Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

16 July 2009

ಕುಂಭ ದ್ರೋಣ ಮಳೆಗೆ ಕಹಿಬೇವಿನ ಮರ ಧರಾಶಾಯಿ...

ನೀರ್ಚಾಲಿನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಬೇರೂರಿದ್ದ, ನಮ್ಮ ಶಾಲೆಯ ಐಡೆಂಟಿಟಿಯಾಗಿದ್ದ ಸುಮಾರು ಶಾಲೆಯಷ್ಟೇ ಆಯುಸ್ಸು ಹೊಂದಿದ್ದ ಸರ್ವ ರೋಗ ನಿವಾರಕ ಕಹಿಬೇವಿನ ಮರ ನಿನ್ನೆ ಸುರಿದ ಮಳೆಗೆ ಧರಾಶಾಯಿಯಾಗಿದೆ. ನೀರ್ಚಾಲಿನ ಖ್ಯಾತ 'ಉಬ್ಬಾನ ಡಾಕ್ಟ್ರ' ಮದ್ದು ಮಾಡಿಕೊಳ್ಳುತ್ತಿದ್ದ, ಚಿಕನ್ ಪಾಕ್ಸ್ ಹಾಗೂ ಇತರ ಚರ್ಮರೋಗ ಬಾಧಿತರೆಲ್ಲ ಈ ಮರದ ಎಲೆಯನ್ನು ಅರೆದು ಮೈಗೆ ಹಚ್ಚಿಕೊಂಡವರೇ...ಶಾಲಾ ಪರಿಸರದಲ್ಲಿ ಸ್ವಚ್ಚ ವಾಯುವನ್ನು ನೀಡುತ್ತಿದ್ದ ಆ ಮರ ನಮ್ಮ ನಡುವೆ ಮೌನವನ್ನು ಉಳಿಸಿ ಹೋಗಿದೆ. ಇನ್ನು ಊರವರೆಲ್ಲ ಕಹಿಬೇವಿನ ಗಿಡಕ್ಕಾಗಿ ಎಲ್ಲಿ ಅಲೆದಾಡುವುದೋ... ಎಂದು ದಾರಿ ತೋರಿಸದೆ....

5 comments:

  1. ಮತ್ತೆ ಅದೇ ಮರವನ್ನು ಎತ್ತಿ ನಿಲ್ಲಿಸಿ. ಅದು ಬದುಕಿ ಕೊಳ್ಳುತ್ತದೆ. ದಯವಿಟ್ಟು ಕಡಿಯಬೇಡಿ.

    ReplyDelete
  2. ನಿಜ, ನಾವು ಅದೇ ಪ್ರಯತ್ನದಲ್ಲಿದ್ದೇವೆ. ನಿಮ್ಮ ಸಲಹೆಗೆ ಧನ್ಯವಾದಗಳು.

    ReplyDelete
  3. ನಿಮ್ಮ ಸೈಟಿನಲ್ಲಿ ಹಲವಾರು ಮಾಹಿತಿಗಳಿವೆ ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ನಾನು ಕನ್ನಡವನ್ನು install ಮಾಡಿದ್ದೇನೆ. ಆದರೆ ಕೆಲವೊಂದು ಅಕ್ಷರಗಳು ತಪ್ಪಾಗಿ ಬರುತ್ತವೆ. ಏನಾದರೂ ನಿಮ್ಮ ಪ್ರಯತ್ನವನ್ನು ಮುಂದುವರಿಸಿ.....ಶುಭಾಶಯಗಳೊಂದಿಗೆ.
    ಅಗಸ್ಟಿನ್ ಬರ್ನಾಡ್

    ReplyDelete
  4. ನೀವು ನೇರವಾಗಿ ಲಿನಕ್ಸಿನಲ್ಲಿ ಟೈಪು ಮಾಡಲು ಪ್ರಯತ್ನಿಸಿ.

    ReplyDelete
  5. ನಿಮ್ಮ ಸಲಹೆಗಳಿಗೆ ಸ್ವಾಗತ. ಕನ್ನಡವನ್ನು ಲಿನಕ್ಸಿನಲ್ಲೂ ಓದುವಂತೆ ಮಾಡುವುದು ನಮ್ಮ ಮುಂದಿನ ಪ್ರಯತ್ನ. ಈ ನಿಟ್ಟಿನಲ್ಲಿ ನಿಮ್ಮ ಸಹಕಾರ ಅತೀ ಅಗತ್ಯ.

    ReplyDelete