿಕ ಶಿಕ್ಷಣ ಪದ್ಧತಿಯ ಭಾಗವಾಗಿ ಎಲ್.ಸಿ.ಡಿ. ಪ್ರೊಜೆಕ್ಟರ್ ಮತ್ತು ೧೯ ಕಂಪ್ಯೂಟರ್‌ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬನ್ನು ಸಜ್ಜುಗೊಳಿಸಲಾಗಿದೆ. ಸಂಸ್ಥೆಯಲ್ಲಿ ಸಂಸ್ಕೃತ, ಕನ್ನಡ, ಇಂಗ್ಲೀಷ್ ಇತ್ಯಾದಿ ಭಾಷಾ ಸಾಹಿತ್ಯಗಳನ್ನೊಳಗೊಂಡ ಸುಮಾರು ೧೦,೦೦೦ಕ್ಕೂ ಮಿಕ್ಕು ಪುಸ್ತಕಗಳುಳ್ಳ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ವಿಶಾಲ ಆಟದ ಮೈದಾನಗಳಿವೆ. ಹಿರಿಯ ಮಹಾನುಭಾವರಾದ ಶ್ರೀ ದರ್ಭೆ ನಾರಾಯಣ ಶಾಸ್ತ್ರಿ, ಶ್ರೀ ಚಾಂಗುಳಿ ಸುಬ್ರಾಯ ಶಾಸ್ತ್ರಿ, ಶ್ರೀ ಪೆರಡಾಲ ಕೃಷ್ಣಯ್ಯ, ಶ್ರೀ ಕಾಕುಂಜೆ ಕೃಷ್ಣ ಭಟ್ಟ ಮೊದಲಾದವರು ಇಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಭೀಷ್ಮ ಡಾ ಶೇಣಿ ಗೋಪಾಲಕೃಷ್ಣ ಭಟ್, ರಾಷ್ಟ್ರಕವಿ ಪ್ರಶಸ್ತಿ ಪುರಸ್ಕೃತರಾದ ಡಾ ಕಯ್ಯಾರ ಕಿಞ್ಞಣ್ಣ ರೈ, ತ್ರಿಭಾಷಾ ಕವಿ ಡಾ ವೆಂಕಟರಾಜ ಪುಣಿಂಚಿತ್ತಾಯ, ಸಾಹಿತಿ ಶ್ರೀ ರಾ. ಮೊ. ವಿಶ್ವಾಮಿತ್ರ, ಕವಿ ಶ್ರೀ ಕೆ. ವಿ. ತಿರುಮಲೇಶ್ ಮುಂತಾದವರು ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದಿದ್ದಾರೆ.

8 comments:

  1. ಮಹಾಜನ ಓದಿ ಖುಷಿಯಾಯಿತು. ಬ್ಲಾಗನ್ನು ಎಳೆಯರ ಬೆನ್ನು ತಟ್ಟಲು,ಸಂಸ್ಥೆ ಕಟ್ಟಿದ ಹಿರಿಯರನ್ನು ನೆನೆಯಲು ಬಳಸಿಕೊಂಡಿದ್ದೀರಿ. ಹ್ಯಾಟ್ಸ್ ಆಫ್, ರವಿ.

    ನಮ್ಮೆಲ್ಲರಿಗೂ ಪ್ರಾಂಶುಪಾಲರಾದ ಖಂಡಿಗೆ ಶ್ಯಾಮ ಭಟ್ಟರ ನಿಶ್ಕಲ್ಮಶ ನಗೆ ಅದೂ ನಿಮ್ಮ ಶಾಲಾ ಆವರಣದಲ್ಲೇ ಕ್ಲಿಕ್ಕಿಸಿದ ಫೋಟೋ ನೋಡಿ ಮನಸ್ಸು ತುಂಬಿ ಬಂತು. ಮಹಾಜನ ಇನ್ನೆಷ್ಟೋ ಎಳೆ ಪ್ರತಿಭೆ, ಕತ್ತಲೆಯ ಸದ್ವಿಚಾರಗಳಿಗೆ ಬೆಳಕು ಚೆಲ್ಲುವ ಮಹಾಕಾರ್ಯ ಮಾಡಲಿ.
    - ಶ್ರೀ ಪಡ್ರೆ

    ReplyDelete
  2. ನಿಮ್ಮ ಅಭಿಪ್ರಾಯಗಳನ್ನು ತಿಳಿದು ಸಂತೋಷವಾಯಿತು.
    - ರವಿ ದೊಡ್ಡಮಾಣಿ

    ReplyDelete
  3. Congrats Ravi..!
    When i visited your home, i saw this school. Please accept my warm wishes.
    Good Effort.
    KEEP IT UP
    - Anand Teerth Pyati
    Gulbarga

    ReplyDelete
  4. Dear Ravi
    It is nice very good. I am very happy to see that. My friend told me about this> Mr.Kabekkodu.
    s.v.prasad.
    1560 N clark Apt # 3415
    Chicago-60610
    U.S.A.
    prasad.adamad@gmail.com

    ReplyDelete
  5. I came to know about this page from my brother Mr.Shivakumar who is a teacher in this School.
    Felt happy to see my School and felt proud to see the great achievement of my niece Dhanyashree.
    Wonderful job.
    Premalatha.H.
    Kendriya Vidyalaya, No.2, AFS, Pune- 411032
    premalatha.h@gmail.com

    ReplyDelete
  6. Good Work Ravi. Congrats.

    Jayakishore

    ReplyDelete
  7. graameena parisarada ondu shaaleya putaani thaaregalu antarjaaladalli minuguvante aadaddu bahala santhoshada vichaara.

    nimma prayathna saarthaka, abhinandanaarha..

    subramanya bhat,
    jalsur

    ReplyDelete