
ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ಅನುಪಮ ಪಿ.ಎಸ್. ಪ್ರತಿಭಾನ್ವಿತ ಹುಡುಗಿ. ಭರತನಾಟ್ಯದಲ್ಲಿ ಸೀನಿಯರ್ ಪದವಿ, ಮಹಾಭಾರತ ಪರೀಕ್ಷೆಯಲ್ಲಿ ೯೨% ಅಂಕ, ಸುಗಮ ಹಿಂದೀ ಪರೀಕ್ಷೆಯಲ್ಲಿ ೯೪% ಅಂಕ ಅವಳ ಪ್ರತಿಭೆಯ ಕೈಗನ್ನಡಿ. ಕೇರಳ ರಾಜ್ಯ ಸರಕಾರದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸಲ್ಪಟ್ಟ ಪ್ರಬಂಧ ಸ್ಪರ್ಧೆಯಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಉಪಜಿಲ್ಲಾ ಮಟ್ಟದ ಕಲೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಯಲ್ಲಿ ಭರತನಾಟ್ಯ, ಮೋಹಿನಿಯಾಟ್ಟಂಗಳಲ್ಲಿ ಪ್ರಥಮ ಬಹುಮಾನ, ಇಂಗ್ಲೀಷ್ ಪ್ರಬಂಧದಲ್ಲಿ ದ್ವಿತೀಯ ಸ್ಥಾನ ಅವಳ ಪ್ರತಿಭೆಯನ್ನು ಹೊರಹೊಮ್ಮಿಸಿವೆ. ವಿದ್ಯಾರಂಗಂ ಆಶ್ರಯದಲ್ಲಿ ಜರಗಿದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೇರಳ ರಾಜ್ಯ ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸುವ ‘ದ ಎಕ್ಸಲೆನ್ಸ್ ಪ್ರೊಮೋಷನ್ ಓಫ್ ಗಿಫ್ಟೆಡ್ ಚಿಲ್ಡ್ರನ್’ ಪ್ರತ್ಯೇಕ ತರಗತಿಗಳಿಗೆ ಕಳೆದ ಮೂರು ವರ್ಷಗಳಿಂದ ಹಾಜರಾಗುತ್ತಿದ್ದಾಳೆ. ಹಿರಿಯ ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ಅವರ ಬಳಿ ಸಂಗೀತ ಮತ್ತು ‘ನಾಟ್ಯನಿಲಯಂ’ ಬಾಲಕೃಷ್ಣ ಮಂಜೇಶ್ವರ ಇವರಿಂದ ನೃತ್ಯ ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ. ಓದಿನಲ್ಲೂ ಮುಂದಿದ್ದಾಳೆ. ಈಕೆ ಕಲ್ಲಕಟ್ಟ ಎಂ.ಎ.ಯು.ಪಿ. ಶಾಲೆಯ ಅಧ್ಯಾಪಕ ದಂಪತಿ ಶಿವರಾಮ ಪಿ.ವಿ ಮತ್ತು ಜಯಲಕ್ಷ್ಮಿ.ಸಿ.ಎಚ್ ಇವರ ಪುತ್ರಿ. ‘ಮಹಾಜನ’ದಲ್ಲಿ ಅನುಪಮಾ ಬರೆದ ಪ್ರಬಂಧಗಳನ್ನು ಎದುರು ನೋಡುತ್ತಿದ್ದೇವೆ.
Well done, Anupama!
ReplyDeleteBest wishes to all the students taking up the SSLC exams.
Anupama bagge nanage vaiyaktikavaaguu gottu. Pratibhaanvita hudugi avalu. All the best anupama, keep it up.
ReplyDelete