
ಮಲಯಾಳ ಮನೋರಮಾದ ಕಣ್ಣೂರು ಮತ್ತು ಮಂಗಳೂರು ಆವೃತ್ತಿಗಳಲ್ಲಿ ನಮ್ಮ ಶಾಲೆಯ ಬ್ಲಾಗ್ ಬಗ್ಗೆ ಪ್ರಶಂಸಾತ್ಮಕ ವರದಿ ಪ್ರಕಟವಾಗಿದೆ. ಕಾಸರಗೋಡಿನ ಮಲಯಾಳ ಮನೋರಮಾ ಕಛೇರಿಯ ‘ಬ್ಯೂರೋ ಚೀಫ್’ ಸಿಬಿ ಜೋನ್ ಪ್ರತೇಕ ಆಸ್ಥೆ ವಹಿಸಿ ಬರೆದ ವರದಿ ಇದು. ಇಂದು ಮಧ್ಯಾನ ನಂತರ ‘ಮನೋರಮಾ ನ್ಯೂಸ್’ ಚಾನೆಲ್‌ನ ವರದಿಗಾರರು ಬರುತ್ತಿದ್ದಾರೆ. ಅವರಿಗಾಗಿ ತಯಾರಾಗಬೇಕಿದೆ. ಕೇರಳದಲ್ಲಿರುವ ಕನ್ನಡ ಶಾಲೆಯ ಕನ್ನಡ ಮಕ್ಕಳ ಬ್ಲಾಗಿಗೆ ಮಲಯಾಳದ ಮಾಧ್ಯಮದಿಂದ ಬರುತ್ತಿರುವ ಪ್ರಶಂಸೆ ಇದು ಎಂಬುದು ಗಮನಾರ್ಹ ಅಂಶ.
No comments:
Post a Comment