Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

05 March 2009

ಕಥೆ ೦೩ - ತಪ್ಪಿನ ಅರಿವು

- ಶ್ಯಾಮಲಾ. ಪಿ
ಒಂದು ಹಳ್ಳಿಯಲ್ಲಿ ರಾಮು ಎಂಬ ಹುಡುಗನಿದ್ದನು. ಅವನ ತಂದೆ ಆ ಹಳ್ಳಿಯ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಹಳ್ಳಿ ಶಾಲೆಗೆ ಹೋಗುತ್ತಿದ್ದ ರಾಮುವನ್ನು ಅವನ ತಾಯಿ ಸದಾ ಪ್ರೋತ್ಸಾಹಿಸುತ್ತಿದ್ದರು. ಅವನಿಗೆ ಒಂದು ಪತ್ರಿಕೆಯ ಮೂಲಕ ಪಟ್ಟಣದ ಆಧುನಿಕ ಜೀವನದ ಬಗ್ಗೆ ತಿಳಿಯಿತು. ಅವನಿಗೆ ಅಲ್ಲಿಗೆ ಹೋಗಬೇಕೆಂದಾಯಿತು. ಯಾರಲ್ಲೂ ತಿಳಿಸದೆ ಒಂದು ರಾತ್ರಿ ಸ್ವಲ್ಪ ದುಡ್ಡು ಎತ್ತಿಕೊಂಡು ರಾಮು ಮನೆಯಿಂದ ಓಡಿಹೋದನು. ಬಸ್ಸಿಳಿದು ಪೇಟೆಯಲ್ಲಿ ನಡೆಯುತ್ತಿದ್ದಾಗ ಕಳ್ಳರು ಅವನ ಕೈಯಲ್ಲಿದ್ದ ದುಡ್ಡನ್ನು ದೋಚಿಕೊಂಡರು. ಅವನಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. ಊಟತಿಂಡಿಗೂ ಪರದಾಡಬೇಕಾಗಿ ಬಂತು. ತನ್ನ ತಪ್ಪಿನ ಅರಿವಾಗಿ ಆತನ ಕಣ್ಣಿನಲ್ಲಿ ಬೇಸರದ ಹನಿಗಳು ಜಿನುಗಿದವು.

No comments:

Post a Comment