
ನಮ್ಮ ಶಾಲಾ ಹಳೆವಿದ್ಯಾರ್ಥಿ, ಕಾಸರಗೋಡಿನ ‘ಕಾರವಲ್’ ಸಂಜೆ ದೈನಿಕದ ಸುದ್ದಿ ಸಂಪಾದಕ ಎಂ. ನಾರಾಯಣ ಚಂಬಲ್ತಿಮಾರ್ ಪುಸ್ತಕವೊಂದನ್ನು ಹೊಸೆದಿದ್ದಾರೆ. ಕೈರಳಿ ಪ್ರಕಾಶನ ಹೊರತಂದಿರುವ ‘ಚಂದ್ರಗಿರಿಯ ದಡದಿಂದ...’ ಎಂಬ ಈ ಪುಸ್ತಕವನ್ನು ಮುಂಬೈಯಲ್ಲಿ ಜರಗಿದ ಕಾಸರಗೋಡು ಉತ್ಸವದಲ್ಲಿ ಬಿಡುಗಡೆ ಮಾಡಿ ಬಂದಿದ್ದಾರೆ. ಊರ ಮಂದಿಯ ಭಾಗವಿಸುವಿಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕ ಮತ್ತು ಅನಂತಪುರದ ಪ್ರಕೃತಿ ಯುವ ತಂಡ ಜಂಟಿಯಾಗಿ ಮಾತಿನ ಮಂಟಪವನ್ನು ಮೊನ್ನೆ ಅನಂತಪುರದಲ್ಲಿ ಕಟ್ಟಿದ್ದವು. ಪುಸ್ತಕ ಚೆನ್ನಾಗಿದೆ. ಚಂಬಲ್ತಿಮಾರ್ ಅವರಿಗೆ ಶುಭಾಶಯಗಳು.
ನಾರಾಯಣ ಚಂಬಲ್ತಿಮಾರ್ ಅವರ ಹಲವಾರು ಲೇಖನಗಳನ್ನು ಓದಿದ್ದೆ. ಅವರು ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಎಂದು ತಿಳಿದಾಗ ಖುಷಿಯಾಯಿತು. "ಗಡಿನಾಡ ದಡದಿಂದ " ಪುಸ್ತಕವನ್ನು ನಿರೀಕ್ಷಿಸುತ್ತಿದ್ದೇನೆ. ಧನ್ಯವಾದಗಳು.
ReplyDelete