Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 March 2009

ಕಥೆ ೦೬ - ಪಶ್ಚಾತ್ತಾಪಪಟ್ಟ ರವಿ

-ಲತಾಶಂಕರಿ. ಕೆ.ಎ
ಒಂದೂರಿನಲ್ಲಿ ರಾಮಣ್ಣ ಎಂಬ ರೈತನೊಬ್ಬನು ಅವನ ಪತ್ನಿ ಸೀತಕ್ಕನೊಂದಿಗೆ ಬಹಳ ಸುಖ ಸಂತೋಷಗಳೊಂದಿಗೆ ಜೀವಿಸುತ್ತಿದ್ದನು. ರವಿಯು ಅವರ ಒಬ್ಬನೇ ಮಗನಾಗಿದ್ದನು. ಆದುದರಿಂದ ತಂದೆ-ತಾಯಿ ಅವನನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಿದ್ದರು, ಶಾಲೆಗೂ ಸೇರಿಸಿದರು. ಅವನು ಕಲಿತು ದೊಡ್ಡವನಾದನು. ಒಂದು ದಿನ ರವಿಯು ಯಾರಿಗೂ ತಿಳಿಯದಂತೆ ಮನೆಯಿಂದ ೫೦ ರೂ. ತೆಗೆದುಕೊಂಡನು. ಹೇಗೋ ವಿಷಯ ತಿಳಿದ ತಂದೆಗೆ ತುಂಬಾ ಸಿಟ್ಟು ಬಂತು. ಅವರು ಮಗನನ್ನು ಬೈದರು. ಇದರಿಂದ ಬೇಸರಪಟ್ಟುಕೊಂಡ ರವಿ ಮನೆ ಬಿಟ್ಟು ಹೋದನು. ಬೇರೆ ಕಡೆ ಮನೆ ಕಟ್ಟಿ ಲಕ್ಷ್ಮಿ ಎಂಬವಳನ್ನು ಮದುವೆಯಾಗಿ ಹುಟ್ಟಿದ ಮಗನಿಗೆ ರಾಜು ಎಂದು ಹೆಸರಿಟ್ಟನು. ಶಾಲೆಗೆ ಹೋಗುತ್ತಿದ್ದ ರಾಜು ಒಂದು ದಿನ ಮನೆಯಿಂದಲೇ ೧೦ ರೂ. ಕದ್ದು ಅಪ್ಪನ ಕೈಗೆ ಸಿಕ್ಕಿಬಿದ್ದನು. ಬೇಸರ ಪಟ್ಟುಕೊಂಡ ರಾಜುವೂ ಮನೆಬಿಟ್ಟು ಹೊರಟುಹೋದನು. ರವಿಗೆ ಹಳೆಯ ಕಥೆಗಳೆಲ್ಲ ನೆನಪಾದವು. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟುಕೊಂಡನು.

2 comments:

  1. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಧನ್ಯವಾದಗಳು... ಮಕ್ಕಳೇ ಶಹಬಾಸ್....

    ReplyDelete
  2. ಆತ್ಮೀಯ ರವಿಶಂಕರ್ ,
    ನಮಸ್ತೆ. ತುಂಬಾ ಚೆನ್ನಾಗಿ ನಿಮ್ಮ ಬ್ಲಾಗ್ ಹೊರಬರುತ್ತಿದೆ.ಸಂತೋಷವಾಯಿತು. ನಿಜವಾಗಿಯೂ ಇಂದಿನ ಆಧುನಿಕ ಯುಗಕ್ಕೆ, ಅದರಲ್ಲೂ ಕ್ರಾಂತಿಕಾರಿ ಬೆಳವಣಿಗೆ ಪಡೆಯುತ್ತಿರುವ ಮಾದ್ಯಮ ಜಗತ್ತಿಗೆ ಇಂತಹ ಅತ್ಯಾಧುನಿಕ ಮಾದ್ಯಮ ವ್ಯವಸ್ಥೆಯ ಅವಶ್ಯಕತೆಯಿದೆ. ವಿದ್ಯಾರ್ಥಿ ಬಳಗಕ್ಕೆ ಆರಂಭದಲ್ಲೇ ಒಂದು ಹೊಸ ಕಲ್ಪನೆಯನ್ನು ಭಿತ್ತಿದ ನಿಮ್ಮ ಶ್ರಮ ಸಾರ್ಥಕ. ಧನ್ಯವಾದಗಳು. ನಮ್ಮ ಗೋವಿಂದ ದಾಸ ಕಾಲೇಜಿನಲ್ಲೂ ಸುಮಾರು ಐದಾರು ತಿಂಗಳ ಹಿಂದೆ ಈ ರೀತಿಯ ಪ್ರಯತ್ನವೊಂದನ್ನು ನಾವು ಮಾಡಿದ್ದೇವೆ. www.hongiran.blogspot.com ಎಂಬ ಬ್ಲಾಗ್ ಒಂದನ್ನು ಆರಂಭಿಸಿದ್ದೇವೆ. ಸಾಧ್ಯವಾದರೆ ನೋಡಿ. ಅಭಿಪ್ರಾಯ ತಿಳಿಸಿ. ನಿಮ್ಮ ವಿದ್ಯಾರ್ಥಿ ಸಮೂಹದ ಬರಹಗಳನ್ನು ನಮ್ಮ ಇ-ಪತ್ರಿಕೆ www.ekanasu.com ಗೆ ಕಳುಹಿಸಿ. ವಿದ್ಯಾರ್ಥಿಗಳಿಗೇ ಇರುವಂತಹ ಕಾರಿಡಾರ್ ಪುಟದ ಲ್ಲಿ ಪ್ರಕಟಿಸೋಣ.
    ಇಂತು ವಂದನೆಗಳು,
    ಶುಭವಾಗಲಿ,
    ಪ್ರೀತಿಯಿಂದ
    ಹರೀಶ್ ಕೆ.ಆದೂರು
    ಸಂಪಾದಕ
    ಈ ಕನಸು .

    ReplyDelete