Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 January 2010

ಕಥೆ - ಮೂರ್ಖರು

-ರೇಣುಕಾ. ಎ
ಒಂದು ದಿನ ಓರ್ವ ವ್ಯಾಪಾರಿಯು ಪೇಟೆಯಲ್ಲಿಳಿದು ಸಾಮಾನುಗಳನ್ನು ಕೊಂಡು ಆ ವಸ್ತುಗಳನ್ನೆಲ್ಲ ತನ್ನ ಹಳ್ಳಿಗೆ ಸಾಗಿಸಲು ಒಂದು ಕತ್ತೆಯನ್ನು ಬಾಡಿಗೆ ಹಿಡಿದು ಅದರ ಮೇಲೆ ತಾನು ಕೊಂಡ ಸಾಮಾನುಗಳನ್ನು ಹೇರಿದನು. ಕತ್ತೆಯ ಒದೆಯನು ಆ ಕತ್ತೆಯನ್ನು ಹೊಡೆದುಕೊಂಡು ನಡೆದನು. ವ್ಯಾಪಾರಿಯು ಕತ್ತೆಯೊಂದಿಗೇ ನಡೆದಿದ್ದನು. ಮಾರ್ಗ ಮಧ್ಯದಲ್ಲಿ ಅಸಾಧ್ಯವಾದ ಬಿಸಿಲು ಕಾಯುತ್ತಿತ್ತು. ವ್ಯಾಪಾರಿಗೆ ದಣಿವು ಆಗಿ ಆತನು ವಿಶ್ರಾಂತಿ ಪಡೆದುಕೊಳ್ಳಲು ಸುತ್ತಲೂ ನೋಡಿದನು. ಆದರೆ ಅಲ್ಲಿ ಎಲ್ಲಿಯೂ ಆತನಿಗೆ ಗಿಡಗಳೇ ಕಾಣಲಿಲ್ಲ. ಆಗ ಆ ವ್ಯಾಪಾರಿಯು ಕತ್ತೆಯನ್ನು ನಿಲ್ಲಿಸಿ ಅದರ ಕೆಳಗಿದ್ದ ನೆರಳಲ್ಲಿ ಕುಳಿತನು. ಕತ್ತೆಯ ಒಡೆಯನಿಗೂ ಬಿಸಿಲಿನ ತಾಪದಿಂದಾಗಿ ನೆರಳು ಬೇಕಾಗಿತ್ತು. ಹಾಗಾಗಿ ಅವನೂ ಆ ಕತ್ತೆಯ ನೆರಳಿನಲ್ಲಿ ಕುಳಿತುಕೊಳ್ಳಲು ಮುಂದಾದನು. ಆಗ ವ್ಯಾಪಾರಿಯು ಕತ್ತೆಯನ್ನು ನಾನು ಬಾಡಿಗೆ ಪಡೆದುಕೊಂಡಿರುವುದರಿಂದ ಅದರ ನೆರಳಿನಲ್ಲಿ ಕುಳಿತುಕೊಳ್ಳಲು ನಾನು ಮಾತ್ರ ಅರ್ಹ ಎಂದು ಕತ್ತೆಯ ಯಜಮಾನನನ್ನು ಗದರಿಸಿದನು. ಕತ್ತೆಯನ್ನು ಬಾಡಿಗೆಗೆ ಹಿಡಿದ ಮಾತ್ರಕ್ಕೆ ಕತ್ತೆಯ ನೆರಳು ನಿನ್ನದಲ್ಲ, ದೂರ ಸರಿ ಇಲ್ಲಿಂದ ಎಂದನು. ಹೀಗೆ ಇವರಿಬ್ಬರ ಮಧ್ಯೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿತು. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕತ್ತೆ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲ್ಕಿತ್ತಿತು. ಕತ್ತೆಯ ಒಡೆಯ ಮತ್ತು ವ್ಯಾಪಾರಿ ಬೆಪ್ಪರಾಗಿ ಕುಳಿತರು.

1 comment: